6
ಪರಸ್ಪರ ಭಾರವನ್ನು ಹೊತ್ತುಕೊಳ್ಳಿರಿ
ಸಹೋದರರೇ, * 6:1 2 ಕೊರಿ 2:7, ಇಬ್ರಿ. 12:13, ಯಾಕೋಬ. 5:19ನಿಮ್ಮಲ್ಲಿ ಯಾರಾದರೂ ಯಾವುದಾದರೂ ಪಾಪದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ 6:1 ರೋಮಾ. 15:1ಅಂಥವರನ್ನು ಆತ್ಮಭರಿತರಾದ ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ. ನೀವಾದರೂ ಶೋಧನೆಗೆ ಒಳಗಾಗದಂತೆ ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳಲಿ, ಹೀಗೆ ಕ್ರಿಸ್ತನ 6:2 ಧರ್ಮಶಾಸ್ತ್ರವನ್ನು, ಗಲಾ. 5:14ನೀತಿನಿಯಮಗಳನ್ನು ನೆರವೇರಿಸಿರಿ. § 6:3 1 ಕೊರಿ 3:18ಯಾವನಾದರೂ ಅಲ್ಪನಾಗಿದ್ದು ತಾನು ದೊಡ್ಡವನೆಂದು ಭಾವಿಸಿಕೊಂಡರೆ ತನ್ನನ್ನು ತಾನೇ ಮೋಸಗೊಳಿಸಿಕೊಳ್ಳುವನಾಗಿದ್ದಾನೆ. * 6:4 1 ಕೊರಿ 11:28, 2 ಕೊರಿ 13:5ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರೀಕ್ಷಿಸಿಕೊಳ್ಳಲಿ. ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡಬಹುದೇ ಹೊರತು ಮತ್ತೊಬ್ಬನೊಂದಿಗೆ ಹೋಲಿಸಿಕೊಂಡು ಹೆಚ್ಚಳಪಡಬೇಕಾಗಿರುವುದಿಲ್ಲ. ಏಕೆಂದರೆ 6:5 ರೋಮಾ. 14:12ಪ್ರತಿಯೊಬ್ಬನು ತನ್ನ ಸ್ವಂತ ಹೊರೆಯನ್ನು ತಾನೇ ಹೊತ್ತುಕೊಳ್ಳಬೇಕು.
6:6 ರೋಮಾ. 15:27, 1 ಕೊರಿ 9:11ದೇವರ ವಾಕ್ಯವನ್ನು ಕಲಿಯುವವನು, ಅದನ್ನು ಕಲಿಸುವವನಿಗೆ ತನ್ನಲ್ಲಿರುವ ಎಲ್ಲಾ ಮೇಲುಗಳಲ್ಲಿಯೂ ಪಾಲನ್ನು ಕೊಡಬೇಕು. ಮೋಸಹೋಗಬೇಡಿರಿ. § 6:7 ಯೋಬ. 13:9ದೇವರನ್ನು ಅಪಹಾಸ್ಯ ಮಾಡಲಾಗುವುದಿಲ್ಲ. * 6:7 2 ಕೊರಿ 9:6ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. ತನ್ನ 6:8 ಶರೀರಭಾವದಲ್ಲಿ, ಹೋಶೇ. 8:7, ಯೋಬ. 4:8ಶರೀರಭಾವವನ್ನು ಕುರಿತು ಬಿತ್ತುವವನು 6:8 ರೋಮಾ. 6:21ಆ ಭಾವದಿಂದ ನಾಶವನ್ನು ಕೊಯ್ಯುವನು. § 6:8 ಯಾಕೋಬ. 3:18ಆತ್ಮನ ಕುರಿತಾಗಿ ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು. * 6:9 2 ಥೆಸ. 3:13, 1 ಕೊರಿ 15:58ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳದೇ ಇರೋಣ. ಏಕೆಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು. 10 ಆದ್ದರಿಂದ ಅವಕಾಶ ಸಿಕ್ಕಿದಾಗಲೆಲ್ಲಾ ಎಲ್ಲರಿಗೂ ಒಳ್ಳೆಯದನ್ನು ಮಾಡೋಣ, ವಿಶೇಷವಾಗಿ 6:10 ಎಫೆ 2:19, ಇಬ್ರಿ. 3:6ಒಂದೇ ಮನೆಯವರಂತಿರುವ ಕ್ರೈಸ್ತ ವಿಶ್ವಾಸಿಗಳಿಗೆ ಮಾಡೋಣ.
ಕಡೆ ಎಚ್ಚರಿಕೆಗಳು ಮತ್ತು ವಂದನೆಗಳು
11 ಇಗೋ ನೋಡಿರಿ, 6:11 1 ಕೊರಿ 16:21ಸ್ವಂತ ಕೈಯಿಂದ ಎಂಥಾ ದೊಡ್ಡ ಅಕ್ಷರಗಳಲ್ಲಿ ನಿಮಗೆ ಬರೆಯುತ್ತಾ ಇದ್ದೇನೆ. 12 ದೈಹಿಕವಾಗಿ ಪ್ರಶಂಸೆಯನ್ನು ಹೊಂದಬೇಕೆಂದಿರುವವರು ಸುನ್ನತಿ ಮಾಡಿಸಿಕೊಳ್ಳಿರಿ ಎಂಬುದಾಗಿ ನಿಮ್ಮನ್ನು ಒತ್ತಾಯಿಸುತ್ತಾರೆ. § 6:12 ಗಲಾ. 5:11ಏಕೆಂದರೆ ಕ್ರಿಸ್ತನ ಶಿಲುಬೆಯ ದೆಸೆಯಿಂದ ತಮಗೆ ಹಿಂಸೆಯಾಗಬಾರದೆಂಬುದೇ ಅವರ ಉದ್ದೇಶ. 13 ಸುನ್ನತಿ ಮಾಡಿಸಿಕೊಂಡವರೇ ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುತ್ತಿಲ್ಲವಲ್ಲಾ. ಅವರು ನಿಮ್ಮ ಶರೀರದ ವಿಷಯದಲ್ಲಿ ಹೆಚ್ಚಳಪಡುವುದಕ್ಕಾಗಿ ನಿಮಗೆ ಸುನ್ನತಿಯಾಗಬೇಕೆಂದು ಅಪೇಕ್ಷಿಸುತ್ತಾರೆ. 14  * 6:14 1 ಕೊರಿ 2:2, ಫಿಲಿ. 3:3, 7-8ನನಗಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ವಿಷಯದಲ್ಲಿಯೇ ಹೊರತು ಬೇರೆ ಯಾವ ವಿಷಯದಲ್ಲಿಯೂ ಹೆಚ್ಚಳಪಡುವುದು ಬೇಕಾಗಿಲ್ಲ. ಆತನ ಮೂಲಕ 6:14 ರೋಮಾ. 6:6ನಾನು ಲೋಕಕ್ಕೂ, ಲೋಕವು ನನಗಾಗಿಯೂ ಶಿಲುಬೆಗೆ ಹಾಕಿಕೊಂಡು ಸತ್ತಿತು. 15  6:15 ರೋಮಾ. 2:28, ಗಲಾ. 5:6ಸುನ್ನತಿ ಮಾಡಿಸಿಕೊಳ್ಳುವುದೋ ಅಥವಾ ಮಾಡಿಸಿಕೊಳ್ಳದಿರುವುದೋ ಏನು ಅಲ್ಲ, ಆದರೆ § 6:15 ಯೋಹಾ 3:5-7, ರೋಮಾ. 6:4, 2 ಕೊರಿ 5:17ಹೊಸ ಸೃಷ್ಟಿಯಾಗುವುದೇ ಪ್ರಮುಖವಾದುದು. 16 ಈ ನಿಯಮಗಳನ್ನು ಸರಿಯಾಗಿ ನಡೆಯುವವರೆಲ್ಲರಿಗೂ ಮತ್ತು ದೇವರ * 6:16 ಗಲಾ. 3:7-9,29; ರೋಮಾ. 2:29, 4:12, 9:6-8ಇಸ್ರಾಯೇಲ್ಯರಿಗೆ ಶಾಂತಿಯೂ, ಕರುಣೆಯೂ ಉಂಟಾಗಲಿ.
17 ಇನ್ನು ಮೇಲೆ ಯಾರೂ ನನಗೆ ತೊಂದರೆಪಡಿಸಬಾರದು, 6:17 ಯೆಶಾ 44:5, ಯೆಹೆ. 9:4, ಪ್ರಕ 13:16ನನ್ನ ದೇಹದಲ್ಲಿ ಯೇಸುಕ್ರಿಸ್ತನ ಗುರುತುಗಳನ್ನು ಮುದ್ರಿಸಿಕೊಂಡಿದ್ದೇನೆ. 18 ಸಹೋದರರೇ, 6:18 ಫಿಲೆ. 25, ರೋಮಾ. 16:20ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು § 6:18 2 ತಿಮೊ. 4:22ನಿಮ್ಮ ಆತ್ಮದೊಂದಿಗಿರಲಿ. ಆಮೆನ್.

*6:1 6:1 2 ಕೊರಿ 2:7, ಇಬ್ರಿ. 12:13, ಯಾಕೋಬ. 5:19

6:1 6:1 ರೋಮಾ. 15:1

6:2 6:2 ಧರ್ಮಶಾಸ್ತ್ರವನ್ನು, ಗಲಾ. 5:14

§6:3 6:3 1 ಕೊರಿ 3:18

*6:4 6:4 1 ಕೊರಿ 11:28, 2 ಕೊರಿ 13:5

6:5 6:5 ರೋಮಾ. 14:12

6:6 6:6 ರೋಮಾ. 15:27, 1 ಕೊರಿ 9:11

§6:7 6:7 ಯೋಬ. 13:9

*6:7 6:7 2 ಕೊರಿ 9:6

6:8 6:8 ಶರೀರಭಾವದಲ್ಲಿ, ಹೋಶೇ. 8:7, ಯೋಬ. 4:8

6:8 6:8 ರೋಮಾ. 6:21

§6:8 6:8 ಯಾಕೋಬ. 3:18

*6:9 6:9 2 ಥೆಸ. 3:13, 1 ಕೊರಿ 15:58

6:10 6:10 ಎಫೆ 2:19, ಇಬ್ರಿ. 3:6

6:11 6:11 1 ಕೊರಿ 16:21

§6:12 6:12 ಗಲಾ. 5:11

*6:14 6:14 1 ಕೊರಿ 2:2, ಫಿಲಿ. 3:3, 7-8

6:14 6:14 ರೋಮಾ. 6:6

6:15 6:15 ರೋಮಾ. 2:28, ಗಲಾ. 5:6

§6:15 6:15 ಯೋಹಾ 3:5-7, ರೋಮಾ. 6:4, 2 ಕೊರಿ 5:17

*6:16 6:16 ಗಲಾ. 3:7-9,29; ರೋಮಾ. 2:29, 4:12, 9:6-8

6:17 6:17 ಯೆಶಾ 44:5, ಯೆಹೆ. 9:4, ಪ್ರಕ 13:16

6:18 6:18 ಫಿಲೆ. 25, ರೋಮಾ. 16:20

§6:18 6:18 2 ತಿಮೊ. 4:22