೧೦
ಕ್ರೈಸ್ತರ ಎಚ್ಚರಿಕೆಗಾಗಿ ಪೌಲನು ಇಸ್ರಾಯೇಲ್ಯರ ದೃಷ್ಟಾಂತವನ್ನು ಸೂಚಿಸಿದ್ದು
೧ ಪ್ರಿಯರೇ, ನಾನು ನಿಮಗೆ ತಿಳಿಸಲು ಅಪೇಕ್ಷಿಸುವ ಸಂಗತಿ ಏನೆಂದರೆ, ನಮ್ಮ ಪಿತೃಗಳೆಲ್ಲರೂ * ವಿಮೋ. 13:21ಮೇಘದ ಅಡಿಯಲ್ಲಿದ್ದು ಸಮುದ್ರವನ್ನು ದಾಟಿಹೋದರು. ೨ † ವಿಮೋ. 14:22ಅವರೆಲ್ಲರೂ ಮೋಶೆಯನ್ನು ಹಿಂಬಾಲಿಸುವುದಕ್ಕಾಗಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ದೀಕ್ಷಾಸ್ನಾನವನ್ನು ಹೊಂದಿದರು. ೩ ಅವರೆಲ್ಲರೂ ‡ ಯೋಹಾ 6:31ಆತ್ಮಿಕವಾದ § ವಿಮೋ. 16:15,35ಒಂದೇ ಆಹಾರವನ್ನು ತಿಂದರು. ೪ * ವಿಮೋ. 17:6 ಅವರೆಲ್ಲರೂ ದೈವಿಕವಾದ ಒಂದೇ ನೀರನ್ನು ಕುಡಿದರು. ಹೇಗೆಂದರೆ ಅವರನ್ನು ಹಿಂಬಾಲಿಸುತ್ತಿದ್ದ ದೈವಿಕವಾದ ಬಂಡೆಯೊಳಗಿಂದ ಬಂದ ನೀರನ್ನು ಕುಡಿಯುತ್ತಿದ್ದರು. ಆ ಬಂಡೆ ಕ್ರಿಸ್ತನೇ. ೫ ಆದರೂ ಅವರಲ್ಲಿ ಬಹು ಮಂದಿಯನ್ನು ದೇವರು ಮೆಚ್ಚಲಿಲ್ಲ. † ಅರಣ್ಯ. 14:16,19ಆದ್ದರಿಂದ ಅವರು ಸಂಹರಿಸಲ್ಪಟ್ಟರು ಮತ್ತು ಅವರ ಶವಗಳು ಅಡವಿಯಲ್ಲೆಲ್ಲ ಬಿದ್ದವು. ೬ ‡ ಅರಣ್ಯ. 11:4,33; ಕೀರ್ತ. 106:14ಅವರು ಕೆಟ್ಟ ವಿಷಯಗಳನ್ನು ಮೋಹಿಸದಂತೆ ನಾವು ಮೋಹಿಸುವವರಾಗಬಾರದೆಂಬುದಕ್ಕಾಗಿ ಈ ಸಂಗತಿಗಳು ನಮಗೆ ನಿದರ್ಶನಗಳಾಗಿವೆ. ೭ ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿದ್ದರು, § ವಿಮೋ. 32:6ಜನರು ತಿನ್ನುವುದಕ್ಕೂ, ಕುಡಿಯುವುದಕ್ಕೂ ಕುಳಿತುಕೊಂಡರು. ಕಾಮಾಭಿಲಾಷೆಯಿಂದ ಕುಣಿದಾಡುವುದಕ್ಕೆ ಎದ್ದರು ಎಂದು ಬರೆದಿದೆಯಲ್ಲಾ. * 1 ಕೊರಿ. 10:14ನೀವು ಅವರ ಹಾಗೆ ವಿಗ್ರಹಾರಾಧಕರಾಗಬೇಡಿರಿ. ೮ † ಅರಣ್ಯ. 25:1-9ಅವರಲ್ಲಿ ಕೆಲವರು ಜಾರತ್ವ ಮಾಡಿ ಒಂದೇ ದಿನದಲ್ಲಿ ಇಪ್ಪತ್ತು ಮೂರು ಸಾವಿರ ಜನರು ಸಾವನ್ನಪ್ಪಿದರು. ‡ 1 ಕೊರಿ. 6:18ಅವರ ಹಾಗೆ ನಾವು ಜಾರತ್ವ ಮಾಡದೆ ಇರೋಣ. ೯ § ಅರಣ್ಯ. 21:5,6ಅವರಲ್ಲಿ ಕೆಲವರು ಕರ್ತನನ್ನು ಪರೀಕ್ಷಿಸಿ ಸರ್ಪಗಳಿಂದ ನಾಶವಾದರು. ನಾವು ಪರೀಕ್ಷಿಸದೆ ಇರೋಣ. ೧೦ * ಅರಣ್ಯ. 14:2, 29-37ಇದಲ್ಲದೆ ಅವರಲ್ಲಿ ಕೆಲವರು ಗೊಣಗುಟ್ಟಿ ಸಂಹಾರಕ ದೂತನ ಕೈಯಿಂದ ನಾಶವಾದರು. ನೀವು ಗುಣಗುಟ್ಟಬೇಡಿರಿ. ೧೧ ಅವರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನರೂಪವಾಗಿವೆ. ಮತ್ತು ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಇದು † ರೋಮಾ. 4:23,24ಎಚ್ಚರಿಕೆಯ ಮಾತುಗಳಾಗಿ ಬರೆದಿವೆ. ೧೨ ‡ ರೋಮಾ. 11:20ಆದಕಾರಣ ನಿಂತಿದ್ದೇನೆಂದು ತಿಳಿದಿರುವವನು ಬೀಳದಂತೆ ಎಚ್ಚರಿಕೆಯಾಗಿರಲಿ. ೧೩ ಮನುಷ್ಯರಿಗೆ ಸಾಧಾರಣವಾಗಿ ಬರುವ ಶೋಧನೆಯೇ ಹೊರತು ಬೇರೆ ಯಾವುದೂ ನಿಮಗೆ ಸಂಭವಿಸಲಿಲ್ಲವಲ್ಲ. § 1 ಕೊರಿ. 1:9ದೇವರು ನಂಬಿಗಸ್ತನು. ನಿಮ್ಮ ಶಕ್ತಿಗೆ ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವುದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ * 2 ಪೇತ್ರ. 2:9ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.
ಕ್ರಿಸ್ತ ಸೇವೆಗೂ ವಿಗ್ರಹಾರಾಧನೆಗೂ ಸಂಬಂಧವೇನೂ ಇರಬಾರದೆಂಬ ಬೋಧನೆ
೧೪ ಆದ್ದರಿಂದ ಪ್ರಿಯರೇ, † 1 ಕೊರಿ. 10:7ವಿಗ್ರಹಾರಾಧನೆಯನ್ನು ಬಿಟ್ಟು ದೂರವಾಗಿರಿ. ೧೫ ನೀವು ವಿವೇಕಿಗಳೆಂದು ಇದನ್ನು ಹೇಳುತ್ತೇನೆ. ನಾನು ಹೇಳುವುದನ್ನು ನೀವೇ ಯೋಚಿಸಿರಿ. ೧೬ ‡ ಮತ್ತಾ 26:27,28ನಾವು ದೇವರ ಸ್ತೋತ್ರಮಾಡಿ ಪಾನಪಾತ್ರೆಯಲ್ಲಿ ಪಾನ ಮಾಡುವುದು ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗಿದ್ದೇವೆಂಬುದನ್ನು ಸೂಚಿಸುತ್ತದಲ್ಲವೇ? § ಮತ್ತಾ 26:27; 1 ಕೊರಿ. 11:23,24ನಾವು ರೊಟ್ಟಿಯನ್ನು ಮುರಿದು ತಿನ್ನುವುದು ಕ್ರಿಸ್ತನ ದೇಹದಲ್ಲಿ ಪಾಲುಗಾರರಾಗಿದ್ದೇವೆಂಬುದನ್ನು ಸೂಚಿಸುತ್ತದಲ್ಲವೇ? ೧೭ ರೊಟ್ಟಿ ಒಂದೇ ಆಗಿರುವ ಹಾಗೆ ಅನೇಕರಾಗಿರುವ ನಾವೆಲ್ಲರು * 1 ಕೊರಿ. 12:12,13; ರೋಮಾ. 12:5; ಕೊಲೊ. 3:15ಒಂದೇ ದೇಹದಂತಿದ್ದೇವೆ. ಯಾಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಪಾಲು ತೆಗೆದುಕೊಂಡು ತಿನ್ನುತ್ತೇವೆ. ೧೮ ಇಸ್ರಾಯೇಲ್ಯ ಜನರ ಕುರಿತು ಯೋಚಿಸಿರಿ. † ಯಾಜ. 3:7,15ಯಜ್ಞಮಾಡಿದ್ದನ್ನು ತಿನ್ನುವವರು ಯಜ್ಞವೇದಿಯೊಡನೆ ಪಾಲುಗಾರರಾಗಿದ್ದಾರಲ್ಲವೇ. ೧೯ ಹಾಗಾದರೆ ನಾನು ಏನು ಹೇಳಿದ ಹಾಗಾಯಿತು? ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥವು ವಾಸ್ತವವೆಂದೋ ಅಥವಾ ವಿಗ್ರಹವು ‡ ಅಥವಾ ವಿಶೇಷವಾಸ್ತವವೆಂದು ನನ್ನ ಅಭಿಪ್ರಾಯವೋ? ಅಲ್ಲ, ೨೦ ಆದರೆ ಅನ್ಯಜನರು ತಾವು ಅರ್ಪಿಸುವ ಬಲಿಗಳನ್ನು ದೇವರಿಗಲ್ಲ, § ಧರ್ಮೋ. 32:17, ಕೀರ್ತ. 106:37ದೆವ್ವಗಳಿಗೆ ಅರ್ಪಿಸುತ್ತಾರೆಂಬುದು ನನ್ನ ಅಭಿಪ್ರಾಯವು. ನೀವು ದೆವ್ವಗಳೊಡನೆ ಪಾಲುಗಾರರಾಗಿರಬೇಕೆಂಬುದು ನನ್ನ ಇಷ್ಟವಲ್ಲ. ೨೧ * 2 ಕೊರಿ. 6:15,16ನೀವು ಕರ್ತನ ಪಾನಪಾತ್ರೆಯಲ್ಲಿಯೂ ಹಾಗೂ ದೆವ್ವಗಳ ಪಾನಪಾತ್ರೆಯಲ್ಲಿಯೂ ಕುಡಿಯಲಾರಿರಿ. ಕರ್ತನ ಪಂಕ್ತಿಯಲ್ಲಿಯೂ ಮತ್ತು ದೆವ್ವಗಳ ಪಂಕ್ತಿಯಲ್ಲಿಯೂ ಊಟಮಾಡಲಾರಿರಿ. ೨೨ † ಧರ್ಮೋ. 32:21ಕರ್ತನಿಗೆ ಕೋಪವನ್ನುಂಟುಮಾಡಿ ರೇಗಿಸಬೇಕೆಂದಿದ್ದೇವೋ? ಆತನಿಗಿಂತಲೂ ನಾವು ಬಲಿಷ್ಟರೋ?
ವಿಗ್ರಹಕ್ಕೆ ಅರ್ಪಿತವಾದದ್ದನ್ನು ತಿನ್ನಬಹುದೋ ಬಾರದೋ ಎಂಬ ವಿಚಾರದಲ್ಲಿ ಪರರ ಹಿತವನ್ನು ಲಕ್ಷಿಸುವುದೇ ಮುಖ್ಯವಾದದ್ದು
೨೩ ‡ 1 ಕೊರಿ. 6:18; 8:9ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಅಧಿಕಾರವುಂಟು. ಆದರೆ ಎಲ್ಲವೂ ಪ್ರಯೋಜನಕರವಾಗಿರುವುದಿಲ್ಲ. ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಅಧಿಕಾರವುಂಟು ಆದರೆ ಎಲ್ಲವೂ ಜನರನ್ನು ಭಕ್ತಿಯಲ್ಲಿ ಬೆಳೆಸುವುದಿಲ್ಲ. ೨೪ § ವ 33 ನೋಡಿರಿಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೇ ಪರಹಿತವನ್ನು ಚಿಂತಿಸಲಿ. ೨೫ * 1 ಕೊರಿ. 8:7:ಮಾಂಸದ ಅಂಗಡಿಯಲ್ಲಿ ಮಾರುವಂಥದ್ದು ಏನಿದ್ದರೂ ಅದನ್ನು ಮನಸಾಕ್ಷಿಯಲ್ಲಿ ಸಂಶಯ ಹುಟ್ಟಿಸುವಂತೆ ವಿಚಾರ ಮಾಡದೇ ತಿನ್ನಿರಿ. ೨೬ † ಕೀರ್ತ. 24:1; ಕೀರ್ತ. 50:12ಭೂಮಿಯು ಅದರಲ್ಲಿರುವ ಸಮಸ್ತವೂ ಕರ್ತನದಲ್ಲವೇ. ೨೭ ಕ್ರಿಸ್ತನನ್ನು ನಂಬದವರಲ್ಲಿ ಒಬ್ಬನು ನಿಮ್ಮನ್ನು ಊಟಕ್ಕೆ ಕರೆಯುವಾಗ ಹೋಗುವುದಕ್ಕೆ ನಿಮಗಿಷ್ಟವಿದ್ದರೆ ನಿಮಗೇನು ಬಡಿಸಿದರೂ ಮನಸಾಕ್ಷಿಯನ್ನು ಪ್ರಶ್ನಿಸದೇ ಅದನ್ನು ತಿನ್ನಿರಿ. ೨೮ ಆದರೆ ಒಬ್ಬನು ನಿಮಗೆ ಇದು ವಿಗ್ರಹಾಲಯದಲ್ಲಿ ಬಲಿಕೊಟ್ಟದ್ದು ಎಂದು ಹೇಳಿದರೆ ಈ ಸಂಗತಿಯನ್ನು ತಿಳಿಸಿದವನ ನಿಮಿತ್ತವಾಗಿಯೂ ಮನಸಾಕ್ಷಿಯ ನಿಮಿತ್ತವಾಗಿಯೂ ಅದನ್ನು ತಿನ್ನಬೇಡಿರಿ. ೨೯ ‡ 1 ಕೊರಿ. 8:9-12:ಅದು ನಿನ್ನ ಸ್ವಂತ ಮನಸಾಕ್ಷಿಗಾಗಿ ಅಲ್ಲ; ಮತ್ತೊಬ್ಬನ ಮನಸಾಕ್ಷಿಗಾಗಿಯೇ ಹೇಳಲಾಗಿದೆ. § ರೋಮಾ. 14:16:ಮತ್ತೊಬ್ಬನ ಮನಸಾಕ್ಷಿಯ ನಿಮಿತ್ತ ನನ್ನ ಅಧಿಕಾರಕ್ಕೆ ಯಾಕೆ ತೀರ್ಪಾಗಬೇಕು? ೩೦ ನಾನು ಕೃತಜ್ಞತೆಯೊಡನೆ ಊಟಮಾಡಿ ದೇವರನ್ನು ಸ್ತುತಿಸಿದ ಮೇಲೆ ಆ ಪದಾರ್ಥಗಳ ನಿಮಿತ್ತ ನನಗೆ ಯಾಕೆ ದೂಷಣೆಯಾಗಬೇಕು? ೩೧ ಹೀಗಿರಲಾಗಿ ನೀವು ತಿಂದರೂ, ಕುಡಿದರೂ, ಇನ್ನೇನು ಮಾಡಿದರೂ * 1 ಕೊರಿ. 9:22:ಎಲ್ಲವನ್ನೂ ದೇವರ ಮಹಿಮೆಗಾಗಿ ಮಾಡಿರಿ. ೩೨ ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ವಿಘ್ನವಾಗಬೇಡಿರಿ. ೩೩ ನಾನಂತೂ ಸ್ವಪ್ರಯೋಜನಕ್ಕಾಗಿ ಚಿಂತಿಸದೇ ಮನುಷ್ಯರೆಲ್ಲರು ರಕ್ಷಣೆ ಹೊಂದಬೇಕೆಂದು ಅವರ ಪ್ರಯೋಜನಕ್ಕಾಗಿ ಚಿಂತಿಸಿ, ಎಲ್ಲರನ್ನು ಎಲ್ಲಾ ವಿಷಯಗಳಲ್ಲಿ ಮೆಚ್ಚಿಸುವವನಾಗಿದ್ದೇನೆ.
‡೧೦:೩ ಯೋಹಾ 6:31
†೧೦:೫ ಅರಣ್ಯ. 14:16,19
‡೧೦:೬ ಅರಣ್ಯ. 11:4,33; ಕೀರ್ತ. 106:14
†೧೦:೮ ಅರಣ್ಯ. 25:1-9
§೧೦:೯ ಅರಣ್ಯ. 21:5,6
*೧೦:೧೦ ಅರಣ್ಯ. 14:2, 29-37
†೧೦:೧೧ ರೋಮಾ. 4:23,24
‡೧೦:೧೨ ರೋಮಾ. 11:20
*೧೦:೧೩ 2 ಪೇತ್ರ. 2:9
‡೧೦:೧೬ ಮತ್ತಾ 26:27,28
§೧೦:೧೬ ಮತ್ತಾ 26:27; 1 ಕೊರಿ. 11:23,24
*೧೦:೧೭ 1 ಕೊರಿ. 12:12,13; ರೋಮಾ. 12:5; ಕೊಲೊ. 3:15
‡೧೦:೧೯ ಅಥವಾ ವಿಶೇಷ
§೧೦:೨೦ ಧರ್ಮೋ. 32:17, ಕೀರ್ತ. 106:37
§೧೦:೨೪ ವ 33 ನೋಡಿರಿ
†೧೦:೨೬ ಕೀರ್ತ. 24:1; ಕೀರ್ತ. 50:12
§೧೦:೨೯ ರೋಮಾ. 14:16: