ಸಮಾಪ್ತಿಯ ಕೀರ್ತನೆ
೧೫೦
೧ ಯೆಹೋವನಿಗೆ ಸ್ತೋತ್ರ!
ದೇವರನ್ನು ಆತನ ಪರಿಶುದ್ಧ ಆಲಯದಲ್ಲಿ ಸ್ತುತಿಸಿರಿ;
ಆತನ ಶಕ್ತಿಪ್ರದರ್ಶಕವಾದ ಆಕಾಶಮಂಡಲದಲ್ಲಿ ಆತನನ್ನು ಸ್ತುತಿಸಿರಿ.
೨ ಆತನ ಮಹತ್ಕಾರ್ಯಗಳಿಗಾಗಿ ಆತನನ್ನು ಸ್ತುತಿಸಿರಿ;
ಆತನ ಮಹಾಪ್ರಭಾವಕ್ಕೆ ಸರಿಯಾಗಿ ಆತನನ್ನು ಸ್ತುತಿಸಿರಿ.
೩ ಕೊಂಬೂದುತ್ತಾ ಆತನನ್ನು ಸ್ತುತಿಸಿರಿ;
ಸ್ವರಮಂಡಲ, ಕಿನ್ನರಿಗಳಿಂದ ಆತನನ್ನು ಸ್ತುತಿಸಿರಿ.
೪ ದಮ್ಮಡಿಯನ್ನು ಬಡಿಯುತ್ತಾ, ಕುಣಿಯುತ್ತಾ ಆತನನ್ನು ಸ್ತುತಿಸಿರಿ;
ತಂತೀವಾದ್ಯಗಳಿಂದಲೂ, ಕೊಳಲುಗಳಿಂದಲೂ ಆತನನ್ನು ಸ್ತುತಿಸಿರಿ.
೫ ತಾಳದಿಂದ ಆತನನ್ನು ಸ್ತುತಿಸಿರಿ;
ಝಲ್ಲರಿಯಿಂದ ಆತನನ್ನು ಸ್ತುತಿಸಿರಿ.
೬ ಶ್ವಾಸವಿರುವ ಎಲ್ಲವೂ ಯೆಹೋವನನ್ನು ಸ್ತುತಿಸಲಿ;
ಯೆಹೋವನಿಗೆ ಸ್ತೋತ್ರ!