7
ಮದುವೆಯನ್ನು ಕುರಿತು ಬೋಧನೆ
ನೀವು ಬರೆದು ಕಳುಹಿಸಿದ ವಿಷಯಗಳ ಬಗ್ಗೆ ನನ್ನ ಅಭಿಪ್ರಾಯವೇನೆಂದರೆ, ಸ್ತ್ರೀಯರ * 7:1 1 ಕೊರಿ 7:8, 26ಶರೀರ ಸಂಪರ್ಕವಿಲ್ಲದೆ ಇರುವುದು ಪುರುಷನಿಗೆ ಒಳ್ಳೆಯದು; ಆದರೆ ಜಾರತ್ವದ ಶೋಧನೆಗೆ ಅವಕಾಶ ಕೊಡದಿರಲು ಪ್ರತಿಯೊಬ್ಬನಿಗೂ ಸ್ವಂತ ಹೆಂಡತಿಯು ಇರಲಿ ಮತ್ತು ಪ್ರತಿಯೊಬ್ಬಳಿಗೆ ಸ್ವಂತ ಗಂಡನು ಇರಲಿ. ಗಂಡನು ಹೆಂಡತಿಗೆ, ಹಾಗೆಯೇ ಹೆಂಡತಿಯು ಗಂಡನಿಗೆ ಒಗೆತನವನ್ನು ಸಲ್ಲಿಸಲಿ ಹೆಂಡತಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ ಅದು ಗಂಡನಿಗುಂಟು. ಹಾಗೆಯೇ ಪುರುಷನಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ ಅದು ಹೆಂಡತಿಗುಂಟು. ಪ್ರಾರ್ಥನೆಗೆ ಸಮಯ ಕೊಡುವುದಕ್ಕಾಗಿ ನೀವು ಪರಸ್ಪರ ಸಮ್ಮತಿಯಿಂದ ಸ್ವಲ್ಪ ಕಾಲ ಅಗಲಿ ಇರಬಹುದೇ ಹೊರತು ಅನ್ಯತಾ ಹಾಗೆ ಮಾಡಬಾರದು. ಸೈತಾನನು ನಿಮಗೆ ಸ್ವಯಂ ನಿಯಂತ್ರಣವಿಲ್ಲದಿರುವುದನ್ನು ನೋಡಿ ನಿಮಗೆ ದುಷ್ಪ್ರೇರಣೆಗೆ ಎಡೆ ಮಾಡದಂತೆ ತಿರುಗಿ ಕೂಡಿಕೊಳ್ಳಿರಿ. ನಾನು ಹೀಗೆ ಮಾಡಬಹುದೆಂದು ಹೇಳುತ್ತಿರುವುದು 7:6 1 ಕೊರಿ 7:12, 25ಆಜ್ಞೆಯಲ್ಲ, ನನ್ನ ಅಭಿಪ್ರಾಯವಷ್ಟೇ. ನಾನಿರುವಂತೆಯೇ ಎಲ್ಲಾ ಮನುಷ್ಯರು ಇರಬೇಕೆಂಬುದು ನನ್ನ ಇಷ್ಟ ಆದರೆ 7:7 1 ಕೊರಿ 12:4,11; ರೋಮಾ. 12:6ಒಬ್ಬನು ಒಂದು ವಿಧವಾಗಿ ಮತ್ತೊಬ್ಬನು ಇನ್ನೊಂದು ವಿಧವಾಗಿ ದೇವರಿಂದ ವರವನ್ನು ಹೊಂದಿಕೊಂಡಿದ್ದಾರೆ.
ಅವಿವಾಹಿತರನ್ನೂ ಮತ್ತು ವಿಧವೆಯರನ್ನೂ ಕುರಿತು ನಾನು ಹೇಳುವುದೇನಂದರೆ, ನಾನಿರುವಂತೆಯೆ ಇರುವುದು ಅವರಿಗೆ ಒಳ್ಳೆಯದು. ಅವರು ಸಂಯಮಯಿಲ್ಲದವರಾದರೆ ಮದುವೆಮಾಡಿಕೊಳ್ಳಲಿ. ಯಾಕೆಂದರೆ ಕಾಮತಾಪಪಡುವುದಕ್ಕಿಂತ ಮದುವೆಮಾಡಿಕೊಳ್ಳುವುದು ಉತ್ತಮ. 10 ವಿವಾಹಿತರಿಗೆ ನನ್ನ ಅಪ್ಪಣೆ ಅಲ್ಲ § 7:10 1 ಕೊರಿ 7:6ಕರ್ತನ ಆಜ್ಞೆಯು ಏನೆಂದರೆ, * 7:10 ಮತ್ತಾ 5:32; ಮಾರ್ಕ 10:9ಹೆಂಡತಿಯು ಗಂಡನನ್ನು ಬಿಟ್ಟು ಅಗಲಬಾರದು. 11 ಒಂದು ವೇಳೆ ಅಗಲಿದರೂ 7:11 ಮಾರ್ಕ 10:12ಮದುವೆಯಾಗದೆ ಇರಬೇಕು, ಇಲ್ಲವೆ ಗಂಡನ ಸಂಗಡ ಸಂಧಾನವಾಗಿರಬೇಕು ಮತ್ತು ಗಂಡನು ಹೆಂಡತಿಗೆ ವಿಚ್ಛೇದನ ನೀಡಬಾರದು.
12 ಮಿಕ್ಕಾದವರ ವಿಷಯದಲ್ಲಿ ಕರ್ತನ ಮಾತಲ್ಲ ಆದರೆ ನಾನು ಹೇಳುವುದೇನಂದರೆ, ಒಬ್ಬ ಸಹೋದರನಿಗೆ ಕ್ರಿಸ್ತ ನಂಬಿಕೆಯಿಲ್ಲದ ಹೆಂಡತಿಯಿರಲಾಗಿ ಆಕೆ ಅವನೊಂದಿಗೆ ಸಂಸಾರ ಮಾಡುವುದಕ್ಕೆ ಸಮ್ಮತಿಸಿದರೆ ಅವನು ಆಕೆಯನ್ನು ಬಿಡಬಾರದು. 13 ಹಾಗೆಯೇ ಒಬ್ಬ ಸ್ತ್ರೀಗೆ ಕ್ರಿಸ್ತ ನಂಬಿಕೆಯಿಲ್ಲದ ಗಂಡನಿರಲಾಗಿ ಅವನು ಆಕೆಯೊಂದಿಗೆ ಸಂಸಾರ ಮಾಡುವುದಕ್ಕೆ ಸಮ್ಮತಿಸಿದರೆ ಆಕೆಯು ಅವನನ್ನು ಬಿಡಬಾರದು. 14 ಯಾಕೆಂದರೆ ಕ್ರಿಸ್ತ ನಂಬಿಕೆಯಿಲ್ಲದ ಗಂಡನು ತನ್ನ ಹೆಂಡತಿಯ ನಿಮಿತ್ತ ಪವಿತ್ರನಾದನು ಮತ್ತು ಕ್ರಿಸ್ತ ನಂಬಿಕೆಯಿಲ್ಲದ ಹೆಂಡತಿಯು ತನ್ನ ಗಂಡನ ನಿಮಿತ್ತ ಪವಿತ್ರಳಾದಳು. ಹಾಗಲ್ಲದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ಪವಿತ್ರರೇ ಆಗಿದ್ದಾರೆ. 15 ಆದರೆ ಕ್ರಿಸ್ತ ನಂಬಿಕೆಯಿಲ್ಲದ ಸಂಗಾತಿಯು ಅಗಲಬೇಕೆಂದಿದ್ದರೆ ಅಗಲಿಹೋಗಲಿ ಇಂಥಾ ಸಂದರ್ಭಗಳಲ್ಲಿ ಕ್ರೈಸ್ತ ಸಹೋದರನಾಗಲಿ ಅಥವಾ ಸಹೋದರಿಯಾಗಲಿ ಬದ್ಧರಲ್ಲ. ಸಮಾಧಾನದಲ್ಲಿರಬೇಕೆಂದು ದೇವರು ನಮ್ಮನ್ನು ಕರೆದಿದ್ದಾನೆ. 16 ಸ್ತ್ರೀಯೇ, ನೀನು 7:16 1 ಪೇತ್ರ 3:1ನಿನ್ನ ಗಂಡನನ್ನು ರಕ್ಷಿಸುವಿಯೆಂದು ನಿನಗೆ ಹೇಗೆ ಗೊತ್ತು? ಪುರುಷನೇ, ನೀನು ನಿನ್ನ ಹೆಂಡತಿಯನ್ನು ರಕ್ಷಿಸುವಿಯೆಂದು ನಿನಗೆ ಹೇಗೆ ಗೊತ್ತು?
17 ಆದರೆ § 7:17 ರೋಮಾ. 12:3ಕರ್ತನು ಪ್ರತಿಯೊಬ್ಬನಿಗೆ ನೇಮಿಸಿರುವ ಜವಾಬ್ದಾರಿಗೂ ಹಾಗೂ ದೇವರು ಅವರನ್ನು ಯಾವುದಕ್ಕೆ ಕರೆದನೋ ಅದಕ್ಕೂ ಸರಿಯಾಗಿ ಜೀವಿಸಲಿ. * 7:17 1 ಕೊರಿ 4:17ಹೀಗೆ ಎಲ್ಲಾ ಸಭೆಗಳಲ್ಲಿಯೂ ಅನುಸರಿಸಿಬೇಕೆಂದು ನಾನು ಅಜ್ಞಾಪಿಸುತ್ತೇನೆ. 18 ದೇವರು ಕರೆದ ಕಾಲದಲ್ಲಿ ಯಾವನಾದರೂ ಸುನ್ನತಿಯುಳ್ಳವನಾಗಿದ್ದನೋ ಅವನು ಸುನ್ನತಿಯಿಲ್ಲದವನಂತಾಗಬಾರದು. ದೇವರು ಕರೆದಾಗ ಯಾವನಾದರೂ ಸುನ್ನತಿಯಿಲ್ಲದವನಾಗಿದ್ದಾನೋ ಅವನು ಸುನ್ನತಿಮಾಡಿಸಿಕೊಳ್ಳಬಾರದು. 19  7:19 ಅ. ಕೃ. 15:1, 5, 19, 24, 28; ಗಲಾ. 5:2 ಸುನ್ನತಿ ಇರುವುದೋ 7:19 ಗಲಾ. 3:28; 5:6; 6:15 ಸುನ್ನತಿ ಇಲ್ಲದಿರುವುದೋ ಪ್ರಾಮುಖ್ಯವಲ್ಲ. ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ ಮುಖ್ಯವಾಗಿದೆ. 20  § 7:20 1 ಕೊರಿ 7:24 ದೇವರು ಕರೆದಾಗ ಪ್ರತಿಯೊಬ್ಬನು ಯಾವ ಸ್ಥಿತಿಯಲ್ಲಿದ್ದನೋ ಆ ಸ್ಥಿತಿಯಲ್ಲಿಯೇ ಇರಬೇಕು. 21 ದೇವರು ಕರೆದಾಗ ನೀನು ಮತ್ತೊಬ್ಬನ ದಾಸನಾಗಿದ್ದೀಯೋ? ಅದರ ಕುರಿತು ಚಿಂತಿಸಬೇಡ ಆದರೆ ಬಿಡುಗಡೆ ಹೊಂದುವುದಕ್ಕೆ ಸಾಧ್ಯವಾಗುವುದಾದರೆ ನೀನು ಸ್ವತಂತ್ರನಾಗು. 22 ಯಾವನಾದರೂ ದಾಸನಾಗಿದ್ದು ಕರ್ತನಿಂದ ಕರೆಯಲ್ಪಟ್ಟಿರುವನೋ ಅವನು * 7:22 ಕೊಲೊ 3:24; ಫಿಲೆ 16ಕರ್ತನ ಮೂಲಕ ಬಿಡುಗಡೆ ಹೊಂದಿರುವ ಸ್ವತಂತ್ರನಾಗಿದ್ದಾನೆ. ಅದೇ ಪ್ರಕಾರ ಯಾವನು ಸ್ವತಂತ್ರನಾಗಿದ್ದಾಗ ಕರೆಯಲ್ಪಟ್ಟಿರುವನೋ 7:22 ಎಫೆ 6:6ಅವನು ಕ್ರಿಸ್ತನಿಗೆ ದಾಸನು. 23  7:23 1 ಕೊರಿ 6:20ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು. ಮನುಷ್ಯರಿಗೆ ದಾಸರಾಗಬೇಡಿರಿ. 24 ಸಹೋದರರೇ, § 7:24 1 ಕೊರಿ 7:20ಪ್ರತಿಯೊಬ್ಬನು ಕರೆಯಲ್ಪಟ್ಟಾಗ ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ದೇವರ ಮುಂದೆ ನೆಲೆಗೊಂಡಿರಲಿ.
ಅವಿವಾಹಿತರು ಮತ್ತು ವಿಧವೆಯರು
25 ಅವಿವಾಹಿತರಾದ ಕನ್ಯೆಯರನ್ನು ಕುರಿತಂತೆ * 7:25 1 ಕೊರಿ 7:6ಕರ್ತನಿಂದ ಬಂದ ಆಜ್ಞೆ ನನಗೆ ಯಾವುದೂ ಇಲ್ಲ. ಆದರೆ ನಾನು ನಂಬಿಗಸ್ತನಾಗಿರುವುದಕ್ಕೆ ಕರ್ತನಿಂದ ಕರುಣೆಯನ್ನು ಹೊಂದಿದವನಾಗಿ ನನ್ನ ಅಭಿಪ್ರಾಯವನ್ನು ಹೇಳುತ್ತೇನೆ. 26 ಈಗಿನ ಕಷ್ಟ ಕಾಲದ ನಿಮಿತ್ತ 7:26 1 ಕೊರಿ 7:1-8ಇದ್ದ ಹಾಗೆಯೇ ಇರುವುದು ಒಳ್ಳೆಯದೆಂದು ನಾನು ಭಾವಿಸುತ್ತೇನೆ. 27 ನೀನು ವಿವಾಹಿತನಾಗಿರುವುದಾದರೆ ಬಿಡುಗಡೆಯಾಗುವುದಕ್ಕೆ ಪ್ರಯತ್ನಿಸಬೇಡ. ನೀನು ಅವಿವಾಹಿತನಾಗಿರುವುದಾದರೆ ಹೆಂಡತಿಯನ್ನು ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸಬೇಡ. 28 ಒಂದು ವೇಳೆ ನೀನು ಮದುವೆ ಮಾಡಿಕೊಂಡರೂ ಅದು ಪಾಪವಲ್ಲ. ಕನ್ನಿಕೆಯು ಮದುವೆ ಮಾಡಿಕೊಂಡರೂ ಪಾಪವಲ್ಲ. ಆದರೆ ಮದುವೆಮಾಡಿಕೊಂಡವರಿಗೆ ಅನೇಕ ಕಷ್ಟಗಳು ಸಂಭವಿಸುವವು. ಇದು ನಿಮಗೆ ಉಂಟಾಗಬಾರದೆಂಬುದೇ ನನ್ನ ಅಪೇಕ್ಷೆಯಾಗಿದೆ. 29 ಸಹೋದರರೇ, ನಾನು ಹೇಳುವುದೇನಂದರೆ, 7:29 ರೋಮಾ. 13:11ಸಮಯವು ಅತಿಕಡಿಮೆಯಿರುವುದ್ದರಿಂದ ಇನ್ನು ಮೇಲೆ ಹೆಂಡತಿಯುಳ್ಳವರು ಹೆಂಡತಿಯಿಲ್ಲದವರಂತೆಯೂ, 30 ಅಳುವವರು ಅಳದಂತೆಯೂ, ಸಂತೋಷಪಡುವವರು ಸಂತೋಷಪಡದವರಂತೆಯೂ, ಕೊಂಡುಕೊಳ್ಳುವವರು ಏನೂ ಇಲ್ಲದವರಂತೆಯೂ, 31 ಲೋಕವನ್ನು ಅನುಭೋಗಿಸುವವರು ಅದನ್ನು ಪರಿಪೂರ್ಣವಾಗಿ ಅನುಭೋಗಿಸದವರಂತೆಯೂ ಇರಬೇಕು. ಯಾಕೆಂದರೆ § 7:31 1 ಪೇತ್ರ 1:24; 1 ಯೋಹಾ 2:17ಈ ಪ್ರಪಂಚದ ಆಡಂಬರವು ಗತಿಸಿ ಹೋಗುತ್ತದೆ. 32 ಆದರೆ * 7:32 ಮತ್ತಾ 6:25; ಲೂಕ 10:41ನೀವು ಚಿಂತೆಯಿಲ್ಲದವರಾಗಿರಬೇಕೆಂಬುದೇ ನನ್ನ ಇಷ್ಟ. ಮದುವೆಯಾಗದವನು ತಾನು ಕರ್ತನನ್ನು ಹೇಗೆ ಮೆಚ್ಚಿಸಬೇಕೆಂದು ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ. 33 ಮದುವೆಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ವಿಷಯಗಳನ್ನು ಕುರಿತು ಚಿಂತಿಸುತ್ತಾನೆ ಅವನು ಆಸಕ್ತಿಗಳಲ್ಲಿ ಭಿನ್ನತೆಯುಳ್ಳವನಾಗಿದ್ದಾನೆ. 34 ಅದರಂತೆ ಮುತೈದೆಗೂ, ಕನ್ನಿಕೆಗೂ ವ್ಯತ್ಯಾಸವುಂಟು. ಮದುವೆಯಾಗದವಳು ತಾನು ದೇಹಾತ್ಮಗಳಲ್ಲಿ ಹೇಗೆ ಪವಿತ್ರಳಾಗಿರಬೇಕೆಂದು ಕರ್ತನ ವಿಷಯಗಳನ್ನು ಕುರಿತು ಚಿಂತಿಸುತ್ತಾಳೆ. ಆದರೆ ಮದುವೆಯಾದವಳು ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ವಿಷಯಗಳನ್ನು ಕುರಿತು ಚಿಂತಿಸುತ್ತಾಳೆ. 35 ನಾನು ನಿಮಗೆ ನಿರ್ಬಂಧ ಏರಬೇಕೆಂದು ಇದನ್ನು ಹೇಳುತ್ತಿಲ್ಲ. ನೀವು ಚಂಚಲ ಚಿತ್ತರಾಗದೆ ಕರ್ತನಿಗೆ ಮಾನ್ಯತೆಯುಳ್ಳವರಾಗಿ, ನಿಷ್ಠೆಯುಳ್ಳವರಾಗಿ ನಡೆದುಕೊಳ್ಳಬೇಕೆಂದು ನಿಮ್ಮ ಪ್ರಯೋಜನಕ್ಕೋಸ್ಕರವೇ ಹೇಳುತ್ತಿದ್ದೇನೆ. 36 ಒಬ್ಬನು ತನ್ನ ಮಗಳಿಗೆ ಮದುವೆಯಿಲ್ಲದಿರುವುದು ಮರ್ಯಾದೆಯಲ್ಲವೆಂದು ಭಾವಿಸಿದರೆ ಮತ್ತು ಆಕೆಯ ಪ್ರಾಯ ಕಳೆದುಹೋಗುತ್ತದಲ್ಲಾ ಮದುವೆಮಾಡುವುದು ಅವಶ್ಯವೆಂದು ಅವನಿಗೆ ತೋರಿದರೆ ತನ್ನಿಷ್ಟದಂತೆ ಮದುವೆ ಮಾಡಿಕೊಡಲಿ. ಅದು ಪಾಪವಲ್ಲ. 37 ಆದರೆ ಒಬ್ಬನು ದೃಢಚಿತ್ತನಾಗಿದ್ದು ಬಲವಂತವೇನೂ ಇಲ್ಲದೆ ತನ್ನಿಷ್ಟವನ್ನು ನಡಿಸುವುದಕ್ಕೆ ಹಕ್ಕುಳ್ಳವನಾಗಿ ತನ್ನ ಮಗಳನ್ನು ಮದುವೆ ಮಾಡಿಕೊಡುವುದಿಲ್ಲವೆಂದು ತನ್ನೊಳಗೆ ನಿರ್ಣಯಿಸಿ ಕೊಂಡರೆ ಅವನು ಹಾಗೆಯೇ ಮಾಡುವುದು ಒಳ್ಳೆಯದು. 38 ಹಾಗಾದರೆ 7:38 ಇಬ್ರಿ. 13:4ತನ್ನ ಮಗಳನ್ನು ಮದುವೆಮಾಡಿಕೊಡುವವನು ಒಳ್ಳೆಯದನ್ನು ಮಾಡುತ್ತಾನೆ, ಮದುವೆಮಾಡಿಕೊಡದೆ ಇರುವವನು ಇನ್ನೂ ಒಳ್ಳೆಯದನ್ನು ಮಾಡುತ್ತಿದ್ದಾನೆ. 39  7:39 ರೋಮಾ. 7:2ಮುತೈದೆಯು ತನ್ನ ಗಂಡನು ಜೀವದಿಂದಿರುವ ತನಕ ಅವನಿಗೆ ಬದ್ಧಳಾಗಿದ್ದಾಳೆ. ಗಂಡನು ಮರಣಹೊಂದಿದ್ದರೆ ಆಕೆಯು ಬೇಕಾದವನನ್ನು ಮದುವೆಮಾಡಿಕೊಳ್ಳುವುದಕ್ಕೆ ಸ್ವತಂತ್ರಳಾಗಿದ್ದಾಳೆ. ಆದರೆ ಕರ್ತನಲ್ಲಿ ವಿಶ್ವಾಸಿಯಾದವನನ್ನು ಮಾತ್ರ ಆಗಬೇಕು. 40 ಆದರೂ ಮದುವೆಮಾಡಿಕೊಳ್ಳದೆ ಹಾಗೆ ಇರುವುದು ಆಕೆಗೆ ಸಂತೋಷಕರವಾದದ್ದೆಂದು ನನ್ನ ಅಭಿಪ್ರಾಯ. ನನಗೂ ದೇವರ ಆತ್ಮವುಂಟೆಂದು ಭಾವಿಸುತ್ತೇನೆ.

*7:1 7:1 1 ಕೊರಿ 7:8, 26

7:6 7:6 1 ಕೊರಿ 7:12, 25

7:7 7:7 1 ಕೊರಿ 12:4,11; ರೋಮಾ. 12:6

§7:10 7:10 1 ಕೊರಿ 7:6

*7:10 7:10 ಮತ್ತಾ 5:32; ಮಾರ್ಕ 10:9

7:11 7:11 ಮಾರ್ಕ 10:12

7:16 7:16 1 ಪೇತ್ರ 3:1

§7:17 7:17 ರೋಮಾ. 12:3

*7:17 7:17 1 ಕೊರಿ 4:17

7:19 7:19 ಅ. ಕೃ. 15:1, 5, 19, 24, 28; ಗಲಾ. 5:2

7:19 7:19 ಗಲಾ. 3:28; 5:6; 6:15

§7:20 7:20 1 ಕೊರಿ 7:24

*7:22 7:22 ಕೊಲೊ 3:24; ಫಿಲೆ 16

7:22 7:22 ಎಫೆ 6:6

7:23 7:23 1 ಕೊರಿ 6:20

§7:24 7:24 1 ಕೊರಿ 7:20

*7:25 7:25 1 ಕೊರಿ 7:6

7:26 7:26 1 ಕೊರಿ 7:1-8

7:29 7:29 ರೋಮಾ. 13:11

§7:31 7:31 1 ಪೇತ್ರ 1:24; 1 ಯೋಹಾ 2:17

*7:32 7:32 ಮತ್ತಾ 6:25; ಲೂಕ 10:41

7:38 7:38 ಇಬ್ರಿ. 13:4

7:39 7:39 ರೋಮಾ. 7:2