೪
* ಯೆಹೆ. 1:ಸ್ವರ್ಗೀಯ ಆರಾಧನೆ
೧ ಆನಂತರ ನಾನು ನೋಡಿದಾಗ, ಪರಲೋಕದಲ್ಲಿ ತೆರೆದಿರುವ ಒಂದು ಬಾಗಿಲು ಕಾಣಿಸಿತು. ಮೊದಲು ನನ್ನೊಡನೆ ಮಾತನಾಡಿದ ವಾಣಿಯು † ಪ್ರಕ. 1:10; ವಿಮೋ. 19:19, 20:ತುತ್ತೂರಿಯಂತೆ ಮಾತನಾಡುತ್ತದೋ ಎಂಬಂತೆ ನನಗೆ ಕೇಳಿಸಿತು. ಅದು, ‡ ಪ್ರಕ. 11:12:ಇಲ್ಲಿಗೆ ಏರಿ ಬಾ, § ಪ್ರಕ. 1:1, 19; 22:6:ಮುಂದೆ ಸಂಭವಿಸಬೇಕಾದವುಗಳನ್ನು ನಿನಗೆ ತೋರಿಸಿ ಕೊಡುವೆನು ಎಂದು ಹೇಳಿತು. ೨ ಕೂಡಲೆ ನಾನು * ಪ್ರಕ. 1:10:ದೇವರಾತ್ಮವಶನಾದೆನು, ಆಗ ಇಗೋ ಪರಲೋಕದಲ್ಲಿ † ಕೀರ್ತ. 11:14, 103, 19; ಯೆಶಾ. 66:1; ಮತ್ತಾ 5:34; 23:22:ಒಂದು ಸಿಂಹಾಸನವಿತ್ತು. ಸಿಂಹಾಸನದ ಮೇಲೆ ಒಬ್ಬನು ಕುಳಿತಿದ್ದನು. ೩ ಕುಳಿತಿದ್ದವನು ಕಣ್ಣಿಗೆ ‡ ಅಥವಾ, ವಜ್ರ. ಪ್ರಕ. 21:11:ಸೂರ್ಯಕಾಂತಿ ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದನು. ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ § ಯೆಹೆ. 1:27, 28; ಪ್ರಕ. 10:1; ಆದಿ. 9:13-17.ಕಾಮನಬಿಲ್ಲು ಇತ್ತು. ೪ ಇದಲ್ಲದೆ ಸಿಂಹಾಸನದ ಸುತ್ತಲೂ * ಪ್ರಕ. 11:16:ಇಪ್ಪತ್ನಾಲ್ಕು ಸಿಂಹಾಸನಗಳಿದ್ದವು. ಆ ಸಿಂಹಾಸನಗಳ ಮೇಲೆ † ಪ್ರಕ. 3:4:ಶುಭ್ರವಸ್ತ್ರ ಧರಿಸಿಕೊಂಡಿದ್ದ ‡ 1 ಪೂರ್ವ. 24:1-18; ಪ್ರಕ. 5:8:ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತಿದ್ದರು. § ವ. 10; ಯಾಕೋಬ. 1:12:ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು. ೫ ಸಿಂಹಾಸನದಿಂದ * ಪ್ರಕ. 8:5,11,19; 16:18. ವಿಮೋ. 19:16:ಮಿಂಚು, ಗುಡುಗು, ಗರ್ಜನೆಗಳು ಹೊರ ಹೊಮ್ಮುತ್ತಿದ್ದವು. ಆ ಸಿಂಹಾಸನ ಮುಂದೆ † ಪ್ರಕ. 1:4:ದೇವರ ಏಳು ಆತ್ಮಗಳನ್ನು ಸೂಚಿಸುವ ‡ ಜೆಕ. 4:2:ಏಳು ದೀಪಗಳು ಉರಿಯುತ್ತಿದ್ದವು. ೬ ಇದಲ್ಲದೆ ಸಿಂಹಾಸನದ ಮುಂದೆ ಸ್ಫಟಿಕಕ್ಕೆ ಸಮಾನವಾದ § ಪ್ರಕ. 15:2; 1 ಅರಸು. 7:23, 39:ಗಾಜಿನ ಸಮುದ್ರವಿದ್ದ ಹಾಗೆ ಕಾಣಿಸಿತು. ಸಿಂಹಾಸನದ ಮಧ್ಯದಲ್ಲಿ ಅದರ ನಾಲ್ಕು ಕಡೆಗಳಲ್ಲಿ * ಯೆಹೆ. 1:5-14,18; 10:12:ನಾಲ್ಕು ಜೀವಿಗಳಿದ್ದವು. ಅವುಗಳಿಗೆ ಹಿಂದೆಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು. ೭ ಮೊದಲನೆಯ ಜೀವಿಯು ಸಿಂಹದಂತಿತ್ತು, ಎರಡನೆಯ ಜೀವಿಯು ಹೋರಿಯಂತಿತ್ತು, ಮೂರನೆಯ ಜೀವಿಯ ಮುಖವು ಮನುಷ್ಯನ ಮುಖದಂತಿತ್ತು, ನಾಲ್ಕನೆಯ ಜೀವಿಯು ಹಾರುವ ಹದ್ದಿನಂತಿತ್ತು. ೮ ಆ ನಾಲ್ಕು ಜೀವಿಗಳಿಗೆ † ಯೆಶಾ. 6:2:ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು. ‡ ವ. 6:ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ,
§ ಯೆಶಾ. 6:3:ದೇವರಾದ ಕರ್ತನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಆತನು ಸರ್ವಶಕ್ತನು,
* ಪ್ರಕ. 1:4:ಇರುವಾತನು, ಇದ್ದಾತನು, ಬರುವಾತನು ಎಂದು ಹೇಳುತ್ತಿದ್ದವು.
೯ ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿ ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಆ ಜೀವಿಗಳು ಮಹಿಮೆ ಗೌರವ ಕೃತಜ್ಞತಾಸ್ತುತಿಗಳನ್ನು ಸಲ್ಲಿಸುತ್ತಿರುವಾಗ, ೧೦-೧೧ ಆ ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕುಳಿತಾತನ ಪಾದಕ್ಕೆ † ಪ್ರಕ. 5:8, 14; 7:11; 11:16; 19:4:ಅಡ್ಡಬಿದ್ದು, ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ, ಕರ್ತನೇ ನಮ್ಮ ದೇವರೇ ‡ ಪ್ರಕ. 5:12:ನೀನು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯನಾಗಿದ್ದೀ, § ಪ್ರಕ. 10:6; 14:7; ಆದಿ. 1:1; ಅ. ಕೃ. 14:15; ಎಫೆ. 3:9: ಏಕೆಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. * ಕೀರ್ತ. 33:9-11:ಎಲ್ಲವೂ ನಿನ್ನ ಚಿತ್ತದಿಂದಲೇ ಇದ್ದವು ಮತ್ತು ನಿನ್ನ ಚಿತ್ತದಿಂದಲೇ ನಿರ್ಮಿತವಾದವು ಎಂದು ಹೇಳುತ್ತಾ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಿದ್ದರು.
*^ ಯೆಹೆ. 1:
†೪:೧ ಪ್ರಕ. 1:10; ವಿಮೋ. 19:19, 20:
§೪:೧ ಪ್ರಕ. 1:1, 19; 22:6:
†೪:೨ ಕೀರ್ತ. 11:14, 103, 19; ಯೆಶಾ. 66:1; ಮತ್ತಾ 5:34; 23:22:
‡೪:೩ ಅಥವಾ, ವಜ್ರ. ಪ್ರಕ. 21:11:
§೪:೩ ಯೆಹೆ. 1:27, 28; ಪ್ರಕ. 10:1; ಆದಿ. 9:13-17.
‡೪:೪ 1 ಪೂರ್ವ. 24:1-18; ಪ್ರಕ. 5:8:
§೪:೪ ವ. 10; ಯಾಕೋಬ. 1:12:
*೪:೫ ಪ್ರಕ. 8:5,11,19; 16:18. ವಿಮೋ. 19:16:
‡೪:೫ ಜೆಕ. 4:2:
§೪:೬ ಪ್ರಕ. 15:2; 1 ಅರಸು. 7:23, 39:
*೪:೬ ಯೆಹೆ. 1:5-14,18; 10:12:
‡೪:೮ ವ. 6:
†೪:೧೦-೧೧ ಪ್ರಕ. 5:8, 14; 7:11; 11:16; 19:4:
§೪:೧೦-೧೧ ಪ್ರಕ. 10:6; 14:7; ಆದಿ. 1:1; ಅ. ಕೃ. 14:15; ಎಫೆ. 3:9: