೧೦
ಬಲಿಷ್ಠನಾದ ದೂತನು ಮತ್ತು ಚಿಕ್ಕ ಸುರುಳಿಯು
೧ ತರುವಾಯ ಬಲಿಷ್ಠನಾದ ಮತ್ತೊಬ್ಬ ದೇವದೂತನು ಪರಲೋಕದಿಂದ ಇಳಿದುಬರುವುದನ್ನು ಕಂಡೆನು. ಅವನು ಮೇಘವನ್ನು ಧರಿಸಿಕೊಂಡಿದ್ದನು. * ಯೆಹೆ. 1:28:ಅವನ ತಲೆಯ ಮೇಲೆ ಕಾಮನಬಿಲ್ಲು ಇತ್ತು. ಪ್ರಕ. 1:16; ಮತ್ತಾ 17:2:ಅವನ ಮುಖವು ಸೂರ್ಯನೊಪಾದಿಯಲ್ಲಿತ್ತು. ಪ್ರಕ. 1:15:ಅವನ ಪಾದಗಳು ಬೆಂಕಿಯ ಕಂಬಗಳಂತಿದ್ದವು. ೨  § ಪ್ರಕ. 10:8-10:ಅವನ ಕೈಯಲ್ಲಿ ಬಿಚ್ಚಿದ್ದ ಒಂದು ಚಿಕ್ಕ ಸುರುಳಿ ಇತ್ತು. ಅವನು ಬಲಗಾಲನ್ನು ಸಮುದ್ರದ ಮೇಲೆಯೂ ಎಡಗಾಲನ್ನು ಭೂಮಿಯ ಮೇಲೆಯೂ ಇಟ್ಟು, ೩  * ಯೋವೇ. 3:16; ಆಮೋ. 1:2:ಸಿಂಹವು ಘರ್ಜಿಸುವ ಪ್ರಕಾರ ಮಹಾಶಬ್ದದಿಂದ ಕೂಗಿದನು. ಕೂಗಿದಾಗ ಏಳು ಗುಡುಗುಗಳು ಒಂದೊಂದಾಗಿ ಧ್ವನಿಕೊಟ್ಟವು. ೪ ಆ ಏಳು ಗುಡುಗುಗಳು ನುಡಿದಾಗ ನಾನು ಬರೆಯಬೇಕೆಂದಿದ್ದೆನು. ಆದರೆ, ಆ ಏಳು ಗುಡುಗುಗಳು ನುಡಿದಿದ್ದನ್ನು ನೀನು ಬರೆಯದೆ ಮೂಲ:ಅವುಗಳಿಗೆ ಮುದ್ರೆಹಾಕು; ದಾನಿ. 8:26; 12:4, 9; ಪ್ರಕ. 22:10:ಗುಪ್ತವಾಗಿಡು ಎಂದು ಹೇಳುವ ದೈವವಾಣಿಯನ್ನು ಕೇಳಿದೆನು.
೫ ಅನಂತರ ಸಮುದ್ರದ ಮೇಲೆಯೂ, ಭೂಮಿಯ ಮೇಲೆಯೂ ನಿಂತಿರುವವನಾಗಿ ನನಗೆ ಕಾಣಿಸಿದ ದೇವದೂತನು ಆದಿ. 14:22:ತನ್ನ ಬಲಗೈಯನ್ನು ಪರಲೋಕದ ಕಡೆಗೆ ಎತ್ತಿ, ೬  § ಪ್ರಕ. 4:11:ಪರಲೋಕವನ್ನೂ ಅದರಲ್ಲಿರುವ ಸಮಸ್ತವನ್ನೂ, ಭೂಮಿಯನ್ನೂ ಅದರಲ್ಲಿರುವ ಸಮಸ್ತವನ್ನೂ, ಸಮುದ್ರವನ್ನೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿ, * ಪ್ರಕ. 4:9:ಯುಗಯುಗಾಂತರಗಳಲ್ಲಿಯೂ ಜೀವಿಸುವಾತನ ಮೇಲೆ ದಾನಿ. 12:7:ಆಣೆಯಿಟ್ಟು, ಪ್ರಕ. 12:12; 16:17; 21:6; ದಾನಿ. 12:7:ಇನ್ನು ತಡಮಾಡದೆ, ೭  § ಪ್ರಕ. 11:15:ಏಳನೆಯ ದೇವದೂತನು ಶಬ್ದಮಾಡುವ ದಿನಗಳಲ್ಲಿ ಅಂದರೆ ಅವನು ತುತ್ತೂರಿಯನ್ನು ಊದುವುದಕ್ಕಿರುವ ಸಮಯದಲ್ಲಿ ದೇವರು ಇದುವರೆಗೆ ಗುಪ್ತವಾಗಿಟ್ಟಿದ್ದ ದೇವರ ಮರ್ಮವನ್ನು * ಆಮೋ. 3:7:ತನ್ನ ದಾಸರಾದ ಪ್ರವಾದಿಗಳಿಗೆ ತಿಳಿಸಿದ್ದ ಪ್ರಕಾರ ನೆರವೇರುವುದು ಎಂದು ಹೇಳಿದನು.
೮ ಅನಂತರ ಪರಲೋಕದಿಂದ ನನಗೆ ಕೇಳಿಸಿದ್ದ ಶಬ್ದವು ಮತ್ತೊಮ್ಮೆ ನನ್ನೊಂದಿಗೆ ಮಾತನಾಡಿ, ನೀನು ಹೋಗಿ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತುಕೊಂಡಿರುವ ದೂತನ ಕೈಯಲ್ಲಿರುವ ಆ ಬಿಚ್ಚಿದ ಸುರುಳಿಯನ್ನು ತೆಗೆದುಕೊ ಎಂದು ಹೇಳಿತು.
೯ ನಾನು ಆ ದೂತನ ಬಳಿಗೆ ಹೋಗಿ, ಆ ಚಿಕ್ಕ ಸುರುಳಿಯನ್ನು ನನಗೆ ಕೊಡು ಎಂದು ಕೇಳಲು ಅವನು ನನಗೆ, ಯೆಹೆ. 2:4, 3:3; ಯೆರೆ. 15:16:ನೀನು ಅದನ್ನು ತೆಗೆದುಕೊಂಡು ತಿಂದು ಬಿಡು, ಅದು ನಿನ್ನ ಹೊಟ್ಟೆಯನ್ನು ಕಹಿಯಾಗುವಂತೆ ಮಾಡುವುದು, ಆದರೆ ನಿನ್ನ ಬಾಯಿ ಜೇನಿನಂತೆ ಸಿಹಿಯಾಗಿರುವುದು ಎಂದು ಹೇಳಿದನು. ೧೦ ಆಗ ನಾನು ಆ ಚಿಕ್ಕ ಸುರುಳಿಯನ್ನು ಆ ದೂತನ ಕೈಯಿಂದ ತೆಗೆದುಕೊಂಡು ತಿಂದುಬಿಟ್ಟೆನು. ಅದು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು, ಅದನ್ನು ತಿಂದ ನಂತರ ನನ್ನ ಹೊಟ್ಟೆಯು ಕಹಿಯಾಯಿತು. ೧೧ ಅನಂತರ ಆ ದೂತನು ನನಗೆ, ನೀನು ಇನ್ನೂ ಅನೇಕರನ್ನು, ಭಾಷೆಗಳನ್ನೂ, ಅರಸರನ್ನೂ ಕುರಿತು ಪ್ರವಾದನೆ ಹೇಳಬೇಕು ಎಂದು ಆಜ್ಞಾಪಿಸಿದನು.

*೧೦:೧ ಯೆಹೆ. 1:28:

೧೦:೧ ಪ್ರಕ. 1:16; ಮತ್ತಾ 17:2:

೧೦:೧ ಪ್ರಕ. 1:15:

§೧೦:೨ ಪ್ರಕ. 10:8-10:

*೧೦:೩ ಯೋವೇ. 3:16; ಆಮೋ. 1:2:

೧೦:೪ ಮೂಲ:ಅವುಗಳಿಗೆ ಮುದ್ರೆಹಾಕು; ದಾನಿ. 8:26; 12:4, 9; ಪ್ರಕ. 22:10:

೧೦:೫ ಆದಿ. 14:22:

§೧೦:೬ ಪ್ರಕ. 4:11:

*೧೦:೬ ಪ್ರಕ. 4:9:

೧೦:೬ ದಾನಿ. 12:7:

೧೦:೬ ಪ್ರಕ. 12:12; 16:17; 21:6; ದಾನಿ. 12:7:

§೧೦:೭ ಪ್ರಕ. 11:15:

*೧೦:೭ ಆಮೋ. 3:7:

೧೦:೯ ಯೆಹೆ. 2:4, 3:3; ಯೆರೆ. 15:16: