9
1 * 9:1 ರೋಮಾ. 15:25ದೇವಜನರಿಗೋಸ್ಕರ ನೀವು ಸಂಗ್ರಹಿಸುತ್ತಿರುವ ಹಣದ ಕುರಿತು ನಾನು ನಿಮಗೆ ಬರೆಯುವ ಅವಶ್ಯಕತೆಯಿಲ್ಲ. 2 ನಿಮ್ಮ ಮನಸ್ಸಿನ ಬಯಕೆ ಏನೆಂಬುದು ನನಗೆ ಗೊತ್ತುಂಟು. ಕಳೆದ ವರ್ಷದಿಂದಲೂ ಅಖಾಯದವರು ಸಹಾಯಮಾಡುವುದಕ್ಕೆ ಸಿದ್ಧರಾಗಿದ್ದರೆಂದು ಮಕೆದೋನ್ಯದವರ ಮುಂದೆ † 9:2 2 ಕೊರಿ 8:24ನಿಮ್ಮನ್ನು ಹೊಗಳುತ್ತಾ ಇದ್ದೇನೆ. ಮತ್ತು ನಿಮ್ಮ ಆಸಕ್ತಿಯು ಅವರಲ್ಲಿ ಬಹುಜನರನ್ನು ಪ್ರೇರೇಪಿಸಿತು. 3 ಆದರೂ ನಾವು ನಿಮ್ಮನ್ನು ಹೊಗಳಿದ್ದು ಆಧಾರರಹಿತವಾಗದೆ ನಾನು ಹೇಳಿದ ಪ್ರಕಾರವೇ ‡ 9:3 1 ಕೊರಿ 16:2ನೀವು ಸಿದ್ಧರಾಗಿರಬಹುದೆಂದು ಆ ಸಹೋದರರನ್ನು ಕಳುಹಿಸಿದ್ದೇನೆ. 4 ನೀವು ಸಿದ್ಧವಾಗದಿದ್ದರೆ § 9:4 ಅ. ಕೃ. 20:4ಒಂದು ವೇಳೆ ಮಕೆದೋನ್ಯದವರಲ್ಲಿ ಯಾರಾದರೂ ನನ್ನ ಸಂಗಡ ಬಂದು ನೀವು ಸಿದ್ಧವಾಗಲಿಲ್ಲವೆಂಬುದನ್ನು ಕಂಡು ನಮಗೆ ನಿಮ್ಮ ಮೇಲೆ ಇಂಥ ಭರವಸೆ ಇಟ್ಟಿದ್ದಕ್ಕೆ ನಾವು ನಾಚಿಕೆಪಡಬೇಕಾದೀತು; ನಿಮಗೂ ನಾಚಿಕೆಯಾಗುವುದೆಂದು ನಾನು ಹೀಗೆ ಹೇಳುತ್ತೇನೆ. 5 ಹೀಗಿರಲಾಗಿ ಈ ಸಹೋದರರು ಮುಂಚಿತವಾಗಿ ನಿಮ್ಮ ಬಳಿಗೆ ಬಂದು ನೀವು ಮೊದಲೇ ವಾಗ್ದಾನಮಾಡಿದ ಕೊಡುಗೆಯನ್ನು ಸಿದ್ಧಪಡಿಸಲು ನಿಮಗೆ ಸಹಾಯಮಾಡುವಂತೆ ಇವರನ್ನು ಬೇಡಿಕೊಳ್ಳುವುದು ಅವಶ್ಯವೆಂದು ನನಗೆ ತೋಚಿತು. ಹೀಗೆ ಈ ದಾನ ಒತ್ತಾಯದ ವಸೂಲಿ ಆಗಿರದೆ ಮನಃಪೂರ್ವಕವಾಗಿ ಕೊಟ್ಟ ದಾನ ಆಗಿರುತ್ತದೆ.
ಪೌಲನು ಕೊರಿಂಥದ ಸಭೆಯವರನ್ನು ಉದಾರವಾಗಿ ಕೊಡುವುದಕ್ಕೆ ಪ್ರೇರೇಪಿಸಿದ್ದು
6 ಆದರೆ ಮಿತವಾಗಿ ಬಿತ್ತುವವನು ಮಿತವಾಗಿ ಕೊಯ್ಯುವನು. ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ. 7 ಪ್ರತಿಯೊಬ್ಬನೂ ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; * 9:7 ಧರ್ಮೋ 15:10; 2 ಕೊರಿ 8:12ದುಃಖದಿಂದಾಗಲಿ ಬಲವಂತದಿಂದಾಗಲಿ ಯಾರೂ ಕೊಡಬಾರದು; ಯಾಕೆಂದರೆ † 9:7 ವಿಮೋ 25:2ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುವನು. 8 ‡ 9:8 ಫಿಲಿ. 4:19; ಎಫೆ 3:20ದೇವರು ಸಕಲ ವಿಧವಾದ ದಾನಗಳನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವುದಕ್ಕೆ ಶಕ್ತನಾದ್ದರಿಂದ, ನೀವೂ ಯಾವಾಗಲೂ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆಯುಳ್ಳವರಾಗಿ ಸಕಲ ಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರಬೇಕು. 9 § 9:9 ಕೀರ್ತ 112:9“ಅವನು ಬಡವರಿಗೆ ಧಾರಾಳವಾಗಿ ನೀಡುವನು; ಅವನ ನೀತಿಯು ಸದಾಕಾಲವೂ ಇರುವುದು.” 10 * 9:10 ಯೆಶಾ 55:10ಬಿತ್ತುವವನಿಗೆ ಬೀಜವನ್ನೂ, ತಿನ್ನುವವನಿಗೆ ಆಹಾರವನ್ನು ಕೊಡುವಾತನು ನಿಮಗೂ ಬಿತ್ತುವುದಕ್ಕೆ ಬೀಜವನ್ನು ಕೊಟ್ಟು ಅದನ್ನು ಹೆಚ್ಚಿಸಿ ನಿಮ್ಮ ಧರ್ಮಕಾರ್ಯಗಳಿಂದಾಗುವ ಫಲಗಳನ್ನು ವೃದ್ಧಿಪಡಿಸುವನು. 11 ಹೀಗೆ ನೀವು † 9:11 1 ಕೊರಿ 1:5ಎಲ್ಲಾ ವಿಷಯಗಳಲ್ಲಿ ಐಶ್ವರ್ಯವಂತರಾಗಿದ್ದು ಉದಾರವಾಗಿ ಕೊಡಲು ಶಕ್ತರಾಗುವಿರಿ; ಇದಲ್ಲದೆ ನಿಮ್ಮ ದಾನಗಳು ನಮ್ಮ ಕೈಯಿಂದ ಮತ್ತೊಬ್ಬರಿಗೆ ಸೇರಿದಾಗ ಅದು ದೇವರಿಗೆ ಕೃತಜ್ಞತಾಸ್ತುತಿಯನ್ನು ಉಂಟುಮಾಡುತ್ತದೆ. 12 ಹೇಗೆಂದರೆ ನೀವು ಮಾಡುವ ಈ ಧರ್ಮಕಾರ್ಯವು ‡ 9:12 2 ಕೊರಿ 8; 14ದೇವಜನರ ಕೊರತೆಗಳನ್ನು ನೀಗಿಸುವುದು ಮಾತ್ರವಲ್ಲದೆ ಅನೇಕ ರೀತಿಯಲ್ಲಿ ದೇವರಿಗೆ ಕೃತಜ್ಞತಾಸ್ತುತಿಯನ್ನುಂಟುಮಾಡಲು ಇದು ಕಾರಣವಾಗುತ್ತದೆ. 13 ನೀವು ಮಾಡುವ ಈ ಸಹಾಯ ಹಾಗೂ ನಿಮ್ಮ ಯೋಗ್ಯ ಭಾವವನ್ನು ಅನೇಕರು ನೋಡುವಾಗ, § 9:13 1 ತಿಮೊ. 6:12,13; ಇಬ್ರಿ. 3:4,14; 10:23 ನೀವು ಮಾಡಿದ ಕ್ರಿಯೆಗೆ ಸರಿಯಾಗಿ, ಕ್ರಿಸ್ತನ ಸುವಾರ್ತೆಯನ್ನು ನೀವು ಅನುಸರಿಸುವುದರಿಂದಲೂ, ಅವರಿಗೂ ಮತ್ತು ಎಲ್ಲರಿಗೂ ನೀವು ಉದಾರವಾಗಿ ಸಹಾಯ ಮಾಡುವುದರಿಂದಲೂ ಅವರು * 9:13 ಮತ್ತಾ 5:16; 1 ಪೇತ್ರ 2:12ದೇವರನ್ನು ಕೊಂಡಾಡುವರು. 14 ಇದಲ್ಲದೆ ನಿಮಗೋಸ್ಕರ ವಿಜ್ಞಾಪನೆ ಮಾಡಿ ದೇವರ ಅತಿಶಯವಾದ ಕೃಪೆಯು ನಿಮಗೆ ದೊರೆತಿರುವುದರಿಂದ ಅವರು ನಿಮ್ಮನ್ನು ನೋಡಲು ಬಯಸಿರುವರಲ್ಲದೆ ನಿಮಗಾಗಿ ಪ್ರಾರ್ಥಿಸುವರು. 15 † 9:15 ಯೋಹಾ 3:16; ಎಫೆ 2:8ವರ್ಣಿಸಲಸಾಧ್ಯವಾದ ದಾನಗಳ ನಿಮಿತ್ತ ದೇವರಿಗೆ ಸ್ತೋತ್ರವಾಗಲಿ.
*9:1 9:1 ರೋಮಾ. 15:25
†9:2 9:2 2 ಕೊರಿ 8:24
‡9:3 9:3 1 ಕೊರಿ 16:2
§9:4 9:4 ಅ. ಕೃ. 20:4
*9:7 9:7 ಧರ್ಮೋ 15:10; 2 ಕೊರಿ 8:12
†9:7 9:7 ವಿಮೋ 25:2
‡9:8 9:8 ಫಿಲಿ. 4:19; ಎಫೆ 3:20
§9:9 9:9 ಕೀರ್ತ 112:9
*9:10 9:10 ಯೆಶಾ 55:10
†9:11 9:11 1 ಕೊರಿ 1:5
‡9:12 9:12 2 ಕೊರಿ 8; 14
§9:13 9:13 1 ತಿಮೊ. 6:12,13; ಇಬ್ರಿ. 3:4,14; 10:23
*9:13 9:13 ಮತ್ತಾ 5:16; 1 ಪೇತ್ರ 2:12
†9:15 9:15 ಯೋಹಾ 3:16; ಎಫೆ 2:8