೧೨
ಪವಿತ್ರಾತ್ಮನಿಂದುಂಟಾಗುವ ವರಗಳನ್ನು ಕುರಿತದ್ದು
೧ ಪ್ರಿಯರೇ * 1 ಕೊರಿ. 14:1ಪವಿತ್ರಾತ್ಮನಿಂದುಂಟಾಗುವ ವರಗಳನ್ನು ಕುರಿತು ನಿಮಗೆ ತಿಳುವಳಿಕೆಯಿರಬೇಕೆಂದು ನಾನು ಅಪೇಕ್ಷಿಸುತ್ತೇನೆ. ೨  ಎಫೆ. 2:11-12, 1 ಪೇತ್ರ. 4:3ನೀವು ಅನ್ಯಜನರಾಗಿದ್ದಾಗ ಹಬ. 2:18-19, ಕೀರ್ತ. 115:5ಮೂಕ ವಿಗ್ರಹಗಳು ನಿಮ್ಮನ್ನು ನಡೆಸಿದ ಹಾಗೆ ನೀವು ಅವುಗಳ ಬಳಿಗೆ ಹೋಗುತ್ತಿದ್ದಿರೆಂದು ಬಲ್ಲಿರಿ. ೩ ಹೀಗಿರುವುದರಿಂದ ನಾನು ನಿಮಗೆ ತಿಳಿಸುವುದನ್ನು ಕೇಳಿರಿ. § 1 ಯೋಹಾ. 4:2-3ದೇವರಾತ್ಮನ ಪ್ರೇರಣೆಯಿಂದ ಮಾತನಾಡುವ ಯಾವ ಮನುಷ್ಯನಾದರೂ ಯೇಸುವನ್ನು ಶಾಪಗ್ರಸ್ತನೆಂದು ಹೇಳುವುದಿಲ್ಲ. ಮತ್ತು * ಯೋಹಾ. 15:26, ಮತ್ತಾ 16:17ಪವಿತ್ರಾತ್ಮನ ಪ್ರೇರಣೆಯಿಂದಲೇ ಹೊರತು ಯಾವ ಮನುಷ್ಯನಾದರೂ ಯೇಸುವನ್ನು ಕರ್ತನೆಂದು ಹೇಳಲಾರನು.
೪  ರೋಮಾ. 12:6:ವರಗಳಲ್ಲಿ ಬೇರೆ ಬೇರೆ ವಿಧಗಳುಂಟು. ಆದರೆ ಎಫೆ. 4:4-6ದೇವರಾತ್ಮನು ಒಬ್ಬನೇ. ೫ ಸೇವೆಗಳಲ್ಲಿ ಬೇರೆ ಬೇರೆ ವಿಧಗಳುಂಟು ಆದರೆ ಕರ್ತನು ಒಬ್ಬನೇ. ೬  § ರೋಮಾ. 12:7; ಎಫೆ. 4:11:ಕಾರ್ಯಗಳಲ್ಲಿ ಬೇರೆ ಬೇರೆ ವಿಧಗಳುಂಟು ಆದರೆ ಸರ್ವರಲ್ಲಿಯೂ ಸರ್ವ ಕಾರ್ಯಗಳನ್ನು ಸಾಧಿಸುವ ದೇವರು ಒಬ್ಬನೇ. ೭ ಆದರೆ * ಎಫೆ. 4:7, ರೋಮಾ. 12:3ಪ್ರತಿಯೊಬ್ಬನಲ್ಲಿ ತೋರಿಬರುವ ದೇವರಾತ್ಮನ ವರಗಳು ಸರ್ವರ ಪ್ರಯೋಜನಕ್ಕಾಗಿ ಕೊಡಲ್ಪಟ್ಟಿವೆ. ೮ ಒಬ್ಬನಿಗೆ ದೇವರಾತ್ಮನ ಮೂಲಕ 1 ಕೊರಿ. 2:6-7ಜ್ಞಾನವಾಕ್ಯವು ಮತ್ತೊಬ್ಬನಿಗೆ ಆ ಆತ್ಮನಿಂದಲೇ ತಿಳುವಳಿಕೆಯ ವಾಕ್ಯವು ೯ ಒಬ್ಬನಿಗೆ ಆ ಆತ್ಮನಿಂದಲೇ 1 ಕೊರಿ. 13:2, 2 ಕೊರಿ. 4:13ನಂಬಿಕೆಯು ಮತ್ತೊಬ್ಬನಿಗೆ ಆ ಒಬ್ಬ ಆತ್ಮನಿಂದಲೇ § 1 ಕೊರಿ. 12:28-30ನಾನಾ ರೋಗಗಳನ್ನು ವಾಸಿಮಾಡುವ ವರವು, ೧೦ ಮತ್ತೊಬ್ಬನಿಗೆ * 1 ಕೊರಿ. 12:28-29ಮಹತ್ಕಾರ್ಯಗಳನ್ನು ಮಾಡುವ ವರವು, ಇನ್ನೊಬ್ಬನಿಗೆ 1 ಕೊರಿ. 13:2,8; 14:1ಪ್ರವಾದನೆಯ ವರವು, ಒಬ್ಬನಿಗೆ 1 ಕೊರಿ. 14:29, 1 ಯೋಹಾ. 4:1ಆತ್ಮವನ್ನು ವಿವೇಚಿಸುವ ವರವು, ಮತ್ತೊಬ್ಬನಿಗೆ § 1 ಕೊರಿ. 12:30, 14:26ವಿವಿಧ ಭಾಷೆಗಳನ್ನಾಡುವ ವರವು, ಒಬ್ಬನಿಗೆ ಭಾಷೆಗಳ ಅರ್ಥವನ್ನು ಬಿಡಿಸಿ ಹೇಳುವ ವರವು ಕೊಡಲ್ಪಡುತ್ತದೆ. ೧೧ ಆದರೆ ಈ ಎಲ್ಲವುಗಳಲ್ಲಿ ಕಾರ್ಯ ಮಾಡುವ ಆ ಒಬ್ಬ ಆತ್ಮನೇ ವರಗಳನ್ನೆಲ್ಲಾ ತನ್ನ ಚಿತ್ತಾನುಸಾರವಾಗಿ ಒಬ್ಬೊಬ್ಬನಿಗೆ ಹಂಚಿಕೊಡುವವನಾಗಿದ್ದಾನೆ.
೧೨ ಹೇಗೆ ದೇಹವು * 1 ಕೊರಿ. 10:17ಒಂದಾಗಿದ್ದರೂ ಅದಕ್ಕಿರುವ ಅಂಗಗಳು ಅನೇಕವಾಗಿವೆಯೋ, ಹೇಗೆ ದೇಹದ ಅಂಗಗಳೆಲ್ಲವೂ ಅನೇಕವಾಗಿದ್ದು ಒಂದೇ ದೇಹವಾಗಿದೆಯೋ, 1 ಕೊರಿ. 12:27.ಹಾಗೆಯೇ ಕ್ರಿಸ್ತನು ಇದ್ದಾನೆ. ೧೩  ಗಲಾ. 3:28; ಕೊಲೊ. 3:11; ಎಫೆ. 2:13-17.ಯೆಹೂದ್ಯರಾಗಲಿ, ಗ್ರೀಕರಾಗಲಿ, ದಾಸರಾಗಲಿ, ಸ್ವತಂತ್ರರಾಗಲಿ ನಾವೆಲ್ಲರೂ ಒಂದೇ ದೇಹವಾಗುವುದಕ್ಕಾಗಿ ಒಂದೇ ಆತ್ಮನಲ್ಲಿ ದೀಕ್ಷಾಸ್ನಾನಮಾಡಿಸಿಕೊಂಡೆವು. § ಯೋಹಾ 7:37-39ಒಂದೇ ಆತ್ಮವು ನಮ್ಮೆಲ್ಲರಿಗೆ ಪಾನವಾಗಿ ಕೊಡಲ್ಪಟ್ಟಿತು. ೧೪ ದೇಹವು ಒಂದೇ ಅಂಗವಲ್ಲ. ಅನೇಕ ಅಂಗಗಳುಳ್ಳದ್ದಾಗಿದೆ. ೧೫ ಕಾಲು ನಾನು ಕೈಯಲ್ಲದ ಕಾರಣ ದೇಹಕ್ಕೆ ಸೇರಿಲ್ಲವೆಂದು ಹೇಳಿದರೂ ಅದು ದೇಹಕ್ಕೆ ಸೇರದೆ ಇರುವುದೋ? ೧೬ ಕಿವಿ ನಾನು ಕಣ್ಣಲ್ಲದ ಕಾರಣ ನಾನು ದೇಹಕ್ಕೆ ಸೇರಿಲ್ಲವೆಂದು ಹೇಳಿದರೂ ಅದು ದೇಹಕ್ಕೆ ಸೇರದೆ ಇರುವುದೋ? ೧೭ ದೇಹವೆಲ್ಲಾ ಕಣ್ಣಾದರೆ ನೀವು ಏನೂ ಕೇಳಲಾಗುತ್ತಿರಲಿಲ್ಲ. ದೇಹವೆಲ್ಲಾ ಕಿವಿಯಾದರೆ ನೀವು ಯಾವ ವಾಸನೆಯನ್ನು ಮೂಸಲಾಗುತ್ತಿರಲಿಲ್ಲ. ೧೮ ಆದರೆ ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು * 1 ಕೊರಿ. 12:11ತನಗೆ ಸರಿಯಾಗಿ ತೋಚಿದ ಪ್ರಕಾರ ದೇಹದೊಳಗೆ ಇಟ್ಟಿದ್ದಾನೆ. ೧೯ ಅವೆಲ್ಲವೂ ಒಂದೇ ಅಂಗವಾಗಿದ್ದರೆ ದೇಹವೆಲ್ಲಿರುವುದು? ೨೦ ಆದರೆ ಅಂಗಗಳು ಅನೇಕವಾಗಿದೆ ಆದರೆ ದೇಹವು ಒಂದೇ. ೨೧ ಕಣ್ಣು ಕೈಗೆ, ನೀನು ನನಗೆ ಅವಶ್ಯವಿಲ್ಲವೆಂದೂ, ತಲೆಯು ಪಾದಗಳಿಗೆ ನೀವು ನನಗೆ ಅವಶ್ಯವಿಲ್ಲವೆಂದೂ ಹೇಳುವುದಕ್ಕಾಗುವುದಿಲ್ಲ. ೨೨ ದೇಹದಲ್ಲಿ ಅಲ್ಪಮಾನವುಳ್ಳವುಗಳು ಎಂದೆಣಿಸಿ ಕಾಣುವ ಅಂಗಗಳನ್ನು ಅತ್ಯವಶ್ಯವೆಂದು ತಿಳಿಯಬೇಕಲ್ಲವೋ? ೨೩ ಮತ್ತು ನಾವು ದೇಹದಲ್ಲಿ ಅಲ್ಪಮಾನವುಳ್ಳವುಗಳು ಎಂದೆಣಿಸುವ ಭಾಗಗಳಿಗೆ ಉಡಿಗೆಯಿಂದ ಹೆಚ್ಚಾದ ಮಾನವನ್ನು ಕೊಡುವುದುಂಟಲ್ಲಾ. ಹೀಗೆ ಮಾನವಿಲ್ಲದ ಅಂಗಗಳಿಗೆ ಹೆಚ್ಚಾದ ಮಾನವುಂಟಾಗುತ್ತದೆ. ೨೪-೨೫ ಮಾನವುಳ್ಳ ಅಂಗಗಳಿಗೆ ಏನೂ ಅವಶ್ಯವಿಲ್ಲ. ದೇಹದಲ್ಲಿ 1 ಕೊರಿ. 1:10, 11:18ಭೇದವೇನೂ ಇರದೇ ಅಂಗಗಳು ಒಂದಕ್ಕೊಂದರ ಹಿತವನ್ನು ಚಿಂತಿಸುವ ಹಾಗೆ ದೇವರು ಕೊರತೆಯುಳ್ಳದ್ದಕ್ಕೆ ಹೆಚ್ಚಾದ ಮಾನವನ್ನು ಕೊಟ್ಟು ದೇಹವನ್ನು ಹದವಾಗಿ ಜೋಡಿಸಿದ್ದಾನೆ. ೨೬ ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ. ಒಂದು ಅಂಗ ಗೌರವಿಸಲ್ಪಟ್ಟರೆ ರೋಮಾ. 12:15ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ.
೨೭  § ಎಫೆ. 1:23; 4:12, ಕೊಲೊ 1:24ನೀವು ಕ್ರಿಸ್ತನ ದೇಹವು ಮತ್ತು * ರೋಮಾ. 12:5ಒಬ್ಬೊಬ್ಬರಾಗಿ ಅದಕ್ಕೆ ಅಂಗಗಳಾಗಿದ್ದೀರಿ. ೨೮ ದೇವರು ತನ್ನ ಸಭೆಯಲ್ಲಿ ಎಫೆ. 4:11ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ ಎಫೆ. 2:20, 3:5ಪ್ರವಾದಿಗಳನ್ನು, ಮೂರನೆಯದಾಗಿ § ಅ. ಕೃ. 13:1, ರೋಮಾ. 12:7ಬೋಧಕರನ್ನು ಇಟ್ಟಿದ್ದಾನೆ. ಆ ಮೇಲೆ * 1 ಕೊರಿ. 12:10ಮಹತ್ಕಾರ್ಯ ಮಾಡುವ ಶಕ್ತಿಯನ್ನು, 1 ಕೊರಿ. 12:9ನಾನಾ ರೋಗಗಳನ್ನು ವಾಸಿಮಾಡುವ ವರವನ್ನೂ, ಪರಸಹಾಯ ಮಾಡುವ ಗುಣವನ್ನೂ, ರೋಮಾ. 12:8, 1 ತಿಮೊ. 5:17; ಇಬ್ರಿ. 13:7,17,24ಕಾರ್ಯಗಳನ್ನು ನಿರ್ವಹಿಸುವ ಜ್ಞಾನವನ್ನು ಮತ್ತು ವಿವಿಧ ಭಾಷೆಗಳನ್ನಾಡುವ ವರವನ್ನೂ ಅವರವರಿಗೆ ಬೇರೆ ಬೇರೆಯಾಗಿ ಕೊಟ್ಟಿದ್ದಾನೆ. ೨೯ ಎಲ್ಲರು ಅಪೊಸ್ತಲರೋ? ಎಲ್ಲರು ಪ್ರವಾದಿಗಳೋ? ಎಲ್ಲರೂ ಬೋಧಕರೋ? ಎಲ್ಲರೂ ಮಹತ್ಕಾರ್ಯಗಳನ್ನು ಮಾಡುವವರೋ? ೩೦ ರೋಗ ವಾಸಿಮಾಡುವ ವರಗಳು ಎಲ್ಲರಿಗೂ ಉಂಟೋ? ಎಲ್ಲರೂ ಅನ್ಯಭಾಷೆಗಳನ್ನಾಡುವರೋ? ಅನ್ಯಭಾಷೆಗಳ ಅರ್ಥವನ್ನು ಹೇಳುವುದಕ್ಕೆ ಎಲ್ಲರಿಗೂ ಶಕ್ತಿಯುಂಟೋ? ೩೧  § 1 ಕೊರಿ. 14:1,39ಇವುಗಳಲ್ಲಿ ಶ್ರೇಷ್ಠ ವರಗಳನ್ನು ಆಸಕ್ತಿಯಿಂದ ಅಪೇಕ್ಷಿಸಿರಿ. ಇನ್ನೂ ಸರ್ವೋತ್ತಮವಾದ ಮಾರ್ಗವೊಂದನ್ನು ನಿಮಗೆ ತೋರಿಸುತ್ತೇನೆ.

*೧೨:೧ 1 ಕೊರಿ. 14:1

೧೨:೨ ಎಫೆ. 2:11-12, 1 ಪೇತ್ರ. 4:3

೧೨:೨ ಹಬ. 2:18-19, ಕೀರ್ತ. 115:5

§೧೨:೩ 1 ಯೋಹಾ. 4:2-3

*೧೨:೩ ಯೋಹಾ. 15:26, ಮತ್ತಾ 16:17

೧೨:೪ ರೋಮಾ. 12:6:

೧೨:೪ ಎಫೆ. 4:4-6

§೧೨:೬ ರೋಮಾ. 12:7; ಎಫೆ. 4:11:

*೧೨:೭ ಎಫೆ. 4:7, ರೋಮಾ. 12:3

೧೨:೮ 1 ಕೊರಿ. 2:6-7

೧೨:೯ 1 ಕೊರಿ. 13:2, 2 ಕೊರಿ. 4:13

§೧೨:೯ 1 ಕೊರಿ. 12:28-30

*೧೨:೧೦ 1 ಕೊರಿ. 12:28-29

೧೨:೧೦ 1 ಕೊರಿ. 13:2,8; 14:1

೧೨:೧೦ 1 ಕೊರಿ. 14:29, 1 ಯೋಹಾ. 4:1

§೧೨:೧೦ 1 ಕೊರಿ. 12:30, 14:26

*೧೨:೧೨ 1 ಕೊರಿ. 10:17

೧೨:೧೨ 1 ಕೊರಿ. 12:27.

೧೨:೧೩ ಗಲಾ. 3:28; ಕೊಲೊ. 3:11; ಎಫೆ. 2:13-17.

§೧೨:೧೩ ಯೋಹಾ 7:37-39

*೧೨:೧೮ 1 ಕೊರಿ. 12:11

೧೨:೨೪-೨೫ 1 ಕೊರಿ. 1:10, 11:18

೧೨:೨೬ ರೋಮಾ. 12:15

§೧೨:೨೭ ಎಫೆ. 1:23; 4:12, ಕೊಲೊ 1:24

*೧೨:೨೭ ರೋಮಾ. 12:5

೧೨:೨೮ ಎಫೆ. 4:11

೧೨:೨೮ ಎಫೆ. 2:20, 3:5

§೧೨:೨೮ ಅ. ಕೃ. 13:1, ರೋಮಾ. 12:7

*೧೨:೨೮ 1 ಕೊರಿ. 12:10

೧೨:೨೮ 1 ಕೊರಿ. 12:9

೧೨:೨೮ ರೋಮಾ. 12:8, 1 ತಿಮೊ. 5:17; ಇಬ್ರಿ. 13:7,17,24

§೧೨:೩೧ 1 ಕೊರಿ. 14:1,39