5
ಸಭೆಯಲ್ಲಿ ನಡೆದಿದ್ದ ವಿಪರೀತ ಜಾರತ್ವವನ್ನು ಕುರಿತದ್ದು
ನಿಮ್ಮಲ್ಲಿ ಜಾರತ್ವವುಂಟೆಂಬ ಸುದ್ದಿಯನ್ನು ನಾನು ಕೇಳಿದ್ದೇನೆ. * 5:1 ಯಾಜ 18:8; ಧರ್ಮೋ 22:30; 27:20ಒಬ್ಬನು ತನ್ನ ತಂದೆಯ ಹೆಂಡತಿಯನ್ನು ಇಟ್ಟುಕೊಂಡಿದ್ದಾನಂತೆ. ಅಂಥ ಜಾರತ್ವವು ಅನ್ಯಜನರಲ್ಲಿಯೂ ಸಹ ಇಲ್ಲ. ಹೀಗಿದ್ದರೂ 5:2 2 ಕೊರಿ 7:7ನೀವು ದುಃಖಿಸದೆ, ಈ ಕಾರ್ಯಮಾಡಿದವನನ್ನು ನಿಮ್ಮೊಳಗಿಂದ ಬಹಿಷ್ಕರಿಸದೆ, ಉಬ್ಬಿಕೊಂಡಿದ್ದೀರಲ್ಲಾ. 5:3 2 ಕೊಲೊ 2:5ನಾನಂತೂ ಶಾರೀರಿಕವಾಗಿ ನಿಮ್ಮಿಂದ ದೂರವಾಗಿದ್ದರೂ, ಆತ್ಮದಿಂದ ಹತ್ತಿರದಲ್ಲಿದ್ದು ಈ ಕಾರ್ಯ ಮಾಡಿದವನನ್ನು ಕುರಿತು ಆಗಲೇ ನಿಮ್ಮ ಹತ್ತಿರವಿದ್ದವನಂತೆ ತೀರ್ಪು ಮಾಡಿದ್ದೇನೆ. § 5:4 2 ಥೆಸ. 3:6; ಮತ್ತಾ 16:19; 18:18; ಯೋಹಾ 20:23; 2 ಕೊರಿ 13:10ನಮ್ಮ ಕರ್ತನಾದ ಯೇಸುವಿನ ನಾಮದಲ್ಲಿ ನೀವೆಲ್ಲರೂ ಸೇರಿ ಬರುವಾಗ ನಾನು * 5:4 ಪೌಲನು ತನ್ನ ಯೋಚನೆ ಅಥವಾ ಅಭಿಪ್ರಾಯದ ಮೂಲಕ ಅವರೊಂದಿಗಿದ್ದಾನೆ. ಆತ್ಮದಿಂದ ನಿಮ್ಮೊಂದಿಗಿರುತ್ತೇನೆ ಹಾಗೂ ಅವನನ್ನು ಸೈತಾನನಿಗೆ ಒಪ್ಪಿಸಿರಿ ಯಾಕೆಂದರೆ ಕರ್ತನಾದ ಯೇಸುವಿನ 5:5 1 ಕೊರಿ 1:8ಪ್ರತ್ಯಕ್ಷತೆಯ ದಿನದಲ್ಲಿ ಅಂಥವನ ಆತ್ಮವು ರಕ್ಷಣೆ ಹೊಂದುವುದಕ್ಕಾಗಿ ಅವನ ಶರೀರಭಾವವು ನಾಶವಾಗುವಂತೆ ಕರ್ತನಾದ ಯೇಸುವಿನ ಶಕ್ತಿಯಿಂದ ತೀರ್ಪು ಮಾಡಿದ್ದೇನೆ. ನೀವು ಹೊಗಳಿಕೊಳ್ಳುವುದು ಒಳ್ಳೆಯದಲ್ಲ. 5:6 ಗಲಾ. 5:9; 1 ಕೊರಿ 15:33ಸ್ವಲ್ಪ ಹುಳಿ ಕಲಸಿದರೆ ಕಣಕವೆಲ್ಲಾ ಹುಳಿಯಾಗುತ್ತದೆಂಬುದು ನಿಮಗೆ ತಿಳಿಯದೋ? ನೀವು ಹುಳಿಯಿಲ್ಲದವರೆನಿಸಿಕೊಂಡದ್ದರಿಂದ ಹಳೇ ಹುಳಿಯನ್ನು ತೆಗೆದುಹಾಕಿ ಹೊಸ ಕಣಕದಂತಾಗಿರಿ. ಯಾಕೆಂದರೆ ಈಗಾಗಲೇ ನಮ್ಮ ಪಸ್ಕ ಯಜ್ಞದ ಕುರಿಮರಿಯು ಬಲಿಯಾಗಿದೆ; ಆ ಕುರಿಮರಿ ಯಾವುದೆಂದರೆ ಕ್ರಿಸ್ತನೇ. ಆದಕಾರಣ ನಾವು § 5:8 ವಿಮೋ 12:15; 13:7; ಧರ್ಮೋ 16:3ಹಳೇ ಹುಳಿಯನ್ನು * 5:8 ಮತ್ತಾ 16:6-12; ಮಾರ್ಕ 8:15; ಲೂಕ 12:1ಅಂದರೆ ದುರ್ಮಾರ್ಗತ್ವ ಮತ್ತು ದುಷ್ಟತ್ವ ಎಂಬ ಹುಳಿಯನ್ನು ಇಟ್ಟುಕೊಳ್ಳದೇ ಪ್ರಾಮಾಣಿಕತೆ ಹಾಗೂ ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿಯನ್ನೇ ತೆಗೆದುಕೊಂಡು ಹಬ್ಬವನ್ನು ಆಚರಿಸೋಣ.
ಜಾರರ ಸಹವಾಸ ಮಾಡಬಾರದೆಂದು ನನ್ನ ಪತ್ರಿಕೆಯಲ್ಲಿ ಬರೆದಿದ್ದೇನೆ. 10 ಅದು ಈ ಲೋಕದಲ್ಲಿರುವ ಜಾರರು, ಆಸೆಬುರುಕರು, ಸುಲುಕೊಳ್ಳುವವರು, ವಿಗ್ರಹಾರಾಧಕರು, ಮೊದಲಾದವರ ಸಹವಾಸವನ್ನು ಬಿಟ್ಟುಬಿಡಬೇಕೆಂಬ ಅರ್ಥದಲ್ಲಿ ಅಲ್ಲ; 5:10 ಯೋಹಾ 17:15ಹಾಗೆ ಬಿಡಬೇಕಾದರೆ ನೀವು ಈ ಲೋಕವನ್ನೇ ಬಿಟ್ಟುಹೋಗಬೇಕಾದೀತು. 11 ಆದರೆ 5:11 2 ಥೆಸ. 3:6ಕ್ರೈಸ್ತ ಸಹೋದರನೆನಿಸಿಕೊಂಡವನು ಜಾರನು, ಲೋಭಿಯು, ವಿಗ್ರಹಾರಾಧಕನು, ಜಗಳಗಂಟನೂ, ಕುಡುಕನು, ಸುಲುಕೊಳ್ಳುವವನೂ ಆಗಿದ್ದ ಪಕ್ಷದಲ್ಲಿ ಅವನ ಸಹವಾಸ ಮಾಡಬಾರದು. ಅಂಥವನ ಸಂಗಡ ಊಟ ಸಹ ಮಾಡಬಾರದು ಎಂದು ಬರೆದಿದ್ದೇನೆ. 12 ಸಭೆಯ ಹೊರಗಿರುವವರನ್ನು ತೀರ್ಪುಮಾಡುವುದಕ್ಕೆ ನನಗೇನಧಿಕಾರವಿದೆ? § 5:12 1 ಕೊರಿ 6:1-4ಒಳಗಿನವರನ್ನು ತೀರ್ಪುಮಾಡುವವರು ನೀವೇ ಅಲ್ಲವೇ. 13 ಹೊರಗಿರುವವರನ್ನು ತೀರ್ಪುಮಾಡುವವನು ದೇವರು. “ನಿಮ್ಮ ಮಧ್ಯದಲ್ಲಿರುವ * 5:13 ಧರ್ಮೋ 13:5; 17:7; 12:22-24ಆ ದುಷ್ಟ ವ್ಯಕ್ತಿಯನ್ನು ತೆಗೆದುಹಾಕಿರಿ.”

*5:1 5:1 ಯಾಜ 18:8; ಧರ್ಮೋ 22:30; 27:20

5:2 5:2 2 ಕೊರಿ 7:7

5:3 5:3 2 ಕೊಲೊ 2:5

§5:4 5:4 2 ಥೆಸ. 3:6; ಮತ್ತಾ 16:19; 18:18; ಯೋಹಾ 20:23; 2 ಕೊರಿ 13:10

*5:4 5:4 ಪೌಲನು ತನ್ನ ಯೋಚನೆ ಅಥವಾ ಅಭಿಪ್ರಾಯದ ಮೂಲಕ ಅವರೊಂದಿಗಿದ್ದಾನೆ.

5:5 5:5 1 ಕೊರಿ 1:8

5:6 5:6 ಗಲಾ. 5:9; 1 ಕೊರಿ 15:33

§5:8 5:8 ವಿಮೋ 12:15; 13:7; ಧರ್ಮೋ 16:3

*5:8 5:8 ಮತ್ತಾ 16:6-12; ಮಾರ್ಕ 8:15; ಲೂಕ 12:1

5:10 5:10 ಯೋಹಾ 17:15

5:11 5:11 2 ಥೆಸ. 3:6

§5:12 5:12 1 ಕೊರಿ 6:1-4

*5:13 5:13 ಧರ್ಮೋ 13:5; 17:7; 12:22-24