ಮೋಸಗಾರರ ಮಧ್ಯದಲ್ಲಿ ವಾಸಿಸುವವನ ಪ್ರಾರ್ಥನೆ
೧೨೦
ಯಾತ್ರಾಗೀತೆ.
 
೧ ನನ್ನ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು;
ಆತನು ಸದುತ್ತರವನ್ನು ದಯಪಾಲಿಸಿದನು.
೨ ಯೆಹೋವನೇ, ಸುಳ್ಳು ಬಾಯಿಯೂ,
ವಂಚಿಸುವ ನಾಲಿಗೆ ಉಳ್ಳವರಿಂದ ನನ್ನನ್ನು ಬಿಡಿಸು.
೩ ವಂಚಿಸುವ ನಾಲಿಗೆಯೇ, ದೇವರು ನಿನಗೇನು ಕೊಡಬೇಕು?
ಯಾವ ಹೆಚ್ಚಿನ ಶಿಕ್ಷೆಯನ್ನು ಒದಗಿಸಬೇಕು?
೪ ಶೂರನ ಹದವಾದ ಬಾಣಗಳನ್ನೂ,
ಜಾಲಿಯ ಕೆಂಡಗಳನ್ನೂ ನಿನಗೆ ಕೊಡುವರು.
೫ ಅಯ್ಯೋ, ನಾನು ಮೇಷೆಕಿನವರಲ್ಲಿ ತಂಗಬೇಕಲ್ಲಾ!
ಕೇದಾರಿನವರ ಪಾಳೆಯಗಳಲ್ಲಿ ವಾಸಿಸಬೇಕಾಯಿತಲ್ಲಾ!
೬ ಸಮಾಧಾನವನ್ನು ದ್ವೇಷಿಸುವವರೊಳಗೆ,
ಇದ್ದು ಇದ್ದು ಸಾಕಾಯಿತು.
೭ ನಾನು ಸಮಾಧಾನಪ್ರಿಯನು;
ಅವರೋ, ನಾನು ಮಾತನಾಡಿದರೆ ಯುದ್ಧಕ್ಕೆ ಬರುತ್ತಾರೆ.