೮
ಏಳನೆಯ ಮುದ್ರೆ
೧ * ಯಜ್ಞದ ಕುರಿಮರಿ ಅಥವಾ ಯೇಸುಕ್ರಿಸ್ತನು. ಆತನು † ಪ್ರಕ. 5:1; 6:1:ಏಳನೆಯ ಮುದ್ರೆಯನ್ನು ಒಡೆದಾಗ ಸುಮಾರು ಅರ್ಧಗಂಟೆ ಕಾಲ ಪರಲೋಕದಲ್ಲಿ ನಿಶ್ಯಬ್ದವಾಯಿತು. ೨ ಆಗ ‡ ಲೂಕ. 1:19:ದೇವರ ಸನ್ನಿಧಿಯಲ್ಲಿ ನಿಂತಿರುವ ಏಳು ದೇವದೂತರನ್ನು ಕಂಡೆನು. ಅವರಿಗೆ ಏಳು ತುತ್ತೂರಿಗಳು ಕೊಡಲ್ಪಟ್ಟವು.
೩ ಅನಂತರ ಮತ್ತೊಬ್ಬ ದೇವದೂತನು ಬಂದನು, ಅವನು § ವಿಮೋ. 30. 1, 3; ಪ್ರಕ. 9:13:ಚಿನ್ನದ ಧೂಪಾರತಿ ಹಿಡಿದುಕೊಂಡು ಯಜ್ಞವೇದಿಯ ಬಳಿಯಲ್ಲಿ ನಿಂತನು. ಸಿಂಹಾಸನದ ಮುಂದಣ ಚಿನ್ನದ ಧೂಪವೇದಿಯ ಮೇಲೆ * ಪ್ರಕ. 5:8:ಪರಿಶುದ್ಧ ಜನರೆಲ್ಲರ ಪ್ರಾರ್ಥನೆಗಳೊಂದಿಗೆ ಸಮರ್ಪಿಸುವುದಕ್ಕಾಗಿ ಅವನಿಗೆ ಬಹಳ ಧೂಪವು ಕೊಡಲ್ಪಟ್ಟಿತು. ೪ ಆಗ ಧೂಪದ ಹೊಗೆಯು ದೇವದೂತನ ಕೈಯಿಂದ ಹೊರಟು † ಕೀರ್ತ. 141:2:ದೇವಜನರ ಪ್ರಾರ್ಥನೆಗಳೊಂದಿಗೆ ಸೇರಿ ದೇವರ ಸನ್ನಿಧಿಗೆ ಏರಿಹೋಯಿತು. ೫ ತರುವಾಯ ಆ ದೇವದೂತನು ಧೂಪಾರತಿಯನ್ನು ತೆಗೆದುಕೊಂಡು ‡ ಯಾಜ. 16:12:ಯಜ್ಞವೇದಿಯ ಬೆಂಕಿಯಿಂದ ಅದನ್ನು ತುಂಬಿಸಿ ಭೂಮಿಯ ಮೇಲೆ ಎಸೆದನು. ಆಗ ಗರ್ಜಿಸುವ § ಪ್ರಕ. 4:5:ಗುಡುಗು, ಮಹಾಶಬ್ದಗಳು, ಮಿಂಚು, ಭೂಕಂಪವು ಉಂಟಾದವು.
ಏಳು ತುತ್ತೂರಿಗಳು
೬ ಏಳು ತುತ್ತೂರಿಗಳನ್ನು ಹಿಡಿದಿರುವ ಏಳು ಮಂದಿ ದೇವದೂತರು ತುತ್ತೂರಿಗಳನ್ನು ಊದಲು ಸಿದ್ಧರಾದರು.
೭ ಮೊದಲನೆಯ ದೇವದೂತನು ತನ್ನ ತುತ್ತೂರಿಯನ್ನೂದಲು * ಯೋವೇ. 2:30. ರಕ್ತ ಮಿಶ್ರಿತವಾದ † ವಿಮೋ. 9:23, 24; ಕೀರ್ತ. 18:12, 13; ಯೆರೆ. 38:22:ಆಲಿಕಲ್ಲಿನ ಮಳೆಯೂ ಬೆಂಕಿಯೂ ಭೂಮಿಯ ಮೇಲೆ ಸುರಿಯಿತು. ಭೂಮಿಯ ‡ ಪ್ರಕ. 8:8-12; 9:15, 18; 12:4; ಯೆರೆ. 5:2; ಜೆಕ. 13:8, 9:ಮೂರರಲ್ಲಿ ಒಂದು ಭಾಗವು ಸುಟ್ಟು ಹೋಯಿತು. § ಯೆಶಾ. 2:13; ಪ್ರಕ. 9:4:ಮರಗಳಲ್ಲಿ ಮೂರರಲ್ಲೊಂದು ಭಾಗ ಸುಟ್ಟು ಹೋದವು. ಹಸಿರು ಹುಲ್ಲೆಲ್ಲಾ ಸುಟ್ಟು ಹೋಯಿತು.
೮ ಎರಡನೆಯ ದೇವದೂತನು ತನ್ನ ತುತ್ತೂರಿಯನ್ನು ಊದಿದನು. ಆಗ ಬೆಂಕಿಯಿಂದ ಉರಿಯುತ್ತಿರುವ * ಯೆರೆ. 51:25; ಮಾರ್ಕ. 11:23:ದೊಡ್ಡ ಬೆಟ್ಟವೋ ಎಂಬಂತಿರುವ ವಸ್ತುವನ್ನು ಸಮುದ್ರಕ್ಕೆ ಎಸೆಯಲಾಯಿತು. ಆಗ ಸಮುದ್ರದೊಳಗೆ ಮೂರರಲ್ಲಿ ಒಂದು ಭಾಗ † ಪ್ರಕ. 11:6; ವಿಮೋ. 7:17, 19ರಕ್ತವಾಯಿತು. ೯ ‡ ಪ್ರಕ. 16:3; ವಿಮೋ. 7:20, 21:ಸಮುದ್ರದ ಜೀವಿಗಳಲ್ಲಿ ಮೂರರಲ್ಲಿ ಒಂದು ಭಾಗವು ಸತ್ತವು ಮತ್ತು § ಯೆಶಾ. 2:16:ಹಡಗುಗಳಲ್ಲಿ ಮೂರರಲ್ಲಿ ಒಂದು ಭಾಗವು ನಾಶವಾದವು.
೧೦ ಮೂರನೆಯ ದೇವದೂತನು ತನ್ನ ತುತ್ತೂರಿಯನ್ನು ಊದಿದನು. ಆಗ ಪಂಜಿನಂತೆ ಉರಿಯುವ * ಪ್ರಕ. 9:1; ಯೆಶಾ. 14:12:ಒಂದು ದೊಡ್ಡ ನಕ್ಷತ್ರವು ಆಕಾಶದಿಂದ ನದಿಗಳ ಹಾಗೂ † ಪ್ರಕ. 14:7; 16:4:ನೀರಿನ ಬುಗ್ಗೆಗಳ ಮೂರರಲ್ಲಿ ಒಂದು ಭಾಗದ ಮೇಲೆ ಬಿದ್ದಿತು. ೧೧ ಆ ನಕ್ಷತ್ರದ ಹೆಸರು ‡ ಕಹಿಯಾದ ಒಂದು ಜಾತಿಯ ಸಸ್ಯ. ಔಷಧಗಳ ತಯಾರಿಕೆಗೆ ಬಳಸುವ ಸಸಿ ಅಥವಾ ಗಿಡ. ಮಾಚಿಪತ್ರೆ. ನೀರಿನ ಮೂರರಲ್ಲಿ ಒಂದು ಭಾಗ § ಧರ್ಮೋ. 29:18; ಯೆರೆ. 9:15; 3:15:ಮಾಚಿಪತ್ರೆಯಂತೆ ವಿಷವಾಯಿತು ಮತ್ತು ಆ * ವಿಮೋ. 15:23:ನೀರು ಕಹಿಯಾದ್ದರಿಂದ ಅನೇಕರು ಸತ್ತುಹೋದರು.
೧೨ ನಾಲ್ಕನೆಯ ದೇವದೂತನು ತನ್ನ ತುತ್ತೂರಿಯನ್ನು ಊದಿದನು, ಆಗ ಸೂರ್ಯನ ಮೂರರಲ್ಲಿ ಒಂದು ಭಾಗಕ್ಕೆ ತೊಂದರೆಯುಂಟಾಗಿ † ವಿಮೋ. 10:21-23; ಯೆಶಾ. 13:10; 30. 26; ಪ್ರಕ. 8:10:ಕತ್ತಲಾಯಿತು. ಅದೇ ಪ್ರಕಾರ ಚಂದ್ರನಲ್ಲಿ ಮತ್ತು ನಕ್ಷತ್ರಗಳಲ್ಲಿ ಮೂರರಲ್ಲಿ ಒಂದು ಭಾಗಕ್ಕೆ ತೊಂದರೆಯುಂಟಾಗಿ ಕತ್ತಲಾಗಿ ಹೋಯಿತು. ಇದರಿಂದ ಹಗಲಿನಲ್ಲಿ ಮೂರರಲ್ಲಿ ಒಂದು ಭಾಗವು ಪ್ರಕಾಶವಿಲ್ಲದೆ ಕತ್ತಲಾಗಿ, ರಾತ್ರಿಯ ಹಾಗೆಯೇ ಆಯಿತು.
೧೩ ಆ ಮೇಲೆ ನಾನು ನೋಡಲಾಗಿ ಇಗೋ ಒಂದು ಹದ್ದು ಆಕಾಶದ ಮಧ್ಯದಲ್ಲಿ ಹಾರಾಡುತ್ತಿತ್ತು, ಅದರ ಕೂಗು ನನಗೆ ಕೇಳಿಸಿತು. ಅದು, ಇನ್ನು ಉಳಿದ ಮೂವರು ದೇವದೂತರು ತುತ್ತೂರಿಯನ್ನು ಊದುವಾಗ ಭೂನಿವಾಸಿಗಳಿಗೆ ‡ ಪ್ರಕ. 9:12; 11:14:ಕೇಡು, ಕೇಡು, ಕೇಡು ಎಂದು ಮಹಾಶಬ್ದದಿಂದ ಕೂಗುವುದನ್ನು ಕೇಳಿಸಿಕೊಂಡೆನು.
*೮:೧ ಯಜ್ಞದ ಕುರಿಮರಿ ಅಥವಾ ಯೇಸುಕ್ರಿಸ್ತನು.
§೮:೩ ವಿಮೋ. 30. 1, 3; ಪ್ರಕ. 9:13:
*೮:೭ ಯೋವೇ. 2:30.
†೮:೭ ವಿಮೋ. 9:23, 24; ಕೀರ್ತ. 18:12, 13; ಯೆರೆ. 38:22:
‡೮:೭ ಪ್ರಕ. 8:8-12; 9:15, 18; 12:4; ಯೆರೆ. 5:2; ಜೆಕ. 13:8, 9:
*೮:೮ ಯೆರೆ. 51:25; ಮಾರ್ಕ. 11:23:
†೮:೮ ಪ್ರಕ. 11:6; ವಿಮೋ. 7:17, 19
‡೮:೯ ಪ್ರಕ. 16:3; ವಿಮೋ. 7:20, 21:
†೮:೧೦ ಪ್ರಕ. 14:7; 16:4:
‡೮:೧೧ ಕಹಿಯಾದ ಒಂದು ಜಾತಿಯ ಸಸ್ಯ. ಔಷಧಗಳ ತಯಾರಿಕೆಗೆ ಬಳಸುವ ಸಸಿ ಅಥವಾ ಗಿಡ.
§೮:೧೧ ಧರ್ಮೋ. 29:18; ಯೆರೆ. 9:15; 3:15:
†೮:೧೨ ವಿಮೋ. 10:21-23; ಯೆಶಾ. 13:10; 30. 26; ಪ್ರಕ. 8:10:
‡೮:೧೩ ಪ್ರಕ. 9:12; 11:14: