೧೦
ತನಗೆ ಅಧಿಕಾರವಿಲ್ಲವೆಂದು ವಿರೋಧಿಗಳು ಹೇಳಿದ ಮಾತಿಗೆ ಪೌಲನು ಕೊಡುವ ಉತ್ತರ
೧ ಪೌಲನು ನಮ್ಮೆದುರಿನಲ್ಲಿರುವಾಗ ದೀನನಾಗಿ ನಡೆದುಕೊಳ್ಳುವನೂ ದೂರದಲ್ಲಿರುವಾಗ ನಮ್ಮನ್ನು ಕುರಿತು ದಿಟ್ಟತನ ತೋರಿಸುವವನೂ ಆಗಿದ್ದಾನೆ ಎಂದು ಹೇಳಲ್ಪಡುವ ಆ ಪೌಲನೆಂಬ ನಾನು ಕ್ರಿಸ್ತನ * ಜೆಕ. 9:9, ಮತ್ತಾ 11:29, ಫಿಲಿ. 2:7-8ಶಾಂತ ಮನಸ್ಸನ್ನೂ ಸಾತ್ವಿಕತ್ವವನ್ನೂ ನೆನಪಿಗೆ ತಂದುಕೊಂಡು ನಿಮಗೆ ಖಂಡಿತವಾಗಿ ಹೇಳುವುದೇನಂದರೆ, ೨  1 ಕೊರಿ. 4:18ಯಾರು ನಮ್ಮನ್ನು ಲೋಕ ರೀತಿಯಾಗಿ ಜೀವಿಸುವವರೆಂದು ಎಣಿಸುತ್ತಾರೋ ಅವರೊಂದಿಗೆ ದಿಟ್ಟತನದಿಂದಲೇ ಇರಬೇಕೆಂದು ಅಂದುಕೊಂಡಿದೇನೆ. 2 ಕೊರಿ. 13:2,10:; 1 ಕೊರಿ. 4:21ನಾವು ನಿಮ್ಮೊಂದಿಗಿರುವಾಗ ಅಂಥ ದಿಟ್ಟತನವನ್ನು ತೋರಿಸುವುದಕ್ಕೆ ಅವಕಾಶವುಂಟಾಗಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ೩ ನಾವು ಲೋಕದಲ್ಲಿದ್ದರೂ ಲೋಕಾನುಸಾರವಾಗಿ ಯುದ್ಧಮಾಡುವವರಲ್ಲ. ೪  § 2 ಕೊರಿ. 6:7, ಎಫೆ. 6:11, 1 ಥೆಸ. 5:8ನಾವು ಉಪಯೋಗಿಸುವ ಆಯುಧಗಳು ಲೋಕದ ಆಯುಧಗಳಲ್ಲ. ಅವು ದೇವರ ಎಣಿಕೆಯಲ್ಲಿ ಬಲವಾಗಿದ್ದು * ಯೆರೆ 1:10ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ. ೫ ನಾವು ದೇವಜ್ಞಾನಕ್ಕೆ ವಿರೋಧವಾಗಿ ಏಳುವ ಅಹಂಭಾವಗಳನ್ನು ಧ್ವಂಸಮಾಡಿ, ಪ್ರತಿಯೊಂದು ಆಲೋಚನೆಗಳನ್ನೂ ಕ್ರಿಸ್ತನಿಗೆ ವಿಧೇಯರಾಗುವಂತೆ ಸೆರೆಹಿಡಿದು, ೬  2 ಕೊರಿ. 2:9, 7:15ನಿಮ್ಮ ವಿಧೇಯತ್ವವು ಪರಿಪೂರ್ಣವಾದ ಮೇಲೆ ವ 2 ನೋಡಿರಿಎಲ್ಲಾ ಅವಿಧೇಯತ್ವಕ್ಕೆ ಪ್ರತಿಕಾರವನ್ನು ನೀಡುವುದಕ್ಕೆ ಸಿದ್ಧರಾಗಿದ್ದೇವೆ.
೭ ನೀವು ಬಾಹ್ಯವಾದುದ್ದುನ್ನು ಮಾತ್ರ ನೋಡುತ್ತೀರಿ. § 1 ಕೊರಿ. 1:12, 14:37ಯಾವನಾದರೂ ತನ್ನನ್ನು ಕ್ರಿಸ್ತನವನೆಂದು ಒಪ್ಪಿಕೊಂಡರೆ ಅವನು ಆಲೋಚನೆಮಾಡಿಕೊಂಡು * 1 ಕೊರಿ. 3:23ತಾನು ಹೇಗೆ ಕ್ರಿಸ್ತನವನೋ 2 ಕೊರಿ. 11:23, 1 ಕೊರಿ. 9:1, ಗಲಾ. 1:12ಹಾಗೆ ನಾವೂ ಕ್ರಿಸ್ತನವರೆಂದು ತಿಳಿದುಕೊಳ್ಳಲಿ. ೮  2 ಕೊರಿ. 13:10ನಮಗಿರುವ ಅಧಿಕಾರವನ್ನು ಕುರಿತು ನಾವು ಒಂದು ವೇಳೆ ಹೆಚ್ಚಾಗಿ ಹೊಗಳಿಕೊಂಡರೂ ಹಾಗೆ ಹೊಗಳಿಕೊಳ್ಳುವುದರಲ್ಲಿ ನಾಚಿಕೆಪಡಬೇಕಾಗಿರುವುದಿಲ್ಲ. ಆದರೆ ನಿಮ್ಮನ್ನು ಕೆಡವಿಹಾಕುವುದಕ್ಕಲ್ಲ ಕಟ್ಟುವುದಕ್ಕಾಗಿಯೇ ಕರ್ತನು ಈ ಅಧಿಕಾರವನ್ನು ನಮಗೆ ಕೊಟ್ಟಿರುವವನು. ೯ ನಾನು ಪತ್ರಿಕೆಗಳಿಂದ ನಿಮ್ಮನ್ನು ಹೆದರಿಸುತ್ತಿದ್ದೆನೆಂದು ತಿಳಿದುಕೊಳ್ಳಬೇಡಿರಿ. ೧೦ ಅವನಿಂದ ಬಂದ ಪತ್ರಿಕೆಗಳು ಕಟೋರವಾದವುಗಳೂ, ಬಲವುಳ್ಳವುಗಳೂ ಆಗಿವೆ. § 2 ಕೊರಿ. 11:21, 2 ಕೊರಿ. 12:7ಆದರೆ ದೈಹಿಕವಾಗಿ ಅವನು ದುರ್ಬಲನು * 1 ಕೊರಿ. 1:17ಅವನ ಮಾತುಗಳು ನಿಂದಾತ್ಮಕವಾದವುಗಳೆಂದು ಕೆಲವರು ಹೇಳುತ್ತಾರಲ್ಲಾ. ೧೧ ಅಂಥವರು, ನಾವು ದೂರದಲ್ಲಿರುವಾಗ ಪತ್ರಿಕೆಗಳ ಮೂಲಕ ಮಾತಿನಲ್ಲಿ ಎಂಥವರಾಗಿದ್ದೇವೋ ಹತ್ತಿರದಲ್ಲಿರುವಾಗ ಕಾರ್ಯದಲ್ಲಿಯೂ ಅಂಥವರಾಗಿಯೇ ಇದ್ದೇವೆಂದು ತಿಳಿದುಕೊಳ್ಳಲಿ.
ಮತ್ತೊಬ್ಬರು ಸುವಾರ್ತೆ ಸಾರಿದ ಕಡೆಯಲ್ಲಿ ತಾನು ಸಾರುವವನಲ್ಲವೆಂದು ಪೌಲನು ಹೇಳುವುದು
೧೨  ವ. 18 ನೋಡಿರಿತಮ್ಮನ್ನು ತಾವೇ ಹೊಗಳಿಕೊಳ್ಳುವ ಕೆಲವರಲ್ಲಿ ನಮ್ಮನ್ನು ಸೇರಿಸಿಕೊಳ್ಳುವುದಕ್ಕಾಗಲಿ ಅವರೊಂದಿಗೆ ಹೋಲಿಸುವುದಕ್ಕಾಗಲಿ ನಾನು ಇಷ್ಟಪಡುವುದಿಲ್ಲ. ಅವರಂತೂ ತಮ್ಮತಮ್ಮೊಳಗೆ ತಮ್ಮನ್ನು ಅಳತೆಮಾಡಿಕೊಂಡು ತಮ್ಮನ್ನು ತಮಗೇ ಹೋಲಿಸಿಕೊಂಡು ಜ್ಞಾ. 26:12ವಿವೇಕವಿಲ್ಲದವರಾಗಿದ್ದಾರೆ. ೧೩ ನಾವಾದರೋ ನಮ್ಮ ಯೋಗ್ಯತೆಗೆ ಮೀರಿ ಹೊಗಳಿಕೊಳ್ಳದೇ § ರೋಮಾ. 12:3ದೇವರು ನಮಗೆ ನೇಮಿಸಿರುವಂಥ ಮೇರೆಯೊಳಗಿದ್ದು ಹೊಗಳಿಕೊಳ್ಳುತ್ತೇವೆ. * ರೋಮಾ. 15:20ಈ ಮೇರೆಯೊಳಗಿದ್ದು ನಿಮ್ಮ ತನಕ ಬಂದಿದ್ದೇವೆ. ೧೪ ನಾವು ಕ್ರಿಸ್ತನ ಸುವಾರ್ತೆಯನ್ನು ಸಾರುತ್ತಾ ಇತರರಿಗಿಂತ ಮೊದಲು 1 ಕೊರಿ. 3:5, 4:15, 9:1ನಿಮ್ಮ ಬಳಿಗೆ ಬಂದದ್ದರಿಂದ ನಿಮ್ಮ ಮೇಲೆ ಅಧಿಕಾರವಿಲ್ಲದವರಂತೆ ಮೇರೆಯನ್ನು ಅತಿಕ್ರಮಿಸಿಹೋಗುತ್ತಿಲ್ಲ. ಕ್ರಿಸ್ತನ ಸುವಾರ್ತೆಯನ್ನು ಸಾರುತ್ತಾ ನಾವು ನಿಮ್ಮ ಬಳಿಗೆ ಬಂದಿದ್ದೆವಲ್ಲಾ. ೧೫ ನಾವು ಮಿತಿಗಳನ್ನು ಮೀರಿ ಮತ್ತೊಬ್ಬರ ಪ್ರಯಾಸದ ಫಲಗಳನ್ನು ತೆಗೆದುಕೊಂಡು, ಇವು ನಮ್ಮವು ಎಂದು ಹಿಗ್ಗುವವರಲ್ಲ. ಆದರೆ ನಿಮ್ಮ ನಂಬಿಕೆಯು ಹೆಚ್ಚಿದಾಗೆಲ್ಲಾ ನಿಮ್ಮ ಮೂಲಕ ನಮ್ಮ ಮಿತಿಯು ಇನ್ನೂ ವಿಸ್ತರಿಸಿತು. ೧೬  ಅ. ಕೃ. 19:21ನಿಮಗೆ ಆಚೆಯಿರುವ ಸೀಮೆಗಳಲ್ಲಿಯೂ ಸುವಾರ್ತೆಯನ್ನು ಸಾರುವೆವೆಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದೆವಷ್ಟೇ. ಮತ್ತೊಬ್ಬರ ಜಾಗದಲ್ಲಿ ಸಿದ್ಧವಾಗಿ ನಮಗೆ ಸಿಕ್ಕಿದ ಫಲವನ್ನು ಕುರಿತು ನಾವು ಹೆಚ್ಚಳಪಡುವುದಿಲ್ಲ. ೧೭  § 1 ಕೊರಿ. 1:31, ಯೆರೆಮೀಯನು 9:23-24ಹೆಚ್ಚಳಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ. ೧೮ ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯನಲ್ಲ. * ರೋಮಾ. 2:29, 1 ಕೊರಿ. 4:5ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು.

*೧೦:೧ ಜೆಕ. 9:9, ಮತ್ತಾ 11:29, ಫಿಲಿ. 2:7-8

೧೦:೨ 1 ಕೊರಿ. 4:18

೧೦:೨ 2 ಕೊರಿ. 13:2,10:; 1 ಕೊರಿ. 4:21

§೧೦:೪ 2 ಕೊರಿ. 6:7, ಎಫೆ. 6:11, 1 ಥೆಸ. 5:8

*೧೦:೪ ಯೆರೆ 1:10

೧೦:೬ 2 ಕೊರಿ. 2:9, 7:15

೧೦:೬ ವ 2 ನೋಡಿರಿ

§೧೦:೭ 1 ಕೊರಿ. 1:12, 14:37

*೧೦:೭ 1 ಕೊರಿ. 3:23

೧೦:೭ 2 ಕೊರಿ. 11:23, 1 ಕೊರಿ. 9:1, ಗಲಾ. 1:12

೧೦:೮ 2 ಕೊರಿ. 13:10

§೧೦:೧೦ 2 ಕೊರಿ. 11:21, 2 ಕೊರಿ. 12:7

*೧೦:೧೦ 1 ಕೊರಿ. 1:17

೧೦:೧೨ ವ. 18 ನೋಡಿರಿ

೧೦:೧೨ ಜ್ಞಾ. 26:12

§೧೦:೧೩ ರೋಮಾ. 12:3

*೧೦:೧೩ ರೋಮಾ. 15:20

೧೦:೧೪ 1 ಕೊರಿ. 3:5, 4:15, 9:1

೧೦:೧೬ ಅ. ಕೃ. 19:21

§೧೦:೧೭ 1 ಕೊರಿ. 1:31, ಯೆರೆಮೀಯನು 9:23-24

*೧೦:೧೮ ರೋಮಾ. 2:29, 1 ಕೊರಿ. 4:5