೭
ಒಂದು ಲಕ್ಷದ ನಲ್ವತ್ತನಾಲ್ಕು ಸಾವಿರ ಇಸ್ರಾಯೇಲ್ಯರಿಗೆ ಮುದ್ರೆಯೊತ್ತಿದ್ದು
೧ ಇದಾದ ನಂತರ ನಾಲ್ಕು ಮಂದಿ ದೇವದೂತರು ಭೂಮಿಯ ನಾಲ್ಕು ದಿಕ್ಕುಗಳಲ್ಲಿ ನಿಂತುಕೊಂಡು ಭೂಮಿಯ ಮೇಲಾಗಲಿ ಸಮುದ್ರದ ಮೇಲಾಗಲಿ ಅಥವಾ ಯಾವ ಮರದ ಮೇಲಾಗಲಿ ಗಾಳಿ ಬೀಸದಂತೆ ಭೂಮಿಯ ಚತುರ್ದಿಕ್ಕುಗಳ ಗಾಳಿಗಳನ್ನು ತಡೆಹಿಡಿದಿರುವುದನ್ನು ಕಂಡೆನು. ೨ ಇದಲ್ಲದೆ ಮತ್ತೊಬ್ಬ ದೇವದೂತನು ಜೀವಸ್ವರೂಪನಾದ ದೇವರ ಮುದ್ರೆಯನ್ನು ಹಿಡಿದುಕೊಂಡು * ಪೂರ್ವದಿಕ್ಕಿನಿಂದಮೂಡಣದಿಕ್ಕಿನಿಂದ ಏರಿಬರುವುದನ್ನು ಕಂಡೆನು. ಅವನು ಭೂಮಿಗೂ ಸಮುದ್ರಕ್ಕೂ ಕೇಡನ್ನುಂಟುಮಾಡಲು ಅನುಮತಿ ಹೊಂದಿದ ಆ ನಾಲ್ಕು ಮಂದಿ ದೇವದೂತರಿಗೆ, ೩ ನಾವು ನಮ್ಮ ದೇವರ ದಾಸರಿಗೆ † ಯೆಹೆ. 9:4; ಪ್ರಕ. 14:1; 22:4; ಪ್ರಕ. 13 16:ಹಣೆಯ ಮೇಲೆ ಮುದ್ರೆ ಒತ್ತುವ ತನಕ ಭೂಮಿಯನ್ನಾಗಲಿ, ಸಮುದ್ರವನ್ನಾಗಲಿ, ಮರಗಳನ್ನಾಗಲಿ ನಾಶಮಾಡಬೇಡಿರಿ ಎಂದು ಮಹಾಶಬ್ದದಿಂದ ಕೂಗಿ ಹೇಳಿದನು. ೪ ಮುದ್ರೆ ಒತ್ತಿಸಿಕೊಂಡವರ ಸಂಖ್ಯೆಯು ಪ್ರಸಿದ್ಧವಾದಾಗ ಅದನ್ನು ‡ ಪ್ರಕ. 9:16:ನಾನು ಕೇಳಿಸಿ ಕೊಂಡೆನು. ಇಸ್ರಾಯೇಲ್ಯರ ಪ್ರತಿಯೊಂದು ಕುಲಕ್ಕೆ ಸೇರಿದವರು ಮುದ್ರೆಯೊತ್ತಿಸಿಕೊಂಡವರ ಸಂಖ್ಯೆ ಒಂದು ಲಕ್ಷದ ನಲವತ್ತನಾಲ್ಕು ಸಾವಿರ. ೫ ಯೂದನ ಕುಲದವರಲ್ಲಿ ಮುದ್ರೆಹಾಕಿಸಿಕೊಂಡವರು ಹನ್ನೆರಡು ಸಾವಿರ, ರೂಬೇನನ ಕುಲದವರಲ್ಲಿ ಹನ್ನೆರಡು ಸಾವಿರ, ಗಾದ್ ಕುಲದವರಲ್ಲಿ ಹನ್ನೆರಡು ಸಾವಿರ, ೬ ಅಷೇರನ ಕುಲದವರಲ್ಲಿ ಹನ್ನೆರಡು ಸಾವಿರ, ನಫ್ತಾಲಿಯ ಕುಲದವರಲ್ಲಿ ಹನ್ನೆರಡು ಸಾವಿರ, ಮನಸ್ಸೆಯ ಕುಲದವರಲ್ಲಿ ಹನ್ನೆರಡು ಸಾವಿರ, ೭ ಸಿಮೆಯೋನನ ಕುಲದವರಲ್ಲಿ ಹನ್ನೆರಡು ಸಾವಿರ, ಲೇವಿಯ ಕುಲದವರಲ್ಲಿ ಹನ್ನೆರಡು ಸಾವಿರ, ಇಸ್ಸಕಾರನ ಕುಲದವರಲ್ಲಿ ಹನ್ನೆರಡು ಸಾವಿರ, ೮ ಜೆಬುಲೋನನ ಕುಲದವರಲ್ಲಿ ಹನ್ನೆರಡು ಸಾವಿರ, ಯೋಸೇಫನ ಕುಲದವರಲ್ಲಿ ಹನ್ನೆರಡು ಸಾವಿರ, ಬೆನ್ಯಾಮೀನನ ಕುಲದವರಲ್ಲಿ ಮುದ್ರೆ ಹಾಕಿಸಿಕೊಂಡವರು ಹನ್ನೆರಡು ಸಾವಿರ ಮಂದಿ ಇದ್ದರು.
ಸಲಕ ಜನಾಂಗಗಳ ಮಹಾ ಜನಸಮೂಹ
೯ ಇದಾದ ನಂತರ ಇಗೋ, ಯಾರಿಂದಲೂ ಎಣಿಸಲಾಗದಂಥ § ರೋಮಾ. 11:25:ಮಹಾ ಜನಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಮರಿಯಾದಾತನ ಮುಂದೆಯೂ ನಿಂತಿರುವುದನ್ನು ಕಂಡೆನು. * ಪ್ರಕ. 5:9:ಅವರು ಸಕಲ ಜನಾಂಗ, ಕುಲ, ಜಾತಿಗಳವರೂ ಸಕಲ ಭಾಷೆಗಳನ್ನಾಡುವವರೂ ಆಗಿದ್ದರು. ಅವರು † ವ. 14. ಪ್ರಕ. 3:4:ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ತಮ್ಮ ಕೈಗಳಲ್ಲಿ ‡ ಯಾಜ. 23:40; ಯೋಹಾ. 12:13:ಖರ್ಜೂರದ ಗರಿಗಳನ್ನು ಹಿಡಿದುಕೊಂಡಿದ್ದರು. ೧೦ ಅವರು, ರಕ್ಷಣೆಯೆಂಬುದು ಸಿಂಹಾಸನಾರೂಢನಾದ ನಮ್ಮ ದೇವರ ಮತ್ತು ಯಜ್ಞದ ಕುರಿಮರಿಯಾದಾತನಿಗೆ § ಅಥವಾ. ಯಜ್ಞದ ಕುರಿಯಾದಾತನಿಗೂ ಜಯವಾಗಲಿ; ಕೀರ್ತ. 3:8; ಪ್ರಕ. 12:10; 19:1:ಸೇರಿದ್ದು ಎಂದು ಮಹಾಧ್ವನಿಯಿಂದ ಕೂಗಿದರು. ೧೧ ಅಷ್ಟರಲ್ಲಿ ದೇವದೂತರೆಲ್ಲರೂ ಸಿಂಹಾಸನದ ಸುತ್ತಲು ನಿಂತಿದ್ದರು. ಹಿರಿಯರು ಮತ್ತು * ಪ್ರಕ. 4:6:ನಾಲ್ಕು ಜೀವಿಗಳು ಇವುಗಳ ಸುತ್ತಲೂ ನಿಂತುಕೊಂಡಿದ್ದರು ಅವರು ಸಿಂಹಾಸನದ ಮುಂದೆ † ಪ್ರಕ. 4:10:ಅಡ್ಡಬಿದ್ದು, ೧೨ ‡ ಅಂದರೆ, ತಥಾಸ್ತು, ಹಾಗೆಯೇ ಆಗಲಿ; ಪ್ರಕ. 5:14; 19:4:ಆಮೆನ್! § 1 ಪೂರ್ವ. 29:10, 11:ಸ್ತೋತ್ರವೂ, ಮಹಿಮೆಯು, ಜ್ಞಾನವೂ ಕೃತಜ್ಞತಾಸ್ತುತಿಯೂ, ಗೌರವವೂ, ಶಕ್ತಿಯೂ, ಪರಾಕ್ರಮವೂ ನಮ್ಮ ದೇವರಿಗೆ ಯುಗಯುಗಾಂತರಗಳಲ್ಲಿಯೂ ಇರಲಿ, ಆಮೆನ್! ಎಂದು ಹೇಳುತ್ತಾ ದೇವರನ್ನು ಆರಾಧಿಸಿದರು.
೧೩ ಆಗ ಇದನ್ನು ನೋಡಿ ಹಿರಿಯರಲ್ಲಿ ಒಬ್ಬನು, * ವ. 14; ಪ್ರಕ. 3:4:ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡಿರುವವರಾದ ಇವರು ಯಾರು? ಎಲ್ಲಿಂದ ಬಂದರು ಎಂದು ನನ್ನನ್ನು ಕೇಳಲು, ಅಯ್ಯಾ ನೀನೇ ಬಲ್ಲೆ ಎಂದೆನು. ೧೪ ಅವನು ನನಗೆ, ಇವರು † ಮತ್ತಾ 24:21, 29; ದಾನಿ. 12:1:ಆ ಮಹಾಸಂಕಟದಿಂದ ಹೊರಬಂದವರು, ಯಜ್ಞದ ಕುರಿಮರಿಯಾದಾತನ ‡ ಪ್ರಕ. 1:5 ರಕ್ತದಲ್ಲಿ § ಪ್ರಕ. 22:14; ಯೆಶಾ. 1:18; ಜೆಕ. 3:3-5:ತಮ್ಮ ನಿಲುವಂಗಿಗಳನ್ನು ತೊಳೆದು * ದಾನಿ. 12:10; ಅ. ಕೃ. 15:9; 1 ಯೋಹಾ. 1:7:ಶುಭ್ರಮಾಡಿಕೊಂಡಿದ್ದಾರೆ. ೧೫ ಈ ಕಾರಣದಿಂದ ಅವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳೂ † ಪ್ರಕ. 22:3:ಆತನಿಗೆ ಆರಾಧನೆ ಮಾಡುತ್ತಾ ಇದ್ದಾರೆ. ಸಿಂಹಾಸನದ ಮೇಲೆ ಕುಳಿತಿರುವಾತನೇ ಅವರಿಗೆ ‡ ಪ್ರಕ. 21:3; ಯೆಶಾ. 4, 5, 6; ಯೆಹೆ. 37:27; ಯೋಹಾ. 1:14:ಬಿಡಾರವಾಗಿರುವನು. ೧೬ ಇನ್ನೆಂದಿಗೂ § ಯೆಶಾ. 49:10:ಅವರಿಗೆ ಹಸಿವೆಯಾಗಲಿ, ಬಾಯಾರಿಕೆಯಾಗಲಿ ಆಗುವುದಿಲ್ಲ, * ಕೀರ್ತ. 121:6:ಅವರಿಗೆ ಸೂರ್ಯನ ಬಿಸಿಲಾದರೂ, ಯಾವ ಝಳವಾದರೂ ತಟ್ಟುವುದಿಲ್ಲ. ೧೭ ಏಕೆಂದರೆ ಸಿಂಹಾಸನದ ಮಧ್ಯದಲ್ಲಿರುವ ಯಜ್ಞದ ಕುರಿಮರಿಯಾದಾತನು † ಕೀರ್ತ. 23:1, 2; ಯೆಶಾ. 40. 11; ಯೆಹೆ. 34:12, 23; 37:24; ಜೆಕ. 13:7; ಮತ್ತಾ 2:6; ಯೋಹಾ. 10:11; ಇಬ್ರಿ. 13:20; 1 ಪೇತ್ರ. 2:25; 5:4:ಅವರಿಗೆ ಕುರುಬನಂತಿದ್ದು ‡ ಪ್ರಕ. 22:1; ಕೀರ್ತ. 36:8, 9; ಯೋಹಾ 4:14:ಜೀವಜಲದ ಒರತೆಗಳ ಬಳಿಗೆ ಅವರನ್ನು ನಡಿಸುತ್ತಾನೆ. § ಪ್ರಕ. 21:4; ಯೆಶಾ. 25:8:ದೇವರು ಅವರ ಕಣ್ಣಿನಿಂದ ಕಣ್ಣೀರನ್ನೆಲ್ಲಾ ಒರೆಸಿಬಿಡುವನು. ಎಂದು ಹೇಳಿದರು.
*೭:೨ ಪೂರ್ವದಿಕ್ಕಿನಿಂದ
†೭:೩ ಯೆಹೆ. 9:4; ಪ್ರಕ. 14:1; 22:4; ಪ್ರಕ. 13 16:
§೭:೯ ರೋಮಾ. 11:25:
§೭:೧೦ ಅಥವಾ. ಯಜ್ಞದ ಕುರಿಯಾದಾತನಿಗೂ ಜಯವಾಗಲಿ; ಕೀರ್ತ. 3:8; ಪ್ರಕ. 12:10; 19:1:
‡೭:೧೨ ಅಂದರೆ, ತಥಾಸ್ತು, ಹಾಗೆಯೇ ಆಗಲಿ; ಪ್ರಕ. 5:14; 19:4:
§೭:೧೨ 1 ಪೂರ್ವ. 29:10, 11:
†೭:೧೪ ಮತ್ತಾ 24:21, 29; ದಾನಿ. 12:1:
§೭:೧೪ ಪ್ರಕ. 22:14; ಯೆಶಾ. 1:18; ಜೆಕ. 3:3-5:
*೭:೧೪ ದಾನಿ. 12:10; ಅ. ಕೃ. 15:9; 1 ಯೋಹಾ. 1:7:
‡೭:೧೫ ಪ್ರಕ. 21:3; ಯೆಶಾ. 4, 5, 6; ಯೆಹೆ. 37:27; ಯೋಹಾ. 1:14:
†೭:೧೭ ಕೀರ್ತ. 23:1, 2; ಯೆಶಾ. 40. 11; ಯೆಹೆ. 34:12, 23; 37:24; ಜೆಕ. 13:7; ಮತ್ತಾ 2:6; ಯೋಹಾ. 10:11; ಇಬ್ರಿ. 13:20; 1 ಪೇತ್ರ. 2:25; 5:4:
‡೭:೧೭ ಪ್ರಕ. 22:1; ಕೀರ್ತ. 36:8, 9; ಯೋಹಾ 4:14: