137
ಸೆರೆಯವರ ಪ್ರಲಾಪ
2ಪೂರ್ವ 36
1 ನಾವು ಬಾಬೆಲ್ ದೇಶದ ನದಿಗಳ ಬಳಿಯಲ್ಲಿ ಕುಳಿತುಕೊಂಡು,
ಚೀಯೋನನ್ನು ನೆನಪುಮಾಡಿಕೊಂಡು ಅತ್ತೆವು.
2 ಆ ದೇಶದ ನೀರವಂಜಿ ಮರಗಳಿಗೆ ನಮ್ಮ ಕಿನ್ನರಿಗಳನ್ನು ತೂಗುಹಾಕಿದೆವು.
3 ನಮ್ಮನ್ನು ಸೆರೆಹಿಡಿದು ಪೀಡಿಸುತ್ತಿದ್ದವರು ನಮಗೆ,
“ಚೀಯೋನಿನ ಗೀತೆಗಳಲ್ಲಿ ಒಂದನ್ನು ನಮ್ಮ ವಿನೋದಕ್ಕಾಗಿ ಹಾಡಿರಿ” ಎಂದು ಹೇಳುತ್ತಿದ್ದರು.
4 ನಾವು ಪರದೇಶದಲ್ಲಿ ಯೆಹೋವನ ಗೀತೆಗಳನ್ನು ಹಾಡುವುದು ಹೇಗೆ?
5 ಯೆರೂಸಲೇಮೇ, ನಾನು ನಿನ್ನನ್ನು ಮರೆತುಬಿಟ್ಟರೆ
* 137:5 ಅಥವಾ ನಾನು ಕಿನ್ನರಿಯನ್ನು ಇನ್ನೆಂದಿಗೂ ನನ್ನ ಬಲಗೈಯಿಂದ ಬಾರಿಸಲು ಆಗುವುದಿಲ್ಲ.ನನ್ನ ಬಲಗೈಯು ತನ್ನ ಕೌಶಲ್ಯವನ್ನು ಮರೆತು ಹೋಗಲಿ.
6 ಯೆರೂಸಲೇಮೇ, ನಾನು ನಿನ್ನನ್ನು ನೆನಪು ಮಾಡಿಕೊಳ್ಳದಿದ್ದರೆ,
ಎಲ್ಲಾದಕ್ಕಿಂತ ಹೆಚ್ಚಾಗಿ ನಾನು ನಿನ್ನಲ್ಲಿ ಆನಂದಿಸದಿದ್ದರೆ,
† 137:6 ಅಥವಾ ನಾನು ಇನ್ನೆಂದಿಗೂ ಹಾಡಲು ಆಗುವುದಿಲ್ಲ.ನನ್ನ ನಾಲಿಗೆಯು ಸೇದಿಹೋಗಲಿ.
7 ಯೆಹೋವನೇ, ಎದೋಮ್ಯರ ಹಾನಿಗಾಗಿ,
ಯೆರೂಸಲೇಮಿನ ನಾಶನದ ದಿನವನ್ನು ನೆನಪುಮಾಡಿಕೋ.
ಅವರು, “ಅದನ್ನು ಹಾಳುಮಾಡಿರಿ, ಅಸ್ತಿವಾರ ಸಹಿತ ಹಾಳುಮಾಡಿರಿ” ಎಂದು ಹೇಳಿದರಲ್ಲಾ.
8 ಹಾಳಾಗುವುದಕ್ಕಿರುವ ಬಾಬೆಲ್ ಪಟ್ಟಣವೇ,
ನೀನು ನನಗೆ ಮಾಡಿದ್ದಕ್ಕೆ ಮುಯ್ಯಿ ತೀರಿಸುವವನು ಧನ್ಯನು.
9 ನಿನ್ನ ಮಕ್ಕಳನ್ನು ಹಿಡಿದು ಬಂಡೆಗೆ ಅಪ್ಪಳಿಸುವವನು ಭಾಗ್ಯಹೊಂದಲಿ.