೫
ಸುರುಳಿಯೂ ಕುರಿಮರಿಯೂ
೧ ನಾನು* ಯೆಹೆ. 2:9, 10:ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯಲ್ಲಿ ಒಂದು † ಪುಸ್ತಕಸುರುಳಿಯನ್ನು ಕಂಡೆನು. ಅದರ ಒಳಭಾಗದಲ್ಲಿಯೂ ಮತ್ತು ಹೊರಭಾಗದಲ್ಲಿಯೂ ಬರೆಯಲ್ಪಟ್ಟಿತ್ತು. ‡ ಯೆಶಾ. 29:11; ದಾನಿ. 12:4:ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು. ೨ ಇದಲ್ಲದೆ § ಪ್ರಕ. 10:1; 18:21:ಬಲಿಷ್ಠನಾದ ಒಬ್ಬ ದೇವದೂತನು ಈ ಸುರುಳಿಯನ್ನು ಬಿಚ್ಚುವುದಕ್ಕೂ ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು? ಎಂದು ಮಹಾಶಬ್ದದಿಂದ ಕೂಗುವುದನ್ನು ಕಂಡೆನು. ೩ ಆದರೆ ಆ ಸುರುಳಿಯನ್ನು ತೆರೆಯುವುದಕ್ಕಾದರೂ ಅದರೊಳಗೆ ನೋಡುವುದಕ್ಕಾದರೂ ಪರಲೋಕದಲ್ಲಿಯಾಗಲಿ, ಭೂಮಿಯಲ್ಲಿಯಾಗಲಿ, ಭೂಮಿಯ ಕೆಳಗಾಗಲಿ ಯಾರಿಂದಲೂ ಆಗಲಿಲ್ಲ. ೪ ಸುರುಳಿಯನ್ನು ತೆರೆಯುವುದಕ್ಕಾಗಲಿ ಅದನ್ನು ನೋಡುವುದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವೆಂದು ನಾನು ಬಹಳವಾಗಿ ದುಃಖಿಸುತ್ತಿರುವಾಗ. ೫ ಹಿರಿಯರಲ್ಲಿ ಒಬ್ಬನು ನನಗೆ, ಅಳಬೇಡ ನೋಡು, * ಇಬ್ರಿ. 7:14:ಯೂದಕುಲದಲ್ಲಿ ಜನಿಸಿದ † ಅಥವಾ, ಸಿಂಹಪ್ರಾಯನೂ; ಆದಿ. 49:9:ಸಿಂಹವೂ ‡ ಯೆಶಾ. 11:1, 10; ರೋಮಾ. 15:12; ಪ್ರಕ. 22:16:ದಾವೀದನ ವಂಶಜನೂ ಆಗಿರುವ ಒಬ್ಬನು, ಆ ಸುರುಳಿಯನ್ನು ಅದರ ಏಳು ಮುದ್ರೆಗಳನ್ನೂ ತೆರೆಯುವುದಕ್ಕೆ ಜಯವೀರನಾಗಿದ್ದಾನೆ ಎಂದು ಹೇಳಿದನು.
೬ ಸಿಂಹಾಸನವು, ನಾಲ್ಕು ಜೀವಿಗಳೂ ಇದ್ದ ಸ್ಥಳಕ್ಕೂ ಮತ್ತು ಹಿರಿಯರು ಇದ್ದ ಸ್ಥಳಕ್ಕೂ ಮಧ್ಯದಲ್ಲಿ § ಎಲ್ಲಾ ಸ್ಥಳಗಳಲ್ಲಿಯೂ ಹಾಗೆಯೇ; ಯೆಶಾ. 53:7; ಯೋಹಾ. 1:29, 36; 1 ಪೇತ್ರ. 1:19. ಪ್ರಕ. 5:9, 12; 13:8:ಒಂದು ಕುರಿಮರಿಯು ವಧಿಸಲ್ಪಟಂತೆ ನಿಂತಿರುವುದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳೂ * ಜೆಕ. 3:9; 4:10:ಏಳು ಕಣ್ಣುಗಳೂ ಇದ್ದವು. ಅವು ಏನೆಂದರೆ ಭೂಮಿಯ ಮೇಲೆಲ್ಲಾ ಕಳುಹಿಸಲ್ಪಟ್ಟಿರುವ ದೇವರ ಏಳು ಆತ್ಮಗಳೇ. ೭ ಈತನು ಮುಂದೆ ಬಂದು ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯೊಳಗಿಂದ ಆ ಸುರುಳಿಯನ್ನು ತೆಗೆದುಕೊಂಡನು. ೮ ಅದನ್ನು ತೆಗೆದುಕೊಂಡಾಗ ಆ ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಹಿರಿಯರೂ ಕುರಿಮರಿಯಾದಾತನ ಪಾದಕ್ಕೆ ಅಡ್ಡ † ಪ್ರಕ. 4:10:ಬಿದ್ದರು. ಹಿರಿಯರ ಕೈಗಳಲ್ಲಿ ‡ ಪ್ರಕ. 14:2; 15:2:ವೀಣೆಗಳೂ § ಕೀರ್ತ. 141:2; ಪ್ರಕ. 8:3, 4:ದೇವಜನರ ಪ್ರಾರ್ಥನೆಗಳೆಂಬ ಧೂಪದಿಂದ ತುಂಬಿದ್ದ * ಪ್ರಕ. 15:7:ಚಿನ್ನದ ಧೂಪಾರತಿಗಳೂ ಇದ್ದವು. ೯ ಅವರು † ಕೀರ್ತ. 40. 3; 96:1; ಯೆಶಾ. 42:10; ಪ್ರಕ. 14:3:ಹೊಸಹಾಡನ್ನು ಹಾಡುತ್ತಾ,
ನೀನು ಸುರುಳಿಯನ್ನು ಸ್ವೀಕರಿಸಲು
ಅದರ ಮುದ್ರೆಯನ್ನು ಒಡೆಯಲು ನೀನು ಅರ್ಹನಾಗಿದ್ದಿ.
ನೀನು ವಧಿಸಲ್ಪಟ್ಟು, ‡ ವ. 6:ಯಜ್ಞಾರ್ಪಿತನಾಗಿ ನಿನ್ನ ರಕ್ತದಿಂದ
§ ಪ್ರಕ. 7:9; 11:9; 14:6; ದಾನಿ. 3:4:ಸಕಲ ಕುಲ, ಭಾಷೆ, ಜನ, ಜನಾಂಗಗಳನ್ನು * ಪ್ರಕ. 14:3, 4; 2 ಪೇತ್ರ. 2:1:ದೇವರಿಗಾಗಿ ಕೊಂಡುಕೊಂಡಿರುವೆ.
೧೦ ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ, † ವಿಮೋ. 19:6; ಪ್ರಕ. 1:6:ಯಾಜಕರನ್ನಾಗಿಯೂ ಮಾಡಿರುವೆ.
ಅವರು ಭೂಮಿಯನ್ನು ಆಳುವರು.
೧೧ ಇದಲ್ಲದೆ ನಾನು ನೋಡಲಾಗಿ ಸಿಂಹಾಸನದ, ಜೀವಿಗಳ ಹಾಗೂ ಹಿರಿಯರ ಸುತ್ತಲೂ ಬಹುಮಂದಿ ದೇವದೂತರ ಧ್ವನಿಯನ್ನು ಕೇಳಿದೆನು. ‡ ದಾನಿ. 7:19; ಇಬ್ರಿ. 12:22:ಅವರ ಸಂಖ್ಯೆಯು ಲಕ್ಷೋಪಲಕ್ಷವಾಗಿಯೂ ಕೋಟ್ಯಾನುಕೋಟಿಯಾಗಿಯೂ ಇತ್ತು. ೧೨ ಅವರು
ವಧಿಸಲ್ಪಟ್ಟ ಕುರಿಯು
§ ಪ್ರಕ. 4:11:ಬಲ, ಐಶ್ವರ್ಯ, ಜ್ಞಾನ, ಸಾಮರ್ಥ್ಯ,
ಘನತೆ, ಮಹಿಮೆ ಸ್ತೋತ್ರಗಳನ್ನು ಹೊಂದುವುದಕ್ಕೆ ಯೋಗ್ಯನು
ಎಂದು ಮಹಾಧ್ವನಿಯಿಂದ ಹಾಡಿದರು.
೧೩ ಇದಲ್ಲದೆ * ಕೀರ್ತ. 145:21; 150. 6:ಆಕಾಶದಲ್ಲಿಯೂ, ಭೂಮಿಯ ಮೇಲೆಯೂ, ಭೂಮಿಯ ಕೆಳಗಡೆಯೂ, ಸಮುದ್ರದಲ್ಲಿಯೂ ಇರುವ ಎಲ್ಲಾ ಸೃಷ್ಟಿಗಳೂ ಅಂದರೆ ಭೂಮ್ಯಾಕಾಶ ಸಮುದ್ರಗಳೊಳಗೆ ಇರುವುದೆಲ್ಲವೂ,
ಸಿಂಹಾಸನದ ಮೇಲೆ ಕುಳಿತಿದ್ದಾತನಿಗೂ ಕುರಿಮರಿಯಾದಾತನಿಗೂ
ಸ್ತೋತ್ರ, ಗೌರವ, ಮಹಿಮೆ, ಆಧಿಪತ್ಯಗಳು
ಯುಗಯುಗಾಂತರಗಳಲ್ಲಿಯೂ ಇರಲಿ
ಎಂದು ಹೇಳುವುದನ್ನು ಕೇಳಿದೆನು. ೧೪ ಆಗ ನಾಲ್ಕು ಜೀವಿಗಳು † ಪ್ರಕ. 7:12; 19:4:ಆಮೆನ್ ಅಂದವು ಮತ್ತು ‡ ವ. 8; ಪ್ರಕ. 4:10:ಹಿರಿಯರು ಅಡ್ಡಬಿದ್ದು ಆರಾಧಿಸಿದರು.
*೫:೧ ಯೆಹೆ. 2:9, 10:
†೫:೧ ಪುಸ್ತಕ
‡೫:೧ ಯೆಶಾ. 29:11; ದಾನಿ. 12:4:
§೫:೨ ಪ್ರಕ. 10:1; 18:21:
*೫:೫ ಇಬ್ರಿ. 7:14:
†೫:೫ ಅಥವಾ, ಸಿಂಹಪ್ರಾಯನೂ; ಆದಿ. 49:9:
‡೫:೫ ಯೆಶಾ. 11:1, 10; ರೋಮಾ. 15:12; ಪ್ರಕ. 22:16:
§೫:೬ ಎಲ್ಲಾ ಸ್ಥಳಗಳಲ್ಲಿಯೂ ಹಾಗೆಯೇ; ಯೆಶಾ. 53:7; ಯೋಹಾ. 1:29, 36; 1 ಪೇತ್ರ. 1:19. ಪ್ರಕ. 5:9, 12; 13:8:
*೫:೬ ಜೆಕ. 3:9; 4:10:
‡೫:೮ ಪ್ರಕ. 14:2; 15:2:
§೫:೮ ಕೀರ್ತ. 141:2; ಪ್ರಕ. 8:3, 4:
†೫:೯ ಕೀರ್ತ. 40. 3; 96:1; ಯೆಶಾ. 42:10; ಪ್ರಕ. 14:3:
‡೫:೯ ವ. 6:
§೫:೯ ಪ್ರಕ. 7:9; 11:9; 14:6; ದಾನಿ. 3:4:
*೫:೯ ಪ್ರಕ. 14:3, 4; 2 ಪೇತ್ರ. 2:1:
‡೫:೧೧ ದಾನಿ. 7:19; ಇಬ್ರಿ. 12:22:
*೫:೧೩ ಕೀರ್ತ. 145:21; 150. 6:
†೫:೧೪ ಪ್ರಕ. 7:12; 19:4:
‡೫:೧೪ ವ. 8; ಪ್ರಕ. 4:10: