3
ಅಂತ್ಯ ದಿನಗಳು
1 ಆದರೆ * 3:1 1 ತಿಮೊ 4:1ಕಡೆ ದಿನಗಳಲ್ಲಿ ಕಠಿಣಕಾಲಗಳು ಬರುವವೆಂಬುದನ್ನು ತಿಳಿದುಕೋ. 2 ಮನುಷ್ಯರು † 3:2 ಫಿಲಿ 2:21ಸ್ವಾರ್ಥಚಿಂತಕರೂ, ‡ 3:2 ಲೂಕ 16:14; 1 ತಿಮೊ 6:10ಹಣದಾಸೆಯವರೂ, ಬಡಾಯಿಕೊಚ್ಚುವವರೂ, ಅಹಂಕಾರಿಗಳೂ, ದೂಷಕರೂ, ತಂದೆತಾಯಿಗಳಿಗೆ ಅವಿಧೇಯರೂ, ಉಪಕಾರ ನೆನಸದವರೂ, ದೇವಭಯವಿಲ್ಲದವರೂ, 3 § 3:3 ರೋಮಾ. 1:31ಮಮತೆಯಿಲ್ಲದವರೂ, ಸಮಾಧಾನಹೊಂದದವರೂ, ಚಾಡಿಹೇಳುವವರೂ, ದಮೆಯಿಲ್ಲದವರೂ, ಕ್ರೂರರೂ, * 3:3 ತೀತ 1:8ಒಳ್ಳೆಯದನ್ನು ದ್ವೇಷಿಸುವವರೂ, 4 ದ್ರೋಹಿಗಳೂ, ದುಡುಕುವವರೂ, † 3:4 1 ತಿಮೊ 3:6; 6:4ದುರಹಂಕಾರವುಳ್ಳವರೂ, ‡ 3:4 ಫಿಲಿ 3:19ದೇವರನ್ನು ಪ್ರೀತಿಸುವುದಕ್ಕಿಂತ ಅಧಿಕವಾಗಿ ಭೋಗವನ್ನೇ ಪ್ರೀತಿಸುವವರೂ, 5 ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು. ಇಂಥವರ ಸಹವಾಸವನ್ನೂ ಮಾಡದಿರು. 6 ಅವರಲ್ಲಿ ಕೆಲವರು § 3:6 ತೀತ 1:11ಮನೆಗಳಲ್ಲಿ ನುಸುಳಿ, ಪಾಪಗಳಿಂದ ತುಂಬಿದವರೂ, ನಾನಾ ವಿಧವಾದ ಆಸೆಗಳಿಂದ ಪ್ರೇರಿತರೂ ಆಗಿರುವ ಅವಿವೇಕಿಗಳಾದ ಸ್ತ್ರೀಯರನ್ನು ವಶಮಾಡಿಕೊಳ್ಳುವವರು ಆಗಿರುತ್ತಾರೆ. 7 ಆ ಸ್ತ್ರೀಯರು ಯಾವಾಗಲೂ ಉಪದೇಶ ಕೇಳುತ್ತಿದ್ದರೂ * 3:7 1 ತಿಮೊ 2:4ಸತ್ಯದ ಪರಿಜ್ಞಾನವನ್ನು ಹೊಂದಲಾರದವರು. 8 † 3:8 ವಿಮೋ 7:11ಯನ್ನ, ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ ಈ ಮನುಷ್ಯರು ಸಹ ಸತ್ಯಕ್ಕೆ ವಿರೋಧಿಗಳಾಗಿದ್ದು, ಬುದ್ಧಿಹೀನರೂ ನಂಬಿಕೆಯ ವಿಷಯದಲ್ಲಿ ನಿಷ್ಪ್ರಯೋಜಕರೂ ಆಗಿದ್ದಾರೆ. 9 ಆದರೆ ಅವರು ಹೆಚ್ಚು ಮುಂದುವರಿಯಲು ಸಾಧ್ಯವಿಲ್ಲ. ‡ 3:9 ವಿಮೋ 7:12; 8:18; 9:11ಆ ಯನ್ನ ಯಂಬ್ರರ ಮೂರ್ಖತನವು ಎಲ್ಲರಿಗೂ ಪ್ರಕಟವಾಗಿ ಬಂದ ಹಾಗೆಯೇ ಇವರದೂ ಪ್ರಕಟವಾಗುವುದು.
10 § 3:10 ಫಿಲಿ 2:22ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು, ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ ಇವುಗಳನ್ನೂ, 11 * 3:11 ಅ. ಕೃ 13:14; 45, 50ಅಂತಿಯೋಕ್ಯ, † 3:11 ಅ. ಕೃ 14:1,2,5ಇಕೋನ್ಯ, ‡ 3:11 ಅ. ಕೃ 14:6,19ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ, ಕಷ್ಟಾನುಭವಗಳನ್ನೂ ತಿಳಿದವನಾಗಿದ್ದೀ. ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನು, § 3:11 ಕೀರ್ತ 34:19ಅವೆಲ್ಲವುಗಳೊಳಗಿನಿಂದ * 3:11 2 ತಿಮೊ 4:17ಕರ್ತನು ನನ್ನನ್ನು ಬಿಡಿಸಿದನು. 12 † 3:12 ಅ. ಕೃ 14:22ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವುದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು. 13 ಆದರೆ ದುಷ್ಟರೂ, ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ‡ 3:13 ಪ್ರಕ 22:11ಹೆಚ್ಚಾದ ಕೆಟ್ಟತನಕ್ಕೆ ಹೋಗುವರು. 14 § 3:14 2 ತಿಮೊ 1:13ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬುದನ್ನು ಆಲೋಚಿಸು. 15 * 3:15 2 ತಿಮೊ 1:5ಚಿಕ್ಕಂದಿನಿಂದಲೂ ನಿನಗೆ † 3:15 ಯೋಹಾ 5:39ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ. ಆ ಗ್ರಂಥಗಳು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಮೂಲಕ ‡ 3:15 ಕೀರ್ತ 119:99ರಕ್ಷಣೆಹೊಂದುವ ಜ್ಞಾನವನ್ನು ನಿನಗೆ ಕೊಡುವುದಕ್ಕೆ ಶಕ್ತವಾಗಿವೆ. 16 ದೈವ ಪ್ರೇರಿತವಾದ § 3:16 ರೋಮ 15:4; 2 ಪೇತ್ರ 1:20,21ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ, ಖಂಡನೆಗೂ, ತಿದ್ದುಪಡಿಗೂ, ನೀತಿಶಿಕ್ಷೆಗೂ ಉಪಯುಕ್ತವಾಗಿದೆ. 17 ಆದ್ದರಿಂದ * 3:17 1 ತಿಮೊ 6:11ದೇವರ ಮನುಷ್ಯನು ಎಲ್ಲವನ್ನೂ ಬಲ್ಲವನಾಗಿದ್ದು ಸಕಲಸತ್ಕಾರ್ಯಗಳಿಗೆ ಸನ್ನದ್ಧನಾಗುವನು.
*3:1 3:1 1 ತಿಮೊ 4:1
†3:2 3:2 ಫಿಲಿ 2:21
‡3:2 3:2 ಲೂಕ 16:14; 1 ತಿಮೊ 6:10
§3:3 3:3 ರೋಮಾ. 1:31
*3:3 3:3 ತೀತ 1:8
†3:4 3:4 1 ತಿಮೊ 3:6; 6:4
‡3:4 3:4 ಫಿಲಿ 3:19
§3:6 3:6 ತೀತ 1:11
*3:7 3:7 1 ತಿಮೊ 2:4
†3:8 3:8 ವಿಮೋ 7:11
‡3:9 3:9 ವಿಮೋ 7:12; 8:18; 9:11
§3:10 3:10 ಫಿಲಿ 2:22
*3:11 3:11 ಅ. ಕೃ 13:14; 45, 50
†3:11 3:11 ಅ. ಕೃ 14:1,2,5
‡3:11 3:11 ಅ. ಕೃ 14:6,19
§3:11 3:11 ಕೀರ್ತ 34:19
*3:11 3:11 2 ತಿಮೊ 4:17
†3:12 3:12 ಅ. ಕೃ 14:22
‡3:13 3:13 ಪ್ರಕ 22:11
§3:14 3:14 2 ತಿಮೊ 1:13
*3:15 3:15 2 ತಿಮೊ 1:5
†3:15 3:15 ಯೋಹಾ 5:39
‡3:15 3:15 ಕೀರ್ತ 119:99
§3:16 3:16 ರೋಮ 15:4; 2 ಪೇತ್ರ 1:20,21
*3:17 3:17 1 ತಿಮೊ 6:11