5
ವಿಶ್ವಾಸಿಗಳೊಂದಿಗಿನ ಕರ್ತವ್ಯಗಳು
* 5:1 ಯಾಜ 19:32ವೃದ್ಧರನ್ನು ಗದರಿಸದೆ ತಂದೆಯೆಂದು ಭಾವಿಸಿ ಬುದ್ಧಿಹೇಳು. ಯೌವನಸ್ಥರನ್ನು ಅಣ್ಣತಮ್ಮಂದಿರೆಂದೂ, ವೃದ್ಧಸ್ತ್ರೀಯರನ್ನು ತಾಯಿಯಂತೆಯೂ, ಯೌವನಸ್ತ್ರೀಯರನ್ನು ಪೂರ್ಣ ಶುದ್ಧಭಾವದಿಂದ ಅಕ್ಕತಂಗಿಯರೆಂದೂ ಎಣಿಸಿ ಅವರವರಿಗೆ ತಕ್ಕ ಹಾಗೆ ಬುದ್ಧಿಹೇಳು.
3-4 ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸು. ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ ಅವರೇ 5:3-4 ಮತ್ತಾ 15:4-6; ಮಾರ್ಕ 7:10-13; ಎಫೆ 6:1,2; ಆದಿ 45:9-11ಮೊದಲು ತಮ್ಮ ಮನೆಯವರಿಗೆ ಭಕ್ತಿತೋರಿಸುವುದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವುದಕ್ಕೂ ಕಲಿತುಕೊಳ್ಳಲಿ. 5:3-4 1 ತಿಮೊ. 2:3ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ. ದಿಕ್ಕಿಲ್ಲದೆ ಒಬ್ಬೊಂಟಿಗಳಾಗಿರುವ ವಿಧವೆಯು, ದೇವರ ಮೇಲೆ ನಿರೀಕ್ಷೆಯನ್ನಿಟ್ಟು, § 5:5 ಲೂಕ 2:37; 18:15ಹಗಲಿರುಳು ವಿಜ್ಞಾಪನೆಗಳಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನೆಲೆಗೊಂಡಿರುವಳು. ಆದರೆ ಸುಖಭೋಗದಲ್ಲಿರುವ ವಿಧವೆಯು * 5:6 ಪ್ರಕ 3:1ಬದುಕಿದ್ದರೂ ಸತ್ತಂತೆಯೇ. ವಿಧವೆಯರು ನಿಂದೆಗೆ ಗುರಿಯಾಗದಂತೆ 5:7 1 ತಿಮೊ. 4:11; 6:2ಈ ವಿಷಯಗಳನ್ನು ಆಜ್ಞಾಪಿಸು. ಯಾವನಾದರೂ ಸ್ವಂತ ಜನರನ್ನು, 5:8 ಗಲಾ. 6:10ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ಕ್ರಿಸ್ತ ನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕೀಳಾದವನೂ ಆಗಿದ್ದಾನೆ. ವಯಸ್ಸಿನಲ್ಲಿ ಅರುವತ್ತು ವರ್ಷ ಮೇಲ್ಪಟ್ಟ, ವಿಧವೆಯನ್ನು ವಿಧವೆಯರ ಪಟ್ಟಿಯಲ್ಲಿ ಸೇರಿಸಬಹುದು. ಅಂಥವಳಾದರೂ § 5:9 1 ತಿಮೊ. 3:2ಒಬ್ಬ ಗಂಡನಿಗೆ ಮಾತ್ರ ಹೆಂಡತಿಯಾಗಿದ್ದವಳಾಗಿ, 10 ಸತ್ಕ್ರಿಯೆಗಳನ್ನು ಮಾಡುವವಳೆಂದು ಹೆಸರುಗೊಂಡವಳೂ ಆಗಿದ್ದಲ್ಲಿ, ಅವರು ಮಕ್ಕಳನ್ನು ಸಾಕಿಕೊಂಡು, ಅತಿಥಿಸತ್ಕಾರವನ್ನು ಮಾಡುತ್ತಾ, * 5:10 ದೇವಜನರ ಕಾಲುಗಳನ್ನು ತೊಳೆಯುವುದು; ಆದಿ 18:4ದೇವಜನರಿಗೆ ಉಪಚಾರಮಾಡಿದವಳಾಗಲಿ, ಸಂಕಟದಲ್ಲಿ ಬಿದ್ದವರಿಗೆ ಸಹಾಯಮಾಡುತ್ತಾ ಎಲ್ಲಾ ಸತ್ಕಾರ್ಯಗಳಲ್ಲಿ ಆಸಕ್ತಿಯುಳ್ಳವಳಾಗಿರಲಿ.
11 ಯೌವನ ಪ್ರಾಯದ ವಿಧವೆಯರನ್ನು ಪಟ್ಟಿಯಲ್ಲಿ ಸೇರಿಸಬೇಡ, ಅವರು ದೈಹಿಕ ಆಸೆಗಳಿಂದ ಸೋಲಿಸಲ್ಪಟ್ಟು, ಕ್ರಿಸ್ತನಿಗೆ ವಿಮುಖರಾಗಿ ಮದುವೆಮಾಡಿಕೊಳ್ಳಬೇಕೆಂದು ಇಷ್ಟಪಟ್ಟಾರು. 12 ಅಂಥವರು ತಾವು ಮೊದಲು ಮಾಡಿದ ಪ್ರತಿಜ್ಞೆಯನ್ನು ಉಲ್ಲಂಘಿಸಿ ತೀರ್ಪಿಗೆ ಗುರಿಯಾಗಿರುವರು. 13 ಇದಲ್ಲದೆ ಅವರು ಮನೆಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ. ಮೈಗಳ್ಳರಾಗುವುದಲ್ಲದೆ, 5:13 3 ಯೋಹಾ 10ಹರಟೆಮಾತನಾಡುವವರೂ, 5:13 2 ಥೆಸ. 3:11; 1 ಪೇತ್ರ 4:15ಇತರರ ವಿಷಯಗಳಲ್ಲಿ ತಲೆ ಹಾಕುವವರೂ ಆಗಿ ಆಡಬಾರದ ಮಾತುಗಳನ್ನಾಡುತ್ತಾರೆ. 14 ಆದ್ದರಿಂದ ಯೌವನ § 5:14 1 ಕೊರಿ 7:9ಪ್ರಾಯದ ವಿಧವೆಯರು ಮದುವೆಮಾಡಿಕೊಂಡು ಮಕ್ಕಳನ್ನು ಹೆತ್ತು ಮನೆಯನ್ನು ನಿರ್ವಹಿಸುವವರಾಗಿರುವುದು ನನಗೆ ಒಳ್ಳೆಯದಾಗಿ ತೋಚುತ್ತದೆ. ಹಾಗೆ ಮಾಡುವುದರಿಂದ * 5:14 1 ತಿಮೊ 1:20ವಿರೋಧಿಗಳ ನಿಂದೆಗೆ ಆಸ್ಪದಕೊಡದೆ ಇರುವರು. 15 ಇಷ್ಟರೊಳಗೆ ಕೆಲವರು ಅಡ್ಡದಾರಿ ಹಿಡಿದು ಸೈತಾನನನ್ನು ಹಿಂಬಾಲಿಸಿದ್ದಾರೆ. 16 ನಂಬುವವಳಾದ ಸ್ತ್ರೀಯ ಬಂಧುಭಾಂಧವರಲ್ಲಿ ವಿಧವೆಯರಿದ್ದರೆ ಆಕೆಯೇ ಅವರನ್ನು ಸಂರಕ್ಷಿಸಲಿ. ಸಭೆಯು ದಿಕ್ಕಿಲ್ಲದ ವಿಧವೆಯರಿಗೆ ಸಹಾಯ ಮಾಡಬೇಕಾಗಿರುವುದರಿಂದ ಆಕೆಯು ಆ ಭಾರವನ್ನು ಸಭೆಯ ಮೇಲೆ ಹಾಕಬಾರದು.
ಹಿರಿಯರ ವಿಷಯದಲ್ಲಿ ನಡೆಯಬೇಕಾದ ರೀತಿ
17 ಚೆನ್ನಾಗಿ 5:17 ರೋಮಾ. 12:8; 1 ಥೆಸ. 5:12; 1 ಕೊರಿ 12:28; ಇಬ್ರಿ. 13:7, 17ಅಧಿಕಾರ ನಡಿಸುವ ಸಭೆಯ ಹಿರಿಯರನ್ನು, ಅವರೊಳಗೆ ವಿಶೇಷವಾಗಿ ದೇವರ ವಾಕ್ಯವನ್ನು ಸಾರುವುದರಲ್ಲಿಯೂ ಉಪದೇಶಿಸುವುದರಲ್ಲಿಯೂ ಕಷ್ಟಪಡುವವರನ್ನು ಎರಡುಪಟ್ಟು ಗೌರವಕ್ಕೆ ಯೋಗ್ಯರೆಂದು ಎಣಿಸಬೇಕು. 18  5:18 ಧರ್ಮೋ 25:4; 1 ಕೊರಿ 9:9“ಕಣತುಳಿಯುವ ಎತ್ತಿನ ಬಾಯಿ ಕಟ್ಟಬಾರದು,” ಮತ್ತು “§ 5:18 ಮತ್ತಾ 10:10; ಲೂಕ 10:7; ಯಾಜ 19:13; ಧರ್ಮೋ 19:15; 1 ಕೊರಿ 9:4 7-14ಆಳು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆ” ಎಂದು ಶಾಸ್ತ್ರದಲ್ಲಿ ಹೇಳಿದೆಯಲ್ಲಾ. 19 ಸಭೆಯ ಹಿರಿಯನ ಮೇಲೆ ಯಾರಾದರೂ ದೂರು ಹೇಳಿದರೆ ಇಬ್ಬರು ಮೂವರು ಸಾಕ್ಷಿಗಳಿದ್ದ ಹೊರತಾಗಿ ಅದನ್ನು ಒಪ್ಪಿಕೊಳ್ಳಬೇಡ. 20 ಪಾಪದಲ್ಲಿ ನಡೆಯುವವರನ್ನು * 5:20 ತೀತ 1:13; 2:15ಎಲ್ಲರ ಮುಂದೆಯೇ ಗದರಿಸು. 5:20 ಧರ್ಮೋ 13:11ಇವರಿಂದ ಉಳಿದವರಿಗೂ ಭಯವುಂಟಾಗುವುದು. 21 ನೀನು ವಿಚಾರಿಸುವುದಕ್ಕೆ ಮೊದಲೇ ತಪ್ಪುಹೊರಿಸದೆಯೂ, ಪಕ್ಷಪಾತದಿಂದ ಏನೂ ಮಾಡದೆಯೂ, ನಾನು ಹೇಳಿರುವ ಮಾತುಗಳ ಪ್ರಕಾರವೇ ನಡೆಯಬೇಕೆಂದು ದೇವರ ಮುಂದೆಯೂ, ಕ್ರಿಸ್ತ ಯೇಸುವಿನ ಮುಂದೆಯೂ, ಆರಿಸಲ್ಪಟ್ಟಿರುವ ದೇವದೂತರ ಮುಂದೆಯೂ ಖಂಡಿತವಾಗಿ ಹೇಳುತ್ತೇನೆ. 22  5:22 1 ತಿಮೊ. 3:10ಅವಸರದಿಂದ § 5:22 ಅ. ಕೃ. 6:6ಯಾರ ತಲೆಯ ಮೇಲೆಯಾದರೂ * 5:22 ಹಸ್ತವನ್ನಿಡಬೇಡಹಸ್ತವನ್ನಿಟ್ಟು ಸಭೆಯ ನಾಯಕತ್ವಕ್ಕೆ ನೇಮಿಸಬೇಡ. 5:22 2 ಯೋಹಾ 11ಮತ್ತೊಬ್ಬರು ಮಾಡಿದ ಪಾಪದಲ್ಲಿ ನೀನು ಪಾಲುಗಾರನಾಗದೆ, ನೀನು ಶುದ್ಧನಾಗಿರುವ ಹಾಗೆ ನೋಡಿಕೋ. 23 ಇನ್ನು ಮೇಲೆ ನೀರನ್ನು ಮಾತ್ರ ಕುಡಿಯುವವನಾಗಿರದೆ, ನಿನ್ನ ಅಜೀರ್ಣದ ಮತ್ತು ನಿನಗೆ ಆಗಾಗ್ಗೆ ಉಂಟಾಗುವ ಅಸ್ವಸ್ಥತೆಯ ಪರಿಹಾರಕ್ಕಾಗಿ ದ್ರಾಕ್ಷಾರಸವನ್ನು 5:23 1 ತಿಮೊ. 3:8ಸ್ವಲ್ಪವಾಗಿ ತೆಗೆದುಕೊ. 24 ಕೆಲವರ ಪಾಪಕೃತ್ಯಗಳು ತೀರ್ಪಿಗೆ ಮುಂಚೆಯೇ ಬಯಲಾಗುತ್ತವೆ, ಬೇರೆ ಕೆಲವರ ಪಾಪಕೃತ್ಯಗಳು ಮರೆಯಾಗಿದ್ದು ತರುವಾಯ ತಿಳಿದುಬರುತ್ತವೆ. 25 ಹಾಗೆಯೇ ಕೆಲವು ಸತ್ಕ್ರಿಯೆಗಳು ಪ್ರಸಿದ್ಧವಾಗಿವೆ, ಬೇರೆ ಕೆಲವು ಸತ್ಕ್ರಿಯೆಗಳು ಬೆಳಕಿಗೆ ಬಾರದ್ದಿದ್ದರೂ § 5:25 ಕೀರ್ತ 37:6ಮರೆಯಾಗಿರಲಾರವು.

*5:1 5:1 ಯಾಜ 19:32

5:3-4 5:3-4 ಮತ್ತಾ 15:4-6; ಮಾರ್ಕ 7:10-13; ಎಫೆ 6:1,2; ಆದಿ 45:9-11

5:3-4 5:3-4 1 ತಿಮೊ. 2:3

§5:5 5:5 ಲೂಕ 2:37; 18:15

*5:6 5:6 ಪ್ರಕ 3:1

5:7 5:7 1 ತಿಮೊ. 4:11; 6:2

5:8 5:8 ಗಲಾ. 6:10

§5:9 5:9 1 ತಿಮೊ. 3:2

*5:10 5:10 ದೇವಜನರ ಕಾಲುಗಳನ್ನು ತೊಳೆಯುವುದು; ಆದಿ 18:4

5:13 5:13 3 ಯೋಹಾ 10

5:13 5:13 2 ಥೆಸ. 3:11; 1 ಪೇತ್ರ 4:15

§5:14 5:14 1 ಕೊರಿ 7:9

*5:14 5:14 1 ತಿಮೊ 1:20

5:17 5:17 ರೋಮಾ. 12:8; 1 ಥೆಸ. 5:12; 1 ಕೊರಿ 12:28; ಇಬ್ರಿ. 13:7, 17

5:18 5:18 ಧರ್ಮೋ 25:4; 1 ಕೊರಿ 9:9

§5:18 5:18 ಮತ್ತಾ 10:10; ಲೂಕ 10:7; ಯಾಜ 19:13; ಧರ್ಮೋ 19:15; 1 ಕೊರಿ 9:4 7-14

*5:20 5:20 ತೀತ 1:13; 2:15

5:20 5:20 ಧರ್ಮೋ 13:11

5:22 5:22 1 ತಿಮೊ. 3:10

§5:22 5:22 ಅ. ಕೃ. 6:6

*5:22 5:22 ಹಸ್ತವನ್ನಿಡಬೇಡ

5:22 5:22 2 ಯೋಹಾ 11

5:23 5:23 1 ತಿಮೊ. 3:8

§5:25 5:25 ಕೀರ್ತ 37:6