೨
೧ ನಿಮಗಾಗಿಯೂ, ಲವೊದಿಕೀಯದವರಿಗಾಗಿಯೂ ಹಾಗೂ ನನ್ನನ್ನು ಮುಖಾಮುಖಿಯಾಗಿ ನೋಡದಿರುವವರೆಲ್ಲರಿಗಾಗಿಯೂ, ೨ ಅವರ ಹೃದಯಗಳು ಉತ್ತೇಜನಗೊಂಡು, * ಕೊಲೊ. 3:14ಪ್ರೀತಿಯಿಂದ ಒಂದಾಗಿದ್ದು, ದೇವರ ಮರ್ಮವನ್ನು ಅಂದರೆ ಕ್ರಿಸ್ತನನ್ನು ತಿಳಿದುಕೊಳ್ಳುವ ಮೂಲಕ ಬರುವ ನಿಶ್ಚಯವಾದ ಭಾಗ್ಯವನ್ನು ಪಡೆಯಬೇಕೆಂಬುದೇ ನನ್ನ ಅಪೇಕ್ಷೆ. ಅದಕ್ಕಾಗಿಯೇ ನಾನು † ಕೊಲೊ. 1:29; 4:12ಎಷ್ಟು ಪ್ರಯಾಸಪಡುತ್ತಿದ್ದೇನೆಂಬುದು ನಿಮಗೆ ತಿಳಿದಿರಬೇಕೆಂದು ಬಯಸುತ್ತೇನೆ. ೩ ‡ ಜ್ಞಾ. 2:1-5; ಯೆಶಾ. 11:2, 45:3; 1 ಕೊರಿ. 1:24, 30, 2:6-7 ಈ ಕ್ರಿಸ್ತನಲ್ಲಿಯೇ ಜ್ಞಾನ ಮತ್ತು ವಿವೇಕದ ಸರ್ವಸಂಪತ್ತು ಅಡಗಿದೆ. ೪ ಯಾರೂ ನಿಮ್ಮನ್ನು ತಮ್ಮ ಮನವೊಲಿಸುವ ಮಾತುಗಳಿಂದ ಮೋಸಗೊಳಿಸದಿರಲಿ ಎಂದು ನಾನು ನಿಮಗೆ ಇದನ್ನು ಹೇಳುತ್ತಿದ್ದೇನೆ. ೫ § 1 ಕೊರಿ. 5:3ನಾನು ಶರೀರದಿಂದ ನಿಮ್ಮ ಬಳಿಯಲ್ಲಿ ಇಲ್ಲದಿದ್ದರೂ ಆತ್ಮನಿಂದ ನಿಮ್ಮೊಂದಿಗಿದ್ದು * 1 ಕೊರಿ. 14:40ನೀವು ಕ್ರಮಬದ್ಧವಾಗಿ ನಡೆಯುವುದನ್ನು ಮತ್ತು † 1 ಪೇತ್ರ 5:9ಕ್ರಿಸ್ತ ನಂಬಿಕೆಯಲ್ಲಿ ದೃಢವಾಗಿ ನಿಂತಿರುವುದನ್ನೂ ನೋಡಿ ಸಂತೋಷಪಡುತ್ತೇನೆ.
ಕ್ರಿಸ್ತನು ನಿಜವಾದ ಜೀವವನ್ನು ಕೊಡುವಾತನು
೬ ‡ ಕೊಲೊ. 1:10; 1 ಥೆಸ. 4:2ನೀವು ಕರ್ತನಾದ ಯೇಸು ಕ್ರಿಸ್ತನನ್ನು ಸ್ವೀಕರಿಸಿದಂತೆಯೇ ಆತನಲ್ಲಿದ್ದವರಾಗಿ ಬಾಳಿರಿ. ೭ § ಎಫೆ. 3:18ಆತನಲ್ಲಿ ಬೇರೂರಿಕೊಂಡು, ಆತನಲ್ಲಿ ಕಟ್ಟಲ್ಪಟ್ಟು ಮತ್ತು * ಎಫೆ. 4:21ನಿಮಗೆ ಬೋಧಿಸಲ್ಪಟ್ಟ ಉಪದೇಶದ ಪ್ರಕಾರವೇ ಕ್ರಿಸ್ತ ನಂಬಿಕೆಯಲ್ಲಿ ನೆಲೆಗೊಂಡು ದೇವರಿಗೆ ಹೆಚ್ಚೆಚ್ಚಾಗಿ ಸ್ತೋತ್ರ ಸಲ್ಲಿಸುವವರಾಗಿರಿ.
೮ † 1 ತಿಮೊ. 6:20; ಎಫೆ. 5:6ಮೋಸವಾದ ಮತ್ತು ವ್ಯರ್ಥವಾದ ತತ್ವಜ್ಞಾನ ಬೋಧನೆಯಿಂದ ಯಾರೂ ನಿಮ್ಮನ್ನು ವಶಮಾಡಿಕೊಳ್ಳದಂತೆ ಎಚ್ಚರಿಕೆಯಾಗಿರಿ. ಇವುಗಳು ‡ ಮತ್ತಾ 15:2ಮನುಷ್ಯರ ಸಂಪ್ರದಾಯಗಳಿಗೆ ಮತ್ತು § ಕೊಲೊ. 2:20; ಗಲಾ. 4:3ಪ್ರಾಪಂಚಿಕ ಮೂಲ ಬೋಧನೆಗಳಿಗೆ ಸಂಬಂಧಿಸಿದವುಗಳೇ ಹೊರತು ಕ್ರಿಸ್ತನಿಗಲ್ಲ. ೯ ದೇವರ ಸರ್ವಸಂಪೂರ್ಣತೆಯು * ಕೊಲೊ. 1:19; ಯೋಹಾ. 1:14ಕ್ರಿಸ್ತನ ದೇಹದಲ್ಲಿ ವಾಸಮಾಡುತ್ತಿದೆ, ೧೦ † ಎಫೆ. 1:21-22ಆತನು ಎಲ್ಲಾ ದೊರೆತನಗಳಿಗೂ ಹಾಗೂ ಅಧಿಕಾರಿಗಳಿಗೂ ತಲೆಯಾಗಿರುವುದರಿಂದ ‡ ಎಫೆ. 3:19ಆತನಲ್ಲಿದ್ದುಕೊಂಡೇ ನೀವು ಪರಿಪೂರ್ಣತೆಯನ್ನು ಹೊಂದಿದವರಾಗಿದ್ದೀರಿ. ೧೧ ದೇವರು ಆತನಲ್ಲಿ ನಿಮಗೆ ಮನುಷ್ಯರ ಕೈಯಿಂದ ಮಾಡಲಾಗದಂತಹ ಸುನ್ನತಿಯನ್ನು ಮಾಡಿದ್ದಾನೆ. ಕ್ರಿಸ್ತನ ಸುನ್ನತಿಯು ಶಾರೀರಿಕವಾದ § ಕೊಲೊ. 3:9ಪಾಪಸ್ವಭಾವವನ್ನು ತೆಗೆದುಹಾಕುವುದೇ. ೧೨ * ರೋಮಾ. 6:3-4ನೀವು ದೀಕ್ಷಾಸ್ನಾನದಲ್ಲಿ ಕ್ರಿಸ್ತನೊಂದಿಗೆ ಹೂಣಲ್ಪಟ್ಟಿದ್ದೀರಿ, ಮತ್ತು † ಅ. ಕೃ. 2:24; 1 ಕೊರಿ. 6:14; ಎಫೆ. 1:19ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರ ಶಕ್ತಿಯಲ್ಲಿ ನಂಬಿಕೆಯಿಡುವುದರ ಮೂಲಕ ಆತನ ಜೊತೆಯಲ್ಲಿ ನೀವು ಎದ್ದು ಬಂದಿದ್ದೀರಿ. ೧೩ ಅಪರಾಧಗಳನ್ನು ಮಾಡುವುದರಿಂದಲೂ ಹಾಗೂ ಸುನ್ನತಿಯಿಲ್ಲದ ಶರೀರಭಾವದಿಂದಲೂ ‡ ಎಫೆ. 2:1ಸತ್ತವರಾಗಿದ್ದ ನಿಮ್ಮನ್ನು § ಎಫೆ. 2:5ದೇವರು ಕ್ರಿಸ್ತನೊಂದಿಗೆ ಬದುಕಿಸಿದ್ದಾನೆ ಮತ್ತು ನಮ್ಮ ಅಪರಾಧಗಳನ್ನೆಲ್ಲಾ ಕ್ಷಮಿಸಿದ್ದಾನೆ. ೧೪ * ರೋಮಾ. 7:4ನಮ್ಮ ಮೇಲೆ ದೋಷಾರೋಪಣೆ ಮಾಡಿದಂಥ ಆಜ್ಞಾರೂಪವಾಗಿದ್ದಂಥ ಪತ್ರವನ್ನು ತೊಡೆದುಹಾಕಿ ಅದನ್ನು ಶಿಲುಬೆಗೆ ಜಡಿದು ಇಲ್ಲದಂತಾಗಿ ಮಾಡಿದನು. ೧೫ ಆತನು ದೊರೆತನಗಳನ್ನೂ ಮತ್ತು ಅಧಿಕಾರಗಳನ್ನೂ † ನಿರಾಯುಧರಾಗಿನಿರಾಯುಧರನ್ನಾಗಿ ಮಾಡಿ, ತನ್ನ ‡ ಕ್ರಿಸ್ತನಲ್ಲಿಶಿಲುಬೆಯ ಮೂಲಕ ಅವರನ್ನು ಜಯಿಸಿ ಬಹಿರಂಗಪಡಿಸಿದನು.
೧೬ ಹೀಗಿರುವುದರಿಂದ, § ರೋಮಾ. 14:17; ಇಬ್ರಿ. 9:10; ಯಾಜ. 11:2ಅನ್ನಪಾನಗಳ ವಿಷಯದಲ್ಲಿಯೂ ಅಥವಾ * ಯಾಜ. 3:2; ರೋಮಾ. 14:5; ಮಾರ್ಕ 2:28ಹಬ್ಬ ಅಮಾವಾಸ್ಯೆ ಹಾಗೂ ಸಬ್ಬತ್ತು ಎಂಬಿವುಗಳ ವಿಷಯದಲ್ಲಿಯೂ † ರೋಮಾ. 14:3; 10, 13ನಿಮ್ಮನ್ನು ದೋಷಿಗಳೆಂದು ಯಾರೂ ನಿರ್ಣಯಿಸದಿರಲಿ. ೧೭ ‡ ಇಬ್ರಿ. 8:5; 10:1ಇವುಗಳು ಮುಂದೆ ಬರಬೇಕಾಗಿದ್ದ ಕಾರ್ಯಗಳ ಛಾಯೆಯಾಗಿವೆ, ಇವುಗಳ ನಿಜಸ್ವರೂಪವು ಕ್ರಿಸ್ತನೇ. ೧೮ § ವ. 23ಕಪಟದೀನತೆಯನ್ನು ಅಪೇಕ್ಷಿಸಿ ದೇವದೂತರ ಆರಾಧನೆಯಲ್ಲಿ ಆಸಕ್ತರಾಗಿದ್ದು, * ಯೆಹೆ. 13:7ದರ್ಶನಗಳಾದವೆಂದು ಕೊಚ್ಚಿಕೊಂಡು, † ರೋಮಾ. 8:7ಪ್ರಾಪಂಚಿಕ ಬುದ್ಧಿಯಿಂದಾಗಿ, ಕಾರಣವಿಲ್ಲದೆ ಉಬ್ಬಿಕೊಂಡು ಇರುವಂಥವರಿಗೆ ನಿಮಗೆ ದೊರಕಿರುವ ‡ 1 ಕೊರಿ. 9:24ಬಿರುದನ್ನು ಅಪಹರಿಸುವುದಕ್ಕೆ ಅವಕಾಶಕೊಡಬೇಡಿರಿ. ೧೯ ಇಂಥವನು § ಎಫೆ. 4:15-16ಕ್ರಿಸ್ತನೆಂಬ ತಲೆಯೊಂದಿಗೆ ಸಂಬಂಧ ಕಳೆದುಕೊಂಡವನಾಗಿದ್ದಾನೆ, ತಲೆಯಿಂದಲೇ ದೇಹವೆಲ್ಲಾ ಕೀಲುನರಗಳ ಮೂಲಕ ಬೇಕಾದ ಪೋಷಣೆಯನ್ನು ಹೊಂದಿ, ಒಂದಾಗಿ ಜೋಡಿಸಲ್ಪಟ್ಟ ದೇಹವಾಗಿ, ದೇವರು ಕೊಡುವ ಅಭಿವೃದ್ಧಿಯಿಂದ ಬೆಳೆಯುತ್ತಾ ಬರುತ್ತದೆ.
೨೦ ಪ್ರಾಪಂಚಿಕವಾದ ಪ್ರಥಮಬೋಧನೆಯ ಪಾಲಿಗೆ ನೀವು * ರೋಮಾ. 6:4ಕ್ರಿಸ್ತನೊಂದಿಗೆ ಸತ್ತವರಾಗಿದ್ದರೆ, † ಗಲಾ. 4:9ಇನ್ನೂ ಪ್ರಾಪಂಚಿಕರಾಗಿ ಬದುಕುವವರಂತೆ ಮನುಷ್ಯಕಲ್ಪಿತ ಆಜ್ಞೆಗಳನ್ನು ಮತ್ತು ಉಪದೇಶಗಳನ್ನು ಅನುಸರಿಸಿ, ೨೧-೨೨ ‡ ವ. 16; 1 ತಿಮೊ. 4:3; ಮತ್ತಾ 15:1-20; ಮಾರ್ಕ 7:1-23ಇದನ್ನು ಹಿಡಿಯಬೇಡ, ಇದರ ರುಚಿನೋಡಬೇಡ, ಅದನ್ನು ಮುಟ್ಟಬೇಡ ಎನ್ನುವ § ಯೆಶಾ. 29:13; ಮತ್ತಾ 15:9ನಿಬಂಧನೆಗಳಿಗೆ ಅಧೀನರಾಗಿರುವುದೇತಕ್ಕೆ? ಈ ಮಾನವ ಆಜ್ಞೆಗಳೂ ಹಾಗೂ ಬೋಧನೆಗಳೂ ಉಪಯೋಗದಿಂದ ನಾಶವಾಗುವ * 1 ಕೊರಿ. 6:13ಪದಾರ್ಥಗಳಿಗೆ ಅನುಸಾರವಾಗಿದೆ. ೨೩ ಇಂಥ ಉಪದೇಶಗಳು ಮನುಷ್ಯಕಲ್ಪಿತವಾದ ಆಚರಣೆಗಳಿಂದಲೂ, † ವ. 18ಕಪಟದೀನತೆಯಿಂದಲೂ ಮತ್ತು ದೇಹದಂಡನೆಯಿಂದಲೂ ಜ್ಞಾನವುಳ್ಳದೆಂದು ತೋರಿಬರುತ್ತವೆ, ಆದರೆ ಶಾರೀರಿಕ ಇಚ್ಛೆಗಳನ್ನು ನಿಯಂತ್ರಿಸುವಲ್ಲಿ ಇವುಗಳಿಂದ ‡ 1 ತಿಮೊ. 4:8ಯಾವ ಪ್ರಯೋಜನವೂ ಉಂಟಾಗುವುದಿಲ್ಲ.
‡೨:೩ ಜ್ಞಾ. 2:1-5; ಯೆಶಾ. 11:2, 45:3; 1 ಕೊರಿ. 1:24, 30, 2:6-7
†೨:೫ 1 ಪೇತ್ರ 5:9
‡೨:೬ ಕೊಲೊ. 1:10; 1 ಥೆಸ. 4:2
‡೨:೮ ಮತ್ತಾ 15:2
§೨:೮ ಕೊಲೊ. 2:20; ಗಲಾ. 4:3
*೨:೧೨ ರೋಮಾ. 6:3-4
†೨:೧೨ ಅ. ಕೃ. 2:24; 1 ಕೊರಿ. 6:14; ಎಫೆ. 1:19
*೨:೧೪ ರೋಮಾ. 7:4
†೨:೧೫ ನಿರಾಯುಧರಾಗಿ
‡೨:೧೫ ಕ್ರಿಸ್ತನಲ್ಲಿ
§೨:೧೬ ರೋಮಾ. 14:17; ಇಬ್ರಿ. 9:10; ಯಾಜ. 11:2
*೨:೧೬ ಯಾಜ. 3:2; ರೋಮಾ. 14:5; ಮಾರ್ಕ 2:28
†೨:೧೬ ರೋಮಾ. 14:3; 10, 13
‡೨:೧೭ ಇಬ್ರಿ. 8:5; 10:1
§೨:೧೮ ವ. 23
*೨:೧೮ ಯೆಹೆ. 13:7
†೨:೧೮ ರೋಮಾ. 8:7
*೨:೨೦ ರೋಮಾ. 6:4
†೨:೨೦ ಗಲಾ. 4:9
‡೨:೨೧-೨೨ ವ. 16; 1 ತಿಮೊ. 4:3; ಮತ್ತಾ 15:1-20; ಮಾರ್ಕ 7:1-23
§೨:೨೧-೨೨ ಯೆಶಾ. 29:13; ಮತ್ತಾ 15:9
†೨:೨೩ ವ. 18
‡೨:೨೩ 1 ತಿಮೊ. 4:8