೧೧
ದೇವರ ಇಬ್ಬರು ಸಾಕ್ಷಿಗಳು
೧ ತರುವಾಯ * ಜೆಕ. 2:1, 2; ಯೆಹೆ. 40. 3:5; ಪ್ರಕ. 21:15, 16:ಅಳತೆಗೊಲಿನಂಥ ಒಂದು ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು, ನೀನೆದ್ದು ದೇವರ ಆಲಯವನ್ನೂ ಯಜ್ಞವೇದಿಯನ್ನೂ ಅಳತೆಮಾಡಿ ಆಲಯದಲ್ಲಿ ಆರಾಧನೆಮಾಡುವವರನ್ನು ಎಣಿಕೆಮಾಡು. ೨  ಯೆಹೆ. 40. 17, 20:ಆಲಯದ ಹೊರಗಿರುವ ಹೊರಾಂಗಣವನ್ನು ಅಳೆಯದೆ ಬಿಟ್ಟುಬಿಡು, ಲೂಕ. 21:24:ಅದು ಅನ್ಯಜನರಿಗಾಗಿ ಕೊಡಲ್ಪಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು § ಪ್ರಕ. 12:6; 13:5:ನಲವತ್ತೆರಡು ತಿಂಗಳು ತುಳಿದಾಡುವರು. ೩ ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು * ಯೆಶಾ. 20:2:ಗೋಣಿತಟ್ಟುಗಳನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು. ೪ ಭೂಲೋಕದ ಒಡೆಯನ ಮುಂದೆ ನಿಂತಿರುವ ಜೆಕ. 4:3, 11, 14:ಎರಡು ಎಣ್ಣೆಯ ಮರಗಳೂ ಮತ್ತು ಎರಡು ದೀಪ ಸ್ತಂಭಗಳೂ ಇವರೇ. ೫ ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬೇಕೆಂದಿದ್ದರೆ 2 ಅರಸು. 1:10, 12; ಯೆರೆ. 5:14:ಇವರ ಬಾಯೊಳಗಿಂದ ಬೆಂಕಿಯು ಹೊರಟು ಇವರ ಶತ್ರುಗಳನ್ನು ದಹಿಸಿಬಿಡುವುದು. ಇವರಿಗೆ ಕೇಡನ್ನು § ಅರಣ್ಯ. 16:29, 35:ಉಂಟುಮಾಡಬಯಸುವವರಿಗೆ ಆ ರೀತಿಯಾಗಿ ಹತರಾಗಬೇಕು. ೬  * ಅರಣ್ಯ. 17:1; ಲೂಕ. 4:25; ಯಾಕೋಬ. 5:17:ಅವರು ಪ್ರವಾದಿಸುವ ದಿನಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಅವರಿಗೆ ಇರುವುದು. ಇದಲ್ಲದೆ ಅವರಿಗೆ ಇಷ್ಟಬಂದಾಗೆಲ್ಲಾ ವಿಮೋ. 7:19:ನೀರು ರಕ್ತವಾಗುವಂತೆ ಮಾಡುವುದಕ್ಕೂ ವಿಮೋ. 7-10; 1 ಸಮು. 4:8:ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಹಿಂಸಿಸುವುದಕ್ಕೂ ಅಧಿಕಾರವುಂಟು.
೭ ಅವರು ತಮ್ಮ ಸಾಕ್ಷಿಗಳನ್ನು ಹೇಳಿ ಮುಗಿಸಿದ ನಂತರ, § ಪ್ರಕ. 9:1:ಅಧೋಲೋಕದಿಂದ ಬರುವ * ಪ್ರಕ. 17:8; ಪ್ರಕ. 13:1:ಮೃಗವು ದಾನಿ. 7:21:ಇವರ ಮೇಲೆ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವುದು. ೮ ಈ ಸಾಕ್ಷಿಗಳ ಶವಗಳು ಪ್ರಕ. 16:19; 17:18; 18:10:ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಕ್ಕೆ ಸಾಂಕೇತಿಕವಾಗಿ § ಯೆಶಾ. 1:9, 10; 3:9:ಸೊದೋಮ್ ಎಂದು, * ಯೆಹೆ. 23:3, 8, 19:27:ಐಗುಪ್ತ ಎಂದೂ ಹೆಸರುಗಳುಂಟು. ಇವರ ಒಡೆಯನು ಸಹ ಅಲ್ಲಿಯೇ ಶಿಲುಬೆಗೆ ಹಾಕಲ್ಪಟ್ಟಿದ್ದನು. ೯ ಸಕಲ ಜನ, ಕುಲ, ಭಾಷೆ, ಜನಾಂಗಗಳಿಗೆ ಸೇರಿದವರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳವರೆಗೂ ನೋಡುವರು ಮತ್ತು ಅವರ ಕೀರ್ತ. 79:2, 3:ಶವಗಳನ್ನು ಸಮಾಧಿಯಲ್ಲಿ ಇಡಗೊಡಿಸುವುದಿಲ್ಲ. ೧೦ ಈ ಇಬ್ಬರು ಪ್ರವಾದಿಗಳು ಪ್ರಕ. 11:5, 6; 1 ಅರಸು. 18:17:ಭೂನಿವಾಸಿಗಳನ್ನು ಹಿಂಸಿಸಿದ್ದರಿಂದ ಇವರು ಸತ್ತದ್ದಕ್ಕೆ ಭೂನಿವಾಸಿಗಳು § ಯೋಹಾ. 16:20; ಪ್ರಕ. 3:10:ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು. ೧೧ ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಶ್ವಾಸವು ಬಂದು ಆ ಶವಗಳಲ್ಲಿ ಪ್ರವೇಶಿಸಲು, * ಆದಿ. 2:7; ಯೆಹೆ. 37:5, 9, 10, 14:ಅವರು ಕಾಲೂರಿ ನಿಲ್ಲುವರು. ಅವರನ್ನು ನೋಡಿದವರೆಲ್ಲರೂ ಭಯದಿಂದ ನಡುಗಿದರು. ೧೨ ಅನಂತರ ಅವರಿಗೆ, ಪ್ರಕ. 4:1:ಇಲ್ಲಿ ಮೇಲಕ್ಕೆ ಏರಿ ಬನ್ನಿರಿ! ಎಂದು ಆಕಾಶದಿಂದ ಮಹಾ ವಾಣಿಯು ತಿಳಿಸಿತು. ಅದನ್ನು ಕೇಳಿ ಅವರು ಅ. ಕೃ. 1:9; 1 ಥೆಸ. 4:17:ಮೇಘದಲ್ಲಿ § ಪ್ರಕ. 12:5; 2 ಅರಸು. 2:11:ಪರಲೋಕಕ್ಕೆ ಏರಿಹೋದರು. ಅವರ ಶತ್ರುಗಳು ಅವರನ್ನು ನೋಡುತ್ತಾ ಇದ್ದರು. ೧೩ ಅದೇ ಗಳಿಗೆಯಲ್ಲಿ * ಪ್ರಕ. 6:12:ಮಹಾ ಭೂಕಂಪವುಂಟಾಗಿ ಪ್ರಕ. 16:19:ಆ ಪಟ್ಟಣದ ಹತ್ತರಲ್ಲೊಂದಂಶವು ಬಿದ್ದುಹೋಯಿತು. ಆ ಭೂಕಂಪದಿಂದ ಏಳು ಸಾವಿರ ಮಂದಿ ಸತ್ತು ಹೋದರು. ಉಳಿದವರು ಭಯಗ್ರಸ್ತರಾಗಿ 2 ಪೂರ್ವ. 36:23; ಯೋನ. 1:9:ಪರಲೋಕದ ದೇವರನ್ನು § ಯೆಹೋ. 7:19; ಪ್ರಕ. 14:7; 16:9, 19:7:ಘನಪಡಿಸಿದರು.
೧೪  * ಪ್ರಕ. 8:13; 9:12:ಎರಡನೆಯ ವಿಪತ್ತು ಕಳೆದುಹೋಯಿತು. ಇಗೋ, ಮೂರನೆಯ ವಿಪತ್ತು ಬೇಗನೆ ಬರುತ್ತಿದೆ.
ಪ್ರಕ. 10:7:ಏಳನೆಯ ತುತ್ತೂರಿ
೧೫ ಏಳನೆಯ ದೇವದೂತನು ತುತ್ತೂರಿಯನ್ನೂದಿದನು. ಆಗ ಪರಲೋಕದಲ್ಲಿ ಪ್ರಕ. 16:17; 19:1:ಮಹಾಶಬ್ದಗಳುಂಟಾಗಿ, § ಪ್ರಕ. 12:10:ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ * ಕೀರ್ತ. 2:2; ಲೂಕ. 9:20; ಅ. ಕೃ. 4:26:ಆತನ ಕ್ರಿಸ್ತನಿಗೂ ಬಂದಿದೆ, ದಾನಿ. 2:44; 7:14, 18, 27; ಲೂಕ. 1:33; ಇಬ್ರಿ. 1:8; ಯೋಹಾ. 12:34:ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು ಎಂಬ ಮಹಾಘೋಷಣೆಯಾಯಿತು.
೧೬ ತರುವಾಯ ಪ್ರಕ. 4:4:ದೇವರ ಸಮಕ್ಷಮದಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಆತನಿಗೆ § ಪ್ರಕ. 4:10:ಅಡ್ಡಬಿದ್ದು,
೧೭ ಕರ್ತನೇ, ಸರ್ವಶಕ್ತನಾದ ದೇವರೇ, * ಮೂಲ. ಇರುವಾತನೇ, ಇದ್ದಾತನೇ. ಪ್ರಕ. 16:5; ಪ್ರಕ. 1:4, 8; 4:8:ಇರುವಾತನೂ ಇದ್ದಾತನೂ,
ಕೀರ್ತ. 97:1; ಪ್ರಕ. 19:6:ನೀನು ನಿನ್ನ ಮಹಾ ಅಧಿಕಾರವನ್ನು ವಹಿಸಿಕೊಂಡು ಆಳುತ್ತಿರುವುದರಿಂದ
ನಾವು ನಿನಗೆ ಕೃತಜ್ಞತಾಸುತ್ತಿ ಸಲ್ಲಿಸುತ್ತೇವೆ.
೧೮ ಜನಾಂಗಗಳು ಕೋಪಿಸಿಕೊಂಡವು.
ಕೀರ್ತ. 2:5; 110:5:ನಿನ್ನ ಕೋಪವೂ ಪ್ರಕಟವಾಯಿತು.
§ ಪ್ರಕ. 6:10; 20:12; ದಾನಿ. 7:10; 2 ಥೆಸ. 1:6, 7:ಸತ್ತವರು ತೀರ್ಪುಹೊಂದುವ ಸಮಯವು ಬಂದಿದೆ.
ನೀನು ನಿನ್ನ ದಾಸರಾದ ಪ್ರವಾದಿಗಳಿಗೂ, ದೇವಜನರಿಗೂ,
* ಪ್ರಕ. 19:5:ನಿನ್ನ ನಾಮಕ್ಕೆ ಭಯಪಡುವ ಹಿರಿಯರೂ ಕಿರಿಯರೂ ಆಗಿರುವ
ನಿನ್ನ ಭಕ್ತರಿಗೆ ಪ್ರತಿಫಲವನ್ನು ಕೊಡುವುದಕ್ಕೂ ಪ್ರಕ. 13:10:ಲೋಕನಾಶಕರನ್ನು ವಿನಾಶಗೊಳಿಸುವ ಕಾಲವು ಬಂದಿದೆ
ಎಂದು ಆತನನ್ನು ಆರಾಧಿಸಿದರು.
೧೯  ಪ್ರಕ. 15:5:ಆಗ ಪರಲೋಕದಲ್ಲಿರುವ ದೇವಾಲಯವು ತೆರೆಯಿತು. § ಇಬ್ರಿ. 9:4:ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ, ಗರ್ಜನೆ, ಗುಡುಗು, ಮಿಂಚುಗಳು, ಭೂಕಂಪವು, * ಪ್ರಕ. 16:21:ದೊಡ್ಡ ಆಲಿಕಲ್ಲಿನ ಮಳೆಯೂ ಸುರಿಯಿತು.

*೧೧:೧ ಜೆಕ. 2:1, 2; ಯೆಹೆ. 40. 3:5; ಪ್ರಕ. 21:15, 16:

೧೧:೨ ಯೆಹೆ. 40. 17, 20:

೧೧:೨ ಲೂಕ. 21:24:

§೧೧:೨ ಪ್ರಕ. 12:6; 13:5:

*೧೧:೩ ಯೆಶಾ. 20:2:

೧೧:೪ ಜೆಕ. 4:3, 11, 14:

೧೧:೫ 2 ಅರಸು. 1:10, 12; ಯೆರೆ. 5:14:

§೧೧:೫ ಅರಣ್ಯ. 16:29, 35:

*೧೧:೬ ಅರಣ್ಯ. 17:1; ಲೂಕ. 4:25; ಯಾಕೋಬ. 5:17:

೧೧:೬ ವಿಮೋ. 7:19:

೧೧:೬ ವಿಮೋ. 7-10; 1 ಸಮು. 4:8:

§೧೧:೭ ಪ್ರಕ. 9:1:

*೧೧:೭ ಪ್ರಕ. 17:8; ಪ್ರಕ. 13:1:

೧೧:೭ ದಾನಿ. 7:21:

೧೧:೮ ಪ್ರಕ. 16:19; 17:18; 18:10:

§೧೧:೮ ಯೆಶಾ. 1:9, 10; 3:9:

*೧೧:೮ ಯೆಹೆ. 23:3, 8, 19:27:

೧೧:೯ ಕೀರ್ತ. 79:2, 3:

೧೧:೧೦ ಪ್ರಕ. 11:5, 6; 1 ಅರಸು. 18:17:

§೧೧:೧೦ ಯೋಹಾ. 16:20; ಪ್ರಕ. 3:10:

*೧೧:೧೧ ಆದಿ. 2:7; ಯೆಹೆ. 37:5, 9, 10, 14:

೧೧:೧೨ ಪ್ರಕ. 4:1:

೧೧:೧೨ ಅ. ಕೃ. 1:9; 1 ಥೆಸ. 4:17:

§೧೧:೧೨ ಪ್ರಕ. 12:5; 2 ಅರಸು. 2:11:

*೧೧:೧೩ ಪ್ರಕ. 6:12:

೧೧:೧೩ ಪ್ರಕ. 16:19:

೧೧:೧೩ 2 ಪೂರ್ವ. 36:23; ಯೋನ. 1:9:

§೧೧:೧೩ ಯೆಹೋ. 7:19; ಪ್ರಕ. 14:7; 16:9, 19:7:

*೧೧:೧೪ ಪ್ರಕ. 8:13; 9:12:

೧೧:೧೪ ಪ್ರಕ. 10:7:

೧೧:೧೫ ಪ್ರಕ. 16:17; 19:1:

§೧೧:೧೫ ಪ್ರಕ. 12:10:

*೧೧:೧೫ ಕೀರ್ತ. 2:2; ಲೂಕ. 9:20; ಅ. ಕೃ. 4:26:

೧೧:೧೫ ದಾನಿ. 2:44; 7:14, 18, 27; ಲೂಕ. 1:33; ಇಬ್ರಿ. 1:8; ಯೋಹಾ. 12:34:

೧೧:೧೬ ಪ್ರಕ. 4:4:

§೧೧:೧೬ ಪ್ರಕ. 4:10:

*೧೧:೧೭ ಮೂಲ. ಇರುವಾತನೇ, ಇದ್ದಾತನೇ. ಪ್ರಕ. 16:5; ಪ್ರಕ. 1:4, 8; 4:8:

೧೧:೧೭ ಕೀರ್ತ. 97:1; ಪ್ರಕ. 19:6:

೧೧:೧೮ ಕೀರ್ತ. 2:5; 110:5:

§೧೧:೧೮ ಪ್ರಕ. 6:10; 20:12; ದಾನಿ. 7:10; 2 ಥೆಸ. 1:6, 7:

*೧೧:೧೮ ಪ್ರಕ. 19:5:

೧೧:೧೮ ಪ್ರಕ. 13:10:

೧೧:೧೯ ಪ್ರಕ. 15:5:

§೧೧:೧೯ ಇಬ್ರಿ. 9:4:

*೧೧:೧೯ ಪ್ರಕ. 16:21: