7
ಗುಡಾರದ ಪ್ರತಿಷ್ಠೆಗೆ ಕೊಟ್ಟ ಕಾಣಿಕೆಯ ವಿವರ
ಮೋಶೆ ದೇವದರ್ಶನದ ಗುಡಾರವನ್ನು ಎತ್ತಿ ನಿಲ್ಲಿಸಿ ಅದನ್ನೂ, ಅದರ ಸಾಮಾನುಗಳನ್ನೂ, ಯಜ್ಞವೇದಿಯನ್ನೂ ಮತ್ತು ಯಜ್ಞವೇದಿಯ ಉಪಕರಣಗಳನ್ನೂ ಯೆಹೋವನಿಗಾಗಿ ಅಭಿಷೇಕಿಸಿ ಪ್ರತಿಷ್ಠಿಸಿದನು. ಆ ದಿನದಲ್ಲಿ ಇಸ್ರಾಯೇಲರ ಪ್ರಧಾನ ಪುರುಷರು ಅಂದರೆ ಗೋತ್ರದ ಪ್ರಮುಖರು, ಕುಲಾಧಿಪತಿಗಳು, ಜನಗಣತಿಯ ನೇತೃತ್ವವನ್ನು ವಹಿಸಿಕೊಂಡಿದ್ದವರು ಕಾಣಿಕೆಗಳನ್ನು ತಂದು ಸಮರ್ಪಿಸಿದರು. ಅವರು ಆರು ಕಮಾನು ಬಂಡಿಯನ್ನೂ ಮತ್ತು ಹನ್ನೆರಡು ಎತ್ತುಗಳನ್ನೂ ಯೆಹೋವನ ಸನ್ನಿಧಿಗೆ ಕಾಣಿಕೆಯಾಗಿ ತಂದರು. ನಾಯಕರಾದ ಇಬ್ಬರಿಬ್ಬರೂ ಒಂದು ಕಮಾನು ಬಂಡಿಯನ್ನೂ, ಪ್ರತಿ ನಾಯಕನು ಒಂದು ಜೋಡಿ ಎತ್ತನ್ನೂ, ದೇವದರ್ಶನ ಗುಡಾರದ ಮುಂದೆ ತಂದರು. ಹೀಗೆ ಆರು ಜೊತೆ ಬಂಡಿ ಆರು ಜೊತೆ ಎತ್ತುಗಳನ್ನು ತಂದು ಅರ್ಪಿಸಿದರು.
ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, “ನೀನು ಇವರ ಕೈಯಿಂದ ಈ ಕಾಣಿಕೆಯ ವಸ್ತುಗಳನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ಸೇವೆಗಾಗಿ ಉಪಯೋಗಿಸು. ಕಾಣಿಕೆಯನ್ನು ಲೇವಿಯರಿಗೆ ಅವರವರ ಕೆಲಸಕ್ಕೆ ತಕ್ಕ ಹಾಗೆ ಕೊಡಬೇಕು” ಎಂದು ಆಜ್ಞಾಪಿಸಿದನು.
ಮೋಶೆ ಆ ಬಂಡಿಗಳನ್ನೂ ಮತ್ತು ಎತ್ತುಗಳನ್ನೂ ತೆಗೆದುಕೊಂಡು ಲೇವಿಯರಿಗೆ ಕೊಟ್ಟನು. ಅವನು ಗೇರ್ಷೋನ್ಯ ಸಂತಾನದವರಿಗೆ ಅವರ ಕೆಲಸಕ್ಕೆ ತಕ್ಕ ಹಾಗೆ ಎರಡು ಬಂಡಿಗಳನ್ನು, ಮತ್ತು ಎರಡು ಜೋಡಿ ಎತ್ತುಗಳನ್ನು ಕೊಟ್ಟನು. ಮೆರಾರೀ ಸಂತಾನದವರಿಗೆ ಅವರ ಕೆಲಸಕ್ಕೆ ತಕ್ಕ ಹಾಗೆ ನಾಲ್ಕು ಬಂಡಿಗಳನ್ನು ಮತ್ತು ನಾಲ್ಕು ಜೋಡಿ ಎತ್ತುಗಳನ್ನು ಮಹಾಯಾಜಕನಾದ ಆರೋನನ ಮಗನಾದ ಈತಾಮಾರನ ಕೈಗೆ ಒಪ್ಪಿಸಿದರು.
ಕೆಹಾತ್ಯರಿಗೆ ಮಾತ್ರ ಏನೂ ಕೊಡಲಿಲ್ಲ. ಏಕೆಂದರೆ ಅವರು ದೇವದರ್ಶನ ಗುಡಾರದ ಸಾಮಾನುಗಳನ್ನು ಸಾಗಿಸುವುದೇ ಅವರಿಗೆ ನೇಮಕವಾದ ಕೆಲಸವಾಗಿತ್ತು. ಅವರು ಅವುಗಳನ್ನು ಹೆಗಲಿನ ಮೇಲೆ ಹೊರುತ್ತಿದ್ದರು.
10 ಮೋಶೆಯು ಯಜ್ಞವೇದಿಯನ್ನು ಅಭಿಷೇಕಿಸಿದ ದಿನದಲ್ಲಿ, ಕುಲಾಧಿಪತಿಗಳು ಅದರ ಪ್ರತಿಷ್ಠೆಗಾಗಿ ಕಾಣಿಕೆಗಳನ್ನು ತಂದು ಅದರ ಮುಂದೆ ಇಟ್ಟರು. 11 ಆಗ ಯೆಹೋವನು ಮೋಶೆಗೆ, “ಒಬ್ಬೊಬ್ಬ ಕುಲಾಧಿಪತಿಯು ತನಗೆ ನೇಮಕವಾದ ದಿನದಲ್ಲಿ ಯಜ್ಞವೇದಿಯ ಪ್ರತಿಷ್ಠೆಗಾಗಿ ತನ್ನ ಕಾಣಿಕೆಯನ್ನು ಸಮರ್ಪಿಸಬೇಕು” ಎಂದು ಆಜ್ಞಾಪಿಸಿದನು.
12 ಮೊದಲನೆಯ ದಿನದಲ್ಲಿ ಕಾಣಿಕೆಯನ್ನು ಅರ್ಪಿಸಿದವನು ಯೆಹೂದ ಕುಲಾಧಿಪತಿಯಾದ ಅಮ್ಮೀನಾದಾಬನ ಮಗನಾದ ನಹಶೋನ. 13 ಅವನು ತಂದ ಕಾಣಿಕೆ: ದೇವಸ್ಥಾನದ ನಾಣ್ಯ ತೂಕದ ಮೇರೆಗೆ ನೂರ ಮೂವತ್ತು ಶೆಕೆಲ್* 7:13 ಶೆಕೆಲ್ ತೊಲೆ ತೂಕದ ಒಂದು ಬೆಳ್ಳಿಯ ತಟ್ಟೆ. ಎಪ್ಪತ್ತು ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು. 14 ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕವುಳ್ಳ ಚಿನ್ನದ ಧೂಪಾರತಿಯನ್ನು ಸಮರ್ಪಿಸಿದನು.
15 ಅವನು ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು ಮತ್ತು ಒಂದು ವರ್ಷದ ಕುರಿಯನ್ನು ಕೊಟ್ಟನು. 16 ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತ, 17 ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು, ಮತ್ತು ಒಂದು ವರ್ಷದ ಐದು ಕುರಿಗಳನ್ನು ಸಮರ್ಪಿಸಿದನು. ಅಮ್ಮೀನಾದಾಬನ ಮಗನಾದ ನಹಶೋನನು ಸಮರ್ಪಿಸಿದ ಕಾಣಿಕೆಗಳು ಇವೇ.
18 ಎರಡನೆಯ ದಿನದಲ್ಲಿ ಇಸ್ಸಾಕಾರ್ ಕುಲಾಧಿಪತಿಯೂ ಚೂವಾರನ ಮಗನೂ ಆದ ನೆತನೇಲನು ಕಾಣಿಕೆಯನ್ನು ಸಮರ್ಪಿಸಿದನು. 19 ಅವನು ತಂದ ಕಾಣಿಕೆ: ದೇವಸ್ಥಾನದ ನಾಣ್ಯ ತೂಕದ ಮೇರೆಗೆ ನೂರ ಮೂವತ್ತು ಶೆಕೆಲ್ ತೂಕದ ಒಂದು ಬೆಳ್ಳಿಯ ತಟ್ಟೆಯು; ಎಪ್ಪತ್ತು ಶೆಕೆಲ್ ತೂಕವುಳ್ಳ ಒಂದು ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ಧಾನ್ಯ ನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು.
20 ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕವುಳ್ಳ ಚಿನ್ನದ ಧೂಪಾರತಿಯನ್ನು ಸಮರ್ಪಿಸಿದನು. 21 ಅವನು ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು ಮತ್ತು ಒಂದು ವರ್ಷದ ಕುರಿಯನ್ನು ಕಾಣಿಕೆಯಾಗಿ ಕೊಟ್ಟನು. 22 ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತ, 23 ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ಒಂದು ವರ್ಷದ ಐದು ಕುರಿಗಳನ್ನು ಸಮರ್ಪಿಸಿದನು. ಚೂವಾರನ ಮಗನಾದ ನೆತನೇಲನು ಸಮರ್ಪಿಸಿದ ಕಾಣಿಕೆಗಳು ಇವೇ.
24 ಮೂರನೆಯ ದಿನದಲ್ಲಿ ಜೆಬುಲೂನ್ ಕುಲಾಧಿಪತಿಯೂ, ಹೇಲೋನನ ಮಗನೂ ಆದ ಎಲೀಯಾಬನು ಕಾಣಿಕೆಯನ್ನು ಸಮರ್ಪಿಸಿದನು. 25 ಅವನು ತಂದ ಕಾಣಿಕೆ: ದೇವಸ್ಥಾನದ ನಾಣ್ಯ ತೂಕದ ಮೇರೆಗೆ ನೂರ ಮೂವತ್ತು ಶೆಕೆಲ್ ತೂಕದ ಒಂದು ಬೆಳ್ಳಿಯ ತಟ್ಟೆ; ಎಪ್ಪತ್ತು ಶೆಕೆಲ್ ತೂಕವುಳ್ಳ ಒಂದು ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು; 26 ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕವುಳ್ಳ ಚಿನ್ನದ ಧೂಪಾರತಿಯನ್ನು ಸಮರ್ಪಿಸಿದನು.
27 ಅವನು ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು, ಮತ್ತು ಒಂದು ವರ್ಷದ ಕುರಿಯನ್ನು ಕಾಣಿಕೆಯಾಗಿ ಕೊಟ್ಟನು. 28 ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತ, 29 ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ಒಂದು ವರ್ಷದ ಐದು ಕುರಿಗಳನ್ನು ಸಮರ್ಪಿಸಿದನು. ಹೇಲೋನನ ಮಗನಾದ ಎಲೀಯಾಬನು ಸಮರ್ಪಿಸಿದ ಕಾಣಿಕೆಗಳು ಇವೇ.
30 ನಾಲ್ಕನೆಯ ದಿನದಲ್ಲಿ ರೂಬೇನ್ ಕುಲಾಧಿಪತಿಯೂ, ಶೆದೇಯೂರನ ಮಗನೂ ಆದ ಎಲೀಚೂರನು ಕಾಣಿಕೆಯನ್ನು ಸಮರ್ಪಿಸಿದನು. 31 ಅವನು ತಂದ ಕಾಣಿಕೆ: ದೇವಸ್ಥಾನದ ನಾಣ್ಯ ತೂಕದ ಮೇರೆಗೆ ನೂರ ಮೂವತ್ತು ಶೆಕೆಲ್ ತೂಕದ ಬೆಳ್ಳಿಯ ಒಂದು ತಟ್ಟೆ; ಎಪ್ಪತ್ತು ಶೆಕೆಲ್ ತೂಕವುಳ್ಳ ಬೆಳ್ಳಿಯ ಒಂದು ಬಟ್ಟಲು; ಈ ಎರಡರಲ್ಲಿಯೂ ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು. 32 ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕವುಳ್ಳ ಚಿನ್ನದ ಧೂಪಾರತಿಯನ್ನು ಸಮರ್ಪಿಸಿದನು. 33 ಅವನು ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು ಮತ್ತು ಒಂದು ವರ್ಷದ ಕುರಿಯನ್ನು ಕಾಣಿಕೆಯಾಗಿ ಕೊಟ್ಟನು. 34 ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತ, 35 ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ಒಂದು ವರ್ಷದ ಐದು ಕುರಿಗಳನ್ನು ಸಮರ್ಪಿಸಿದನು. ಶೆದೇಯೂರನ ಮಗನಾದ ಎಲೀಚೂರನು ಸಮರ್ಪಿಸಿದ ಕಾಣಿಕೆಗಳು ಇವೇ.
36 ಐದನೆಯ ದಿನದಲ್ಲಿ ಸಿಮೆಯೋನ್ ಕುಲಾಧಿಪತಿಯೂ, ಚೂರೀಷದ್ದೈಯ ಮಗನೂ ಆದ ಶೆಲುಮೀಯೇಲನು ಕಾಣಿಕೆಯನ್ನು ಸಮರ್ಪಿಸಿದನು. 37 ಅವನು ತಂದ ಕಾಣಿಕೆ: ದೇವಸ್ಥಾನದ ನಾಣ್ಯ ತೂಕದ ಮೇರೆಗೆ ನೂರ ಮೂವತ್ತು ಶೆಕೆಲ್ ತೂಕದ ಬೆಳ್ಳಿಯ ಒಂದು ತಟ್ಟೆ; ಎಪ್ಪತ್ತು ಶೆಕೆಲ್ ತೂಕವುಳ್ಳ ಬೆಳ್ಳಿಯ ಒಂದು ಬಟ್ಟಲು; ಈ ಎರಡರಲ್ಲಿಯೂ ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು. 38 ಅವನು ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕವುಳ್ಳ ಚಿನ್ನದ ಧೂಪಾರತಿ ಸಮರ್ಪಿಸಿದನು.
39 ಅವನು ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು ಮತ್ತು ಒಂದು ವರ್ಷದ ಕುರಿಯನ್ನು ಕಾಣಿಕೆಯಾಗಿ ಕೊಟ್ಟನು. 40 ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತ, 41 ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ಒಂದು ವರ್ಷದ ಐದು ಕುರಿಗಳನ್ನು ಸಮರ್ಪಿಸಿದನು. ಚೂರೀಷದ್ದೈಯ ಮಗನಾದ ಶೆಲುಮೀಯೇಲನು ಸಮರ್ಪಿಸಿದ ಕಾಣಿಕೆಗಳು ಇವೇ.
42 ಆರನೆಯ ದಿನದಲ್ಲಿ ಗಾದ್ ಕುಲಾಧಿಪತಿಯೂ, ದೆಗೂವೇಲನ ಮಗನೂ ಆದ ಎಲ್ಯಾಸಾಫನು ಕಾಣಿಕೆಯನ್ನು ಸಮರ್ಪಿಸಿದನು. 43 ಅವನು ತಂದ ಕಾಣಿಕೆ: ದೇವಸ್ಥಾನದ ನಾಣ್ಯ ತೂಕದ ಮೇರೆಗೆ ನೂರ ಮೂವತ್ತು ಶೆಕಲ್ ತೂಕದ ಒಂದು ಬೆಳ್ಳಿಯ ತಟ್ಟೆ, ಎಪ್ಪತ್ತು ಶೆಕೆಲ್ ತೂಕವುಳ್ಳ ಒಂದು ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು. 44 ಅವನು ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕವುಳ್ಳ ಚಿನ್ನದ ಧೂಪಾರತಿಯನ್ನು ಸಮರ್ಪಿಸಿದನು.
45 ಅವನು ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು ಮತ್ತು ಒಂದು ವರ್ಷದ ಕುರಿಯನ್ನು ಕಾಣಿಕೆಯಾಗಿ ಕೊಟ್ಟನು. 46 ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತ, 47 ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ಒಂದು ವರ್ಷದ ಐದು ಕುರಿಗಳನ್ನು ಸಮರ್ಪಿಸಿದನು, ದೆಗೂವೇಲನ ಮಗನಾದ ಎಲ್ಯಾಸಾಫನು ಸಮರ್ಪಿಸಿದ ಕಾಣಿಕೆಗಳು ಇವೇ.
48 ಏಳನೆಯ ದಿನದಲ್ಲಿ ಎಫ್ರಾಯೀಮ್ ಕುಲಾಧಿಪತಿಯೂ, ಅಮ್ಮೀಹೂದನ ಮಗನೂ ಆದ ಎಲೀಷಾಮನು ಕಾಣಿಕೆಯನ್ನು ಸಮರ್ಪಿಸಿದನು. 49 ಅವನು ತಂದ ಕಾಣಿಕೆ: ದೇವಸ್ಥಾನದ ನಾಣ್ಯ ತೂಕದ ಮೇರೆಗೆ ನೂರ ಮೂವತ್ತು ಶೆಕಲ್ ತೂಕದ ಒಂದು ಬೆಳ್ಳಿಯ ತಟ್ಟೆ; ಎಪ್ಪತ್ತು ಶೆಕೆಲ್ ತೂಕವುಳ್ಳ ಒಂದು ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು. 50 ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕವುಳ್ಳ ಚಿನ್ನದ ಧೂಪಾರತಿಯನ್ನು ಸಮರ್ಪಿಸಿದನು.
51 ಅವನು ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು ಮತ್ತು ಒಂದು ವರ್ಷದ ಕುರಿಯನ್ನು ಕಾಣಿಕೆಯಾಗಿ ಕೊಟ್ಟನು. 52 ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತ, 53 ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ಒಂದು ವರ್ಷದ ಐದು ಕುರಿಗಳನ್ನು ಸಮರ್ಪಿಸಿದನು. ಅಮ್ಮೀಹೂದನ ಮಗನಾದ ಎಲೀಷಾಮನು ಸಮರ್ಪಿಸಿದ ಕಾಣಿಕೆಗಳು ಇವೇ.
54 ಎಂಟನೆಯ ದಿನದಲ್ಲಿ ಮನಸ್ಸೆ ಕುಲಾಧಿಪತಿಯೂ, ಪೆದಾಚೂರನ ಮಗನೂ ಆದ ಗಮ್ಲೀಯೇಲನು ಕಾಣಿಕೆಯನ್ನು ಸಮರ್ಪಿಸಿದನು. 55 ಅವನು ತಂದ ಕಾಣಿಕೆ: ದೇವಸ್ಥಾನದ ನಾಣ್ಯ ತೂಕದ ಮೇರೆಗೆ ನೂರ ಮೂವತ್ತು ಶೆಕೆಲ್ ತೂಕದ ಬೆಳ್ಳಿಯ ಒಂದು ತಟ್ಟೆ, ಎಪ್ಪತ್ತು ಶೆಕೆಲ್ ತೂಕವುಳ್ಳ ಬೆಳ್ಳಿಯ ಒಂದು ಬಟ್ಟಲು; ಈ ಎರಡರಲ್ಲಿಯೂ ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು. 56 ಅವನು ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕವುಳ್ಳ ಚಿನ್ನದ ಧೂಪಾರತಿಯನ್ನು ಸಮರ್ಪಿಸಿದನು.
57 ಅವನು ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು ಮತ್ತು ಒಂದು ವರ್ಷದ ಕುರಿಯನ್ನು ಕಾಣಿಕೆಯಾಗಿ ಕೊಟ್ಟನು. 58 ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತ, 59 ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ಒಂದು ವರ್ಷದ ಐದು ಕುರಿಗಳನ್ನು ಸಮರ್ಪಿಸಿದನು.
60 ಒಂಭತ್ತನೆಯ ದಿನದಲ್ಲಿ ಬೆನ್ಯಾಮೀನ್ ಕುಲಾಧಿಪತಿಯೂ ಗಿದ್ಯೋನಿಯ ಮಗನೂ ಆದ ಅಬೀದಾನನು ಕಾಣಿಕೆಯನ್ನು ಸಮರ್ಪಿಸಿದನು. 61 ಅವನು ತಂದ ಕಾಣಿಕೆ: ದೇವಸ್ಥಾನದ ನಾಣ್ಯ ತೂಕದ ಮೇರೆಗೆ ನೂರ ಮೂವತ್ತು ಶೆಕೆಲ್ ತೂಕದ ಒಂದು ಬೆಳ್ಳಿಯ ತಟ್ಟೆ; ಎಪ್ಪತ್ತು ಶೆಕೆಲ್ ತೂಕವುಳ್ಳ ಒಂದು ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು. 62 ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕವುಳ್ಳ ಚಿನ್ನದ ಧೂಪಾರತಿಯನ್ನು ಸಮರ್ಪಿಸಿದನು.
63 ಅವನು ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು ಮತ್ತು ಒಂದು ವರ್ಷದ ಕುರಿಯನ್ನು ಕಾಣಿಕೆಯಾಗಿ ಕೊಟ್ಟನು. 64 ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತ, 65 ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ಒಂದು ವರ್ಷದ ಐದು ಕುರಿಗಳನ್ನು ಸಮರ್ಪಿಸಿದನು. ಗಿದ್ಯೋನಿಯ ಮಗನಾದ ಅಬೀದಾನನು ಕಾಣಿಕೆಯಾಗಿ ಸಮರ್ಪಿಸಿದ ಕಾಣಿಕೆಗಳು ಇವೇ.
66 ಹತ್ತನೆಯ ದಿನದಲ್ಲಿ ದಾನ್ ಕುಲಾಧಿಪತಿಯೂ ಅಮ್ಮೀಷದ್ದೈಯ ಮಗನೂ ಆದ ಅಹೀಗೆಜೆರನು ಕಾಣಿಕೆಯನ್ನು ಸಮರ್ಪಿಸಿದನು. 67 ಅವನು ತಂದ ಕಾಣಿಕೆ: ದೇವಸ್ಥಾನದ ನಾಣ್ಯ ತೂಕದ ಮೇರೆಗೆ ನೂರ ಮೂವತ್ತು ಶೆಕೆಲ್ ತೂಕದ ಒಂದು ಬೆಳ್ಳಿಯ ತಟ್ಟೆ; ಎಪ್ಪತ್ತು ಶೆಕಲ್ ತೂಕವುಳ್ಳ ಒಂದು ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು. 68 ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕವುಳ್ಳ ಚಿನ್ನದ ಧೂಪಾರತಿಯನ್ನು ಸಮರ್ಪಿಸಿದನು.
69 ಅವನು ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು ಮತ್ತು ಒಂದು ವರ್ಷದ ಕುರಿಯನ್ನು ಕಾಣಿಕೆಯಾಗಿ ಕೊಟ್ಟನು. 70 ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತ, 71 ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ಒಂದು ವರ್ಷದ ಐದು ಕುರಿಗಳನ್ನು ಸಮರ್ಪಿಸಿದನು. ಅಮ್ಮೀಷದ್ದೈಯ ಮಗನಾದ ಅಹೀಗೆಜೆರನು ಸಮರ್ಪಿಸಿದ ಕಾಣಿಕೆಗಳು ಇವೇ.
72 ಹನ್ನೊಂದನೆಯ ದಿನದಲ್ಲಿ ಆಶೇರ್ ಕುಲಾಧಿಪತಿಯೂ ಒಕ್ರಾನನ ಮಗನೂ ಆದ ಪಗೀಯೇಲನು ಕಾಣಿಕೆಯನ್ನು ಸಮರ್ಪಿಸಿದನು. 73 ಅವನು ತಂದ ಕಾಣಿಕೆ: ದೇವಸ್ಥಾನದ ನಾಣ್ಯ ತೂಕದ ಮೇರೆಗೆ ನೂರ ಮೂವತ್ತು ಶೆಕೆಲ್ ತೂಕದ ಒಂದು ಬೆಳ್ಳಿಯ ತಟ್ಟೆಯೂ, ಎಪ್ಪತ್ತು ಶೆಕೆಲ್ ತೂಕವುಳ್ಳ ಒಂದು ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು. 74 ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕವುಳ್ಳ ಚಿನ್ನದ ಧೂಪಾರತಿಯನ್ನು ಸಮರ್ಪಿಸಿದನು.
75 ಅವನು ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು ಮತ್ತು ಒಂದು ವರ್ಷದ ಕುರಿಯನ್ನು ಕಾಣಿಕೆಯಾಗಿ ಕೊಟ್ಟನು. 76 ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತ, 77 ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ಒಂದು ವರ್ಷದ ಐದು ಕುರಿಗಳನ್ನು ಸಮರ್ಪಿಸಿದನು.
78 ಹನ್ನೆರಡನೆಯ ದಿನದಲ್ಲಿ ನಫ್ತಾಲಿ ಕುಲಾಧಿಪತಿಯೂ ಏನಾನನ ಮಗನೂ ಆದ ಅಹೀರನು ಕಾಣಿಕೆಯನ್ನು ಸಮರ್ಪಿಸಿದನು. 79 ಅವನು ತಂದ ಕಾಣಿಕೆ: ದೇವಸ್ಥಾನದ ನಾಣ್ಯ ತೂಕದ ಮೇರೆಗೆ ನೂರ ಮೂವತ್ತು ಶೆಕೆಲ್ ತೂಕದ ಒಂದು ಬೆಳ್ಳಿಯ ತಟ್ಟೆ, ಎಪ್ಪತ್ತು ಶೆಕೆಲ್ ತೂಕವುಳ್ಳ ಒಂದು ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು. 80 ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕವುಳ್ಳ ಚಿನ್ನದ ಧೂಪಾರತಿಯನ್ನು ಸಮರ್ಪಿಸಿದನು.
81 ಅವನು ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು ಮತ್ತು ಒಂದು ವರ್ಷದ ಕುರಿಯನ್ನು ಕಾಣಿಕೆಯಾಗಿ ಕೊಟ್ಟನು. 82 ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತ, 83 ಸಮಾಧಾನಯಜ್ಞಕ್ಕಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ಒಂದು ವರ್ಷದ ಐದು ಕುರಿಗಳನ್ನು ಸಮರ್ಪಿಸಿದನು.
84 ಯಜ್ಞವೇದಿ ಅಭಿಷೇಕಿಸಲ್ಪಟ್ಟ ದಿನದಲ್ಲಿ ಇಸ್ರಾಯೇಲರ ಕುಲಾಧಿಪತಿಗಳು, ಅದರ ಪ್ರತಿಷ್ಠೆಗಾಗಿ ಕೊಟ್ಟ ಕಾಣಿಕೆಗಳು ಒಟ್ಟಾಗಿ 12 ಬೆಳ್ಳಿಯ ತಟ್ಟೆಗಳು, 12 ಬೆಳ್ಳಿಯ ಬಟ್ಟಲುಗಳು, 12 ಚಿನ್ನದ ಧೂಪಾರತಿಗಳು. 85 ಒಂದೊಂದು ಬೆಳ್ಳಿಯ ತಟ್ಟೆಯು 120 ಶೆಕೆಲ್ ತೂಕವುಳ್ಳದ್ದು, ಒಂದೊಂದು ಬಟ್ಟಲು 70 ಶೆಕೆಲ್ ತೂಕದ್ದು. ಆ ಬೆಳ್ಳಿಯ ಪಾತ್ರೆಗಳ ಒಟ್ಟು ತೂಕ ದೇವಸ್ಥಾನದ ನಾಣ್ಯ ತೂಕದ ಪ್ರಕಾರ 2,400 ಶೆಕೆಲ್. 86 ಧೂಪದ್ರವ್ಯ ತುಂಬಿದ್ದ ಒಂದೊಂದು ಚಿನ್ನದ ಧೂಪಾರತಿಯ ತೂಕವು ದೇವಸ್ಥಾನದ ನಾಣ್ಯ ತೂಕದ ಪ್ರಕಾರ ಹತ್ತು ಶೆಕೆಲ್ ಮೇರೆಗೆ ಇರುವುದರಿಂದ ಆ ಹನ್ನೆರಡು ಧೂಪಾರತಿಗಳ ಚಿನ್ನವು ಒಟ್ಟಾಗಿ 120 ಶೆಕೆಲ್.
87 ಸರ್ವಾಂಗಹೋಮಕ್ಕಾಗಿ ಕೊಟ್ಟ ಒಟ್ಟು ಪಶುಗಳು: 12 ಹೋರಿಗಳು, 12 ಟಗರುಗಳು, ಒಂದು ವರ್ಷದ 12 ಕುರಿಗಳು ಇವುಗಳೊಂದಿಗೆ ಸಮರ್ಪಿಸಬೇಕಾದ ಧಾನ್ಯದ್ರವ್ಯವನ್ನೂ ಕೊಟ್ಟರು. ದೋಷಪರಿಹಾರಕ ಯಜ್ಞಕ್ಕಾಗಿ ಕೊಟ್ಟದ್ದು 12 ಹೋತಗಳು.
88 ಸಮಾಧಾನಯಜ್ಞಕ್ಕಾಗಿ ಕೊಟ್ಟ ಒಟ್ಟು ಪಶುಗಳು: 24 ಹೋರಿಗಳು, 60 ಟಗರುಗಳು, 60 ಹೋತಗಳು, ಒಂದು ವರ್ಷದ 60 ಕುರಿಗಳು, ಯಜ್ಞವೇದಿಯು ಅಭಿಷೇಕಿಸಲ್ಪಟ್ಟ ನಂತರ ಇದೇ ಅದರ ಪ್ರತಿಷ್ಠೆಗೆ ಸಮರ್ಪಿಸಲ್ಪಟ್ಟ ಕಾಣಿಕೆ.
89 ಮೋಶೆ ಯೆಹೋವನ ಸಂಗಡ ಮಾತನಾಡಬೇಕೆಂದು ದೇವದರ್ಶನದ ಗುಡಾರದೊಳಗೆ ಹೋದಾಗ ಆಜ್ಞಾಶಾಸನಗಳ ಮಂಜೂಷದ ಮೇಲಣ ಕೃಪಾಸನದ ಮೇಲಿನಿಂದ ಆ ಎರಡು ಕೆರೂಬಿಗಳ ನಡುವೆಯಿಂದ ತನ್ನ ಸಂಗಡ ಮಾತನಾಡುವ ಯೆಹೋವನ ಸ್ವರವು ಅವನಿಗೆ ಕೇಳಿಸಿತು. ಹೀಗೆ ಯೆಹೋವನು ಮೋಶೆಯ ಸಂಗಡ ಮಾತನಾಡಿದನು.

*7:13 7:13 ಶೆಕೆಲ್ ತೊಲೆ