12
ಘಟಸರ್ಪ ಮತ್ತು ಸ್ತ್ರೀ
ಪರಲೋಕದಲ್ಲಿ ಒಂದು ಮಹಾ ಚಿಹ್ನೆಯು ಕಾಣಿಸಿತು. ಸ್ತ್ರೀಯೊಬ್ಬಳು * 12:1 ಕೀರ್ತ 104:2; ಪರಮ. 6:10:ಸೂರ್ಯಭೂಶಿತಳಾಗಿದ್ದಳು. ಆಕೆಯ ಪಾದದಡಿಯಲ್ಲಿ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳಿಂದ ಮಾಡಿದ್ದ ಒಂದು ಕಿರೀಟವಿತ್ತು. 12:2 ಯೆಶಾ 66:7-10; ಮೀಕ. 4:10; ಮತ್ತಾ 24:8; ಯೋಹಾ 16:21:ಆಕೆಯು ಗರ್ಭಿಣಿಯಾಗಿದ್ದು ಹೆರುವುದಕ್ಕೆ ಪ್ರಸವವೇದನೆಯಿಂದ ನರಳುತ್ತಾ ಅಳುತ್ತಿದ್ದಳು. ಪರಲೋಕದಲ್ಲಿ ಮತ್ತೊಂದು ಚಿಹ್ನೆಯು ಕಾಣಿಸಿತು. ಅಲ್ಲಿ 12:3 ಯೆಶಾ 27:1; ಪ್ರಕ 17:3:ಕೆಂಪು ಘಟಸರ್ಪವೊಂದು ಇತ್ತು. ಅದಕ್ಕೆ § 12:3 ಪ್ರಕ 13:1; 17:9, 12:ಏಳು ತಲೆಗಳೂ * 12:3 ದಾನಿ. 7:7:ಹತ್ತು ಕೊಂಬುಗಳು ಇದ್ದವು. ಅದರ ತಲೆಗಳ ಮೇಲೆ 12:3 ಪ್ರಕ 19:12:ಏಳು ಕಿರೀಟಗಳು ಇದ್ದವು. ಅದು ತನ್ನ ಬಾಲದಿಂದ 12:4 ಪ್ರಕ 8:7:ಆಕಾಶದ ನಕ್ಷತ್ರಗಳಲ್ಲಿ ಮೂರರಲ್ಲೊಂದು ಭಾಗವನ್ನು ಎಳೆದು § 12:4 ದಾನಿ. 8:10:ಭೂಮಿಗೆ ಎಸೆಯಿತು. ಹೆರುತ್ತಿದ್ದ ಆ ಸ್ತ್ರೀಯು ಹೆತ್ತ ಕೂಡಲೇ * 12:4 ಮತ್ತಾ 2:16:ಆಕೆಯ ಮಗುವನ್ನು ನುಂಗಿಬಿಡಬೇಕೆಂದು ಆ ಘಟಸರ್ಪವು ಆಕೆಯ ಮುಂದೆ ನಿಂತುಕೊಂಡಿತ್ತು. ಆಕೆ 12:5 ಮತ್ತಾ 2:6; ಪ್ರಕ 2:27:ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳಬೇಕಾದ ಒಂದು ಗಂಡು ಮಗುವನ್ನು ಹೆತ್ತಳು. ಆಕೆಯ ಕೂಸು ಪಕ್ಕನೆ ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ಎತ್ತಲ್ಪಟ್ಟಿತು. ಮತ್ತು ಆ ಸ್ತ್ರೀಯು ಅರಣ್ಯಕ್ಕೆ ಓಡಿಹೋದಳು. ಅಲ್ಲಿ ಆಕೆಗೆ 12:6 ಪ್ರಕ 11:2, 3; 13:5:ಸಾವಿರದ ಇನ್ನೂರ ಅರವತ್ತು ದಿನಗಳ ವರೆಗೆ ಪೋಷಣೆಮಾಡುವುದಕ್ಕಾಗಿ ದೇವರು ಸಿದ್ಧಮಾಡಿದ್ದ ಸ್ಥಳವನ್ನು ಅವಳು ಕಂಡಳು.
ಪರಲೋಕದಲ್ಲಿ ಯುದ್ಧ ನಡೆಯಿತು. § 12:7 ಯೂದ. 9:ಮೀಕಾಯೇಲನೂ ಅವನ ದೂತರೂ ಘಟಸರ್ಪದ ವಿರುದ್ಧ ಯುದ್ಧ ಮಾಡಿದರು. ಘಟಸರ್ಪವೂ * 12:7 ಮತ್ತಾ 25:41; 2 ಪೇತ್ರ. 2:4; ಯೂದ 6:ಅವನ ದೂತರೂ ಯುದ್ಧ ಮಾಡಿ ಕಾದಾಡಿದರು. ಆದರೆ ಘಟಸರ್ಪಕ್ಕೆ ಸಾಕಷ್ಟು ಸಾಮರ್ಥ್ಯವಿಲ್ಲದ್ದರಿಂದ ಅದು ಸೋಲನ್ನಪ್ಪಿತು. ಹೀಗೆ ಪರಲೋಕದಲ್ಲಿ ಅವರಿಗೂ ಸ್ಥಳವಿಲ್ಲದಂತಾಯಿತು. 12:9 ಪ್ರಕ 20:3, 10; 13:14; ಯೋಹಾ 8:44:ಭೂಲೋಕದವರನ್ನೆಲ್ಲಾ ಮರುಳುಗೊಳಿಸಿ ಪಾಪ ಮಾಡಿಸುತ್ತಿದ್ದ ಆ ಮಹಾ ಘಟಸರ್ಪವು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಆ 12:9 ಆದಿ 3:1; ಪ್ರಕ 20:2:ಪುರಾತನ ಸರ್ಪವನ್ನು § 12:9 ಲೂಕ 10:18; ಯೊಹಾ. 12:31:ಭೂಮಿಗೆ ತಳ್ಳಲಾಯಿತು. ಅವನ ದೂತರು ಅವನೊಂದಿಗೆ ದೊಬ್ಬಲ್ಪಟ್ಟರು.
10 ಆಗ ಪರಲೋಕದಲ್ಲಿ ಮಹಾಶಬ್ದವನ್ನು ಕೇಳಿದೆನು. ಅದು, “ಈಗ ನಮ್ಮ ದೇವರ * 12:10 ಅಥವಾ ಜಯವೂ. ಪ್ರಕ 7:10; 19:1:ರಕ್ಷಣೆಯೂ, ಶಕ್ತಿಯೂ, ರಾಜ್ಯವೂ, ಆತನ ಕ್ರಿಸ್ತನ ಅಧಿಪತ್ಯ ಆರಂಭವಾಗಿದೆ. ಹಗಲಿರುಳು ನಮ್ಮ ಸಹೋದರರನ್ನು ಕುರಿತು ನಮ್ಮ ದೇವರ ಮುಂದೆ ಸದಾ 12:10 ಯೋಬ. 1:9; 2:5; ಜೆಕ. 3:1:ದೂರು ಹೇಳುತ್ತಿದ್ದ ದೂರುಗಾರನು ದೊಬ್ಬಲ್ಪಟ್ಟಿದ್ದಾನೆ. 11 ಅವರು 12:11 ಪ್ರಕ 2:10:ಮರಣದವರೆಗೆ ತಮ್ಮ § 12:11 ಲೂಕ 14:26; ಯೋಹಾ 12:25:ಪ್ರಾಣವನ್ನು ಪ್ರೀತಿಸದೆ, ಯಜ್ಞದ ಕುರಿಮರಿಯಾದಾತನ ರಕ್ತದಿಂದಲೂ ತಮ್ಮ ಸಾಕ್ಷಿಯ ವಾಕ್ಯದಿಂದಲೂ * 12:11 ಪ್ರಕ 15:2; ಯೋಹಾ 16:33; ರೋಮಾ. 8:37; 16:20:ಅವನನ್ನು ಜಯಿಸಿದರು. 12 ಆದ್ದರಿಂದ 12:12 ಕೀರ್ತ 96:11; ಯೆಶಾ 44:23; 49:13; ಪ್ರಕ 18:20:ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ. ಆದರೆ 12:12 ಪ್ರಕ 8:13:ಭೂಮಿ, ಸಮುದ್ರಗಳೇ ನಿಮ್ಮ ದುರ್ಗತಿಯನ್ನು ಏನೆಂದು ಹೇಳಲಿ ಏಕೆಂದರೆ ಸೈತಾನನು § 12:12 ಮತ್ತಾ 8:29; ಪ್ರಕ 10:6:ತನಗಿರುವ ಕಾಲವು ಇನ್ನು ಸ್ವಲ್ಪಮಾತ್ರವೆಂದು ತಿಳಿದು ಮಹಾ ರೋಷವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ” ಎಂಬುದಾಗಿ ಹೇಳಿತು.
13 ಘಟಸರ್ಪನು ತಾನು ದೊಬ್ಬಲ್ಪಟ್ಟು ಭೂಮಿಗೆ ಬಿದ್ದಿರುವುದನ್ನು ಗ್ರಹಿಸಿಕೊಂಡು, * 12:13 ವ. 5:ಗಂಡು ಮಗುವನ್ನು ಹೆತ್ತ ಸ್ತ್ರೀಯನ್ನು ಹಿಂಸಿಸುವುದಕ್ಕೆ ಅಟ್ಟಿಸಿಕೊಂಡು ಹೋಯಿತು. 14 ಆದರೆ ಆ ಸ್ತ್ರೀಯು 12:14 ವ. 6:ಮರುಭೂಮಿಯಲ್ಲಿದ್ದ ತನ್ನ ಸ್ಥಳಕ್ಕೆ ಹಾರಿಹೋಗುವುದಕ್ಕಾಗಿ 12:14 ವಿಮೋ 19:4:ಆಕೆಗೆ ದೊಡ್ಡ ಹದ್ದಿನ ಎರಡು ರೆಕ್ಕೆಗಳು ಕೊಡಲ್ಪಟ್ಟವು. ಅಲ್ಲಿ ಆಕೆಯು ಒಂದು ಕಾಲ, ಎರಡು ಕಾಲ, ಅರ್ಧ ಕಾಲ ಸರ್ಪನಿಗೆ ಸಿಗದಂತೆ ಪೋಷಣೆ ಹೊಂದಿದಳು. 15 ಆ ಸರ್ಪನು ಪ್ರವಾಹದಿಂದ ಸ್ತ್ರೀಯನ್ನು ಸೆಳೆದುಕೊಂಡು ಹೋಗಬೇಕೆಂದು ಆಕೆಯ ಹಿಂದೆ ತನ್ನ ಬಾಯೊಳಗಿಂದ ನೀರನ್ನು ನದಿಯಂತೆ ಸುರಿಸಿದನು. 16 ಆದರೆ ಭೂಮಿಯು ಆ ಸ್ತ್ರೀಗೆ ಸಹಾಯಮಾಡಿತು. ಅದು ತನ್ನ ಬಾಯಿ ತೆರೆದು ಘಟಸರ್ಪನು ತನ್ನ ಬಾಯೊಳಗಿಂದ ಬಿಟ್ಟ ನದಿಯನ್ನು ನುಂಗಿಬಿಟ್ಟಿತ್ತು. 17 ಆಗ ಘಟಸರ್ಪನು ಸ್ತ್ರೀಯ ಮೇಲೆ ಬಹು ಕೋಪಗೊಂಡು, § 12:17 ಆದಿ 3:15:ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ, * 12:17 ಪ್ರಕ 14:12; 1 ಯೋಹಾ 2:3:ದೇವರ ಆಜ್ಞೆಗಳನ್ನು ಕೈಗೊಂಡು ನಡೆದು 12:17 ಪ್ರಕ 1:2; 6:9; 19:10:ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೊಂದಿದವರ ಮೇಲೆ 12:17 ಪ್ರಕ 11:7; 13:7:ಯುದ್ಧಮಾಡುವುದಕ್ಕೆ ಹೊರಟು, 18 ಸಮುದ್ರ ತೀರದ ಮರಳಿನ ಮೇಲೆ ನಿಂತನು.

*12:1 12:1 ಕೀರ್ತ 104:2; ಪರಮ. 6:10:

12:2 12:2 ಯೆಶಾ 66:7-10; ಮೀಕ. 4:10; ಮತ್ತಾ 24:8; ಯೋಹಾ 16:21:

12:3 12:3 ಯೆಶಾ 27:1; ಪ್ರಕ 17:3:

§12:3 12:3 ಪ್ರಕ 13:1; 17:9, 12:

*12:3 12:3 ದಾನಿ. 7:7:

12:3 12:3 ಪ್ರಕ 19:12:

12:4 12:4 ಪ್ರಕ 8:7:

§12:4 12:4 ದಾನಿ. 8:10:

*12:4 12:4 ಮತ್ತಾ 2:16:

12:5 12:5 ಮತ್ತಾ 2:6; ಪ್ರಕ 2:27:

12:6 12:6 ಪ್ರಕ 11:2, 3; 13:5:

§12:7 12:7 ಯೂದ. 9:

*12:7 12:7 ಮತ್ತಾ 25:41; 2 ಪೇತ್ರ. 2:4; ಯೂದ 6:

12:9 12:9 ಪ್ರಕ 20:3, 10; 13:14; ಯೋಹಾ 8:44:

12:9 12:9 ಆದಿ 3:1; ಪ್ರಕ 20:2:

§12:9 12:9 ಲೂಕ 10:18; ಯೊಹಾ. 12:31:

*12:10 12:10 ಅಥವಾ ಜಯವೂ. ಪ್ರಕ 7:10; 19:1:

12:10 12:10 ಯೋಬ. 1:9; 2:5; ಜೆಕ. 3:1:

12:11 12:11 ಪ್ರಕ 2:10:

§12:11 12:11 ಲೂಕ 14:26; ಯೋಹಾ 12:25:

*12:11 12:11 ಪ್ರಕ 15:2; ಯೋಹಾ 16:33; ರೋಮಾ. 8:37; 16:20:

12:12 12:12 ಕೀರ್ತ 96:11; ಯೆಶಾ 44:23; 49:13; ಪ್ರಕ 18:20:

12:12 12:12 ಪ್ರಕ 8:13:

§12:12 12:12 ಮತ್ತಾ 8:29; ಪ್ರಕ 10:6:

*12:13 12:13 ವ. 5:

12:14 12:14 ವ. 6:

12:14 12:14 ವಿಮೋ 19:4:

§12:17 12:17 ಆದಿ 3:15:

*12:17 12:17 ಪ್ರಕ 14:12; 1 ಯೋಹಾ 2:3:

12:17 12:17 ಪ್ರಕ 1:2; 6:9; 19:10:

12:17 12:17 ಪ್ರಕ 11:7; 13:7: