ಭೂಲೋಕವೆಲ್ಲಾ ಯೆಹೋವನನ್ನು ಕೊಂಡಾಡಬೇಕು
೧೧೭
(ಕೀರ್ತ. 66)
೧ ಸರ್ವಜನಾಂಗಗಳೇ, ಯೆಹೋವನನ್ನು ಕೀರ್ತಿಸಿರಿ;
ಸಮಸ್ತ ಪ್ರಜೆಗಳೇ, ಆತನನ್ನು ಕೊಂಡಾಡಿರಿ.
೨ ಆತನ ಕೃಪೆಯು ನಮ್ಮ ಮೇಲೆ ಅಪಾರವಾಗಿದೆ;
ಯೆಹೋವನ ಸತ್ಯತೆಯು ಸದಾ ಇರುವುದು.
ಯೆಹೋವನಿಗೆ ಸ್ತೋತ್ರ!