ಯಾಕೋಬನು
ಗ್ರಂಥಕರ್ತೃತ್ವ
ಯಾಕೋಬನು ಇದರ ಗ್ರಂಥಕರ್ತನಾಗಿದ್ದಾನೆ (1:1), ಇವನು ಯೆರೂಸಲೇಮಿನ ಸಭೆಯಲ್ಲಿ ಪ್ರಮುಖ ನಾಯಕನು ಮತ್ತು ಯೇಸುಕ್ರಿಸ್ತನ ಸಹೋದರನು ಆಗಿದ್ದನು. ಕ್ರಿಸ್ತನ ಅನೇಕ ತಮ್ಮಂದಿರ ಪೈಕಿ ಯಾಕೋಬನು ಒಬ್ಬನಾಗಿದ್ದನು, ಬಹುಶಃ ಇವನು ಅವರಲ್ಲಿ ಹಿರಿಯವನಾಗಿರಬಹುದು ಏಕೆಂದರೆ ಮತ್ತಾ 13:55 ರಲ್ಲಿರುವ ಪಟ್ಟಿಯಲ್ಲಿ ಅವನು ಮೊದಲಿಗನಾಗಿದ್ದಾನೆ. ಮೊದಲು ಅವನು ಯೇಸುವನ್ನು ನಂಬಲಿಲ್ಲ ಮತ್ತು ಅವನು ಆತನಿಗೆ ಸವಾಲುಹಾಕಿದನು ಮತ್ತು ಆತನ ನಿಯೋಗವನ್ನು ತಪ್ಪಾಗಿ ತಿಳಿದುಕೊಂಡಿದ್ದನು (ಯೋಹಾ 7:2-5). ತರುವಾಯ ಅವನು ಸಭೆಯಲ್ಲಿ ಬಹಳ ಪ್ರಮುಖನಾದನು. ಕ್ರಿಸ್ತನು ಪುನರುತ್ಥಾನದ ನಂತರ ಕಾಣಿಸಿಕೊಂಡ ಆಯ್ದ ವ್ಯಕ್ತಿಗಳಲ್ಲಿ ಇವನು ಒಬ್ಬನಾಗಿದ್ದನು (1 ಕೊರಿ 15:7), ಪೌಲನು ಇವನನ್ನು ಸಭೆಯ ಸ್ತಂಭವೆಂದು ಕರೆದನು (ಗಲಾ. 2:9).
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 40-50 ರ ನಡುವೆ ಬರೆಯಲ್ಪಟ್ಟಿದೆ. ಕ್ರಿ.ಶ. 50 ರಲ್ಲಿ ಯೆರೂಸಲೇಮಿನಲ್ಲಿ ನಡೆದ ಸಮಾಲೋಚನ ಸಮಿತಿಗಿಂತ ಮುಂಚೆ ಮತ್ತು ಕ್ರಿ.ಶ. 70 ರಲ್ಲಿ ಉಂಟಾದ ದೇವಾಲಯದ ವಿನಾಶಕ್ಕಿಂತ ಮುಂಚೆ ಬರೆಯಲ್ಪಟ್ಟಿದೆ.
ಸ್ವೀಕೃತದಾರರು
ಪತ್ರಿಕೆಯ ಸ್ವೀಕೃತದಾರರು ಯೂದಾಯ ಮತ್ತು ಸಮಾರ್ಯದುದ್ದಕ್ಕೂ ಚದುರಿರುವ ಯೆಹೂದ್ಯ ವಿಶ್ವಾಸಿಗಳಾಗಿದ್ದಾರೆ. ಆದರೂ, ಯಾಕೋಬನ ಆರಂಭಿಕ ವಂದನೆಯಾದ “ಅನ್ಯದೇಶಗಳಲ್ಲಿ ಚದುರಿರುವ ಹನ್ನೆರಡು ಗೋತ್ರದವರಿಗೆ” ಎಂಬುದನ್ನು ಆಧರಿಸಿ, ಈ ಪ್ರದೇಶಗಳು ಯಾಕೋಬನ ಮೂಲ ವಾಚಕರ ಸ್ಥಳವಾಗಿರುವ ಪ್ರಬಲವಾದ ಸಾಧ್ಯತೆಗಳಾಗಿವೆ.
ಉದ್ದೇಶ
ಯಾಕೋಬನ ವ್ಯಾಪಕವಾದ ಉದ್ದೇಶವನ್ನು ಯಾಕೋ. 1:2-4 ರಲ್ಲಿ ನೋಡಬಹುದು. ಯಾಕೋಬನು ತನ್ನ ಆರಂಭಿಕ ಮಾತುಗಳಲ್ಲಿ, ತನ್ನ ಓದುಗರಿಗೆ, ನನ್ನ ಸಹೋದರ ಸಹೋದರಿಯರೇ, ನೀವು ನಾನಾವಿಧವಾದ ಕಷ್ಟಗಳನ್ನು ಅನುಭವಿಸುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ತಿಳಿಯಿರಿ ಏಕೆಂದರೆ ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ನಿಮಗೆ ತಾಳ್ಮೆಯನ್ನುಂಟು ಮಾಡುತ್ತದೆಂದು ಹೇಳಿದನು, ಈ ಭಾಗವು ಯಾಕೋಬನ ಪ್ರೇಕ್ಷಕರು ನಾನಾವಿಧವಾದ ಕಷ್ಟಗಳನ್ನು ಅನುಭವಿಸುತ್ತಿದ್ದರು ಎಂದು ಸೂಚಿಸುತ್ತದೆ. ಯಾಕೋಬನು ತನ್ನ ಪ್ರೇಕ್ಷಕರಿಗೆ ದೇವರಿಂದ ಜ್ಞಾನವನ್ನು ಪಡೆದುಕೊಳ್ಳುವಂತೆ ಕರೆಕೊಟ್ಟನು (1:5), ಇದರಿಂದಾಗಿ ಅವರು ತಮ್ಮ ಕಷ್ಟಗಳಲ್ಲಿ ಆನಂದವನ್ನು ಹೊಂದಿಕೊಳ್ಳಬಹುದು. ಯಾಕೋಬನ ಪ್ರೇಕ್ಷಕರಲ್ಲಿ ನಂಬಿಕೆಯನ್ನು ಬಿಟ್ಟು ದೂರ ಹೋಗಿದ್ದ ಕೆಲವರು ಇದ್ದರು. ಲೋಕಕ್ಕೆ ಸ್ನೇಹಿತರಾಗುವುದರ ಬಗ್ಗೆ (4:4) ಯಾಕೋಬನು ಎಚ್ಚರಿಕೆ ಕೊಟ್ಟನು, ಯಾಕೋಬನು ವಿಶ್ವಾಸಿಗಳಿಗೆ ದೇವರು ತಮ್ಮನ್ನು ಮೇಲಕ್ಕೆತ್ತುವಂತೆ ತಮ್ಮನ್ನು ತಗ್ಗಿಸಿಕೊಳ್ಳಬೇಕೆಂದು ನಿರ್ದೇಶಿಸಿದನು. ದೇವರ ಮುಂದೆ ತಗ್ಗಿಸಿಕೊಳ್ಳುವುದು ಜ್ಞಾನಕ್ಕಿರುವ ಮಾರ್ಗವೆಂದು ಅವನು ಬೋಧಿಸಿದನು (4:8-10).
ಮುಖ್ಯಾಂಶ
ನಿಜವಾದ ನಂಬಿಕೆ
ಪರಿವಿಡಿ
1. ನಿಜವಾದ ದೈವಭಕ್ತಿಯ ಬಗ್ಗೆ ಯಾಕೋಬನ ನಿರ್ದೇಶನಗಳು — 1:1-27
2. ನಿಜವಾದ ನಂಬಿಕೆಯು ಒಳ್ಳೆಯ ಕಾರ್ಯಗಳಿಂದ ಪ್ರದರ್ಶಿಸಲ್ಪಡುತ್ತದೆ — 2:1-3:12
3. ನಿಜವಾದ ಜ್ಞಾನವು ದೇವರಿಂದ ಬರುತ್ತದೆ — 3:13-5:20
1
ಕಷ್ಟಗಳನ್ನೂ ದುಷ್ಪ್ರೇರಣೆಗಳನ್ನೂ ಕುರಿತದ್ದು
1 ದೇವರಿಗೂ
*ಕರ್ತನಾದ ಯೇಸು ಕ್ರಿಸ್ತನಿಗೂ ದಾಸನಾಗಿರುವ
†ಯಾಕೋಬನು ಅನ್ಯದೇಶಗಳಲ್ಲಿ
‡ಚದುರಿರುವ ಇಸ್ರಾಯೇಲ್ಯರ
§ಹನ್ನೆರಡು ಗೋತ್ರದವರಿಗೂ ಬರೆಯುವುದೇನೆಂದರೆ, “ನಿಮಗೆ ಶುಭವಾಗಲಿ.”
2 ನನ್ನ ಸಹೋದರರೇ, ನೀವು
*ನಾನಾವಿಧವಾದ ಕಷ್ಟಗಳನ್ನು ಅನುಭವಿಸುವಾಗ
†ಅದನ್ನು ಕೇವಲ ಆನಂದಕರವಾದದ್ದೆಂದು ತಿಳಿಯಿರಿ.
3 ಏಕೆಂದರೆ
‡ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ನಿಮಗೆ
§ತಾಳ್ಮೆಯನ್ನುಂಟು ಮಾಡುತ್ತದೆಂದು ನೀವು ತಿಳಿಯಿರಿ.
4 ಆ ತಾಳ್ಮೆಯು ಸಂಪೂರ್ಣವಾಗಿ ನಿಮ್ಮಲ್ಲಿ ಫಲಿಸಲಿ, ಆಗ
*ನೀವು ಸರ್ವಸುಗುಣಸಂಪನ್ನರೂ, ಪರಿಪೂರ್ಣರೂ, ಯಾವುದಕ್ಕೂ ಕಡಿಮೆಯಿಲ್ಲದವರೂ ಆಗುವಿರಿ.
5 †ನಿಮ್ಮಲ್ಲಿ ಯಾರಿಗಾದರು ಜ್ಞಾನದ ಕೊರತೆಯಿರುವುದಾದರೆ ಅವರು ದೇವರನ್ನು ಬೇಡಿಕೊಳ್ಳಲಿ,
‡ಅದು ಅವರಿಗೆ ದೊರಕುವುದು. ಯಾಕೆಂದರೆ ದೇವರು ಹಂಗಿಸದೆ ಎಲ್ಲರಿಗೂ ಉದಾರವಾಗಿ ಕೊಡುವಾತನಾಗಿದ್ದಾನೆ.
6 ಆದರೆ ದೇವರ ಬಳಿ ಬೇಡುವವನು
§ಸ್ವಲ್ಪವೂ ಸಂದೇಹಪಡದೆ
*ನಂಬಿಕೆಯಿಂದ ಬೇಡಿಕೊಳ್ಳಲಿ. ಸಂದೇಹಪಡುವವನು
†ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ಅಲೆಯಂತೆ ಅತ್ತಿತ್ತ ಅಲೆಯುತ್ತಿರುತ್ತಾನೆ.
7 ಇಂಥವನು ತಾನು ಕರ್ತನಿಂದ ಬೇಡಿಕೊಂಡಿದ್ದೆಲ್ಲವನ್ನು ಹೊಂದುವೆನೆಂದು ಭಾವಿಸದೆ ಇರಲಿ.
8 ಏಕೆಂದರೆ ಅವನು
‡ಎರಡು ಮನಸ್ಸುಳ್ಳವನು, ತನ್ನ ನಡತೆಯಲ್ಲಿ ಚಂಚಲನಾಗಿದ್ದಾನೆ.
9 ದೀನಸ್ಥಿತಿಯಲ್ಲಿರುವ ಸಹೋದರನು ತಾನು ಉನ್ನತ ಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ.
10 §ಐಶ್ವರ್ಯವಂತನಾದ ಸಹೋದರನು ತಾನು ದೀನಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ; ಏಕೆಂದರೆ ಐಶ್ವರ್ಯವಂತನು
*ಹುಲ್ಲಿನ ಹೂವಿನಂತೆ ಗತಿಸಿ ಹೋಗುವನು.
11 †ಸೂರ್ಯನು ಉದಯಿಸಿದ ಮೇಲೆ ಸುಡುವ ಬಿಸಿಲಿಗೆ ಹುಲ್ಲು ಬಾಡಿ, ಹೂವು ಉದುರಿ ಅದರ ರೂಪದ ಸೊಗಸು ನಾಶವಾಗುತ್ತದೆ; ಹಾಗೆಯೇ ಐಶ್ವರ್ಯವಂತನು ತನ್ನ ಪ್ರಯತ್ನಗಳಲ್ಲಿ ಕುಂದಿಹೋಗುವನು.
12 ‡ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತನು
§ತನ್ನನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದಂತೆ
*ಜೀವದ ಕಿರೀಟವನ್ನು ಹೊಂದುವನು.
13 ಯಾರಾದರೂ ಶೋಧನೆಗೆ ಪ್ರೇರೇಪಿಸಲ್ಪಡುವಾಗ “ಈ ಪ್ರೇರಣೆಯು ತನಗೆ ದೇವರಿಂದ ಉಂಟಾಯಿತೆಂದು” ಹೇಳಬಾರದು. ಏಕೆಂದರೆ ದೇವರು ಕೆಟ್ಟದ್ದಕ್ಕೆ ಪ್ರೇರಣೆ ನೀಡುವವನಲ್ಲ. ಮತ್ತು ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸಿ ಶೋಧಿಸುವುದೂ ಇಲ್ಲ.
14 ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಗಳಿಂದ ಸೆಳೆಯಲ್ಪಟ್ಟು ಮರುಳುಗೊಂಡವನಾಗಿ ಶೋಧಿಸಲ್ಪಡುತ್ತಾನೆ.
15 ಆ ಮೇಲೆ
†ದುರಾಶೆಯು ಗರ್ಭಧರಿಸಿ ಪಾಪವನ್ನು ಹೆರುತ್ತದೆ. ಪಾಪವು
‡ಪೂರ್ಣವಾಗಿ ಬೆಳೆದು ಮರಣವನ್ನು ತರುತ್ತದೆ.
16 ನನ್ನ ಪ್ರಿಯ ಸಹೋದರರೇ, ಮೋಸಹೋಗಬೇಡಿರಿ.
17 §ಎಲ್ಲಾ ಒಳ್ಳೆಯ ವರಗಳು ಮತ್ತು ಪರಿಪೂರ್ಣವಾದ ವರಗಳು ಮೇಲಿನಿಂದ ಬಂದವುಗಳೇ, ಅವು
*ಸಕಲ ವಿಧವಾದ ಬೆಳಕಿಗೆ ಮೂಲಕರ್ತನಾದ ದೇವರಿಂದ ಇಳಿದು ಬರುತ್ತವೆ;
†ಆತನು ನೆರಳಿನಂತೆ
‡ಬದಲಾಗುವವನಲ್ಲ, ಚಂಚಲಚಿತ್ತನೂ ಅಲ್ಲ.
18 ದೇವರು
§ತನ್ನ ಸುಚಿತ್ತದ ಪ್ರಕಾರ ಸತ್ಯವಾಕ್ಯದ ಮೂಲಕ ಜೀವಕೊಟ್ಟಿವುದರಿಂದ
*ನಾವು ಆತನ ಸರ್ವ ಸೃಷ್ಟಿಯಲ್ಲಿ ಪ್ರಥಮ ಫಲವಾದೆವು.
ದೇವರ ವಾಕ್ಯವನ್ನು ಕೇಳಿ ಅದನ್ನು ಅನುಸರಿಸುವ ವಿಧಾನ
19 †ನನ್ನ ಪ್ರಿಯ ಸಹೋದರರೇ, ನೀವು ಇದನ್ನು ಚೆನ್ನಾಗಿ ತಿಳಿದುಕೊಳ್ಳಿರಿ, ಪ್ರತಿಯೊಬ್ಬನೂ
‡ಕಿವಿಗೊಡುವುದರಲ್ಲಿ ಚುರುಕಾಗಿಯೂ,
§ಮಾತನಾಡುವುದರಲ್ಲಿ ನಿಧಾನವಾಗಿಯೂ ಮತ್ತು
*ಕೋಪಿಸುವುದರಲ್ಲಿ ನಿಧಾನವಾಗಿಯೂ ಇರಲಿ.
20 ಏಕೆಂದರೆ ಮನುಷ್ಯನು ಕೋಪಗೊಂಡಾಗ ದೇವರು ಬಯಸುವ ನೀತಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
21 ಆದಕಾರಣ
†ಎಲ್ಲಾ ನೀಚತನವನ್ನೂ, ಎಲ್ಲಾ ದುಷ್ಟತನವನ್ನೂ ತೆಗೆದುಹಾಕಿ ಮನಸ್ಸಿನೊಳಗೆ ಬೇರೂರಿರುವ ದೇವರ ವಾಕ್ಯವನ್ನು ನಮ್ರತೆಯಿಂದ ಸ್ವೀಕರಿಸಿರಿ.
‡ಅದು ನಿಮ್ಮ ಆತ್ಮಗಳನ್ನು ರಕ್ಷಿಸುವುದಕ್ಕೆ ಸಾಮರ್ಥ್ಯವುಳ್ಳದ್ದಾಗಿರುತ್ತದೆ.
22 ದೇವರ ವಾಕ್ಯದ ಪ್ರಕಾರ ನಡೆಯುವವರಾಗಿರಿ, ಅದನ್ನು ಕೇವಲ
§ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳಬೇಡಿರಿ.
23 ಯಾವನಾದರೂ ವಾಕ್ಯವನ್ನು ಕೇಳುವವನಾಗಿದ್ದು ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಸಹಜ ಮುಖವನ್ನು ನೋಡಿದ ಮನುಷ್ಯನಂತಿರುವನು.
24 ಏಕೆಂದರೆ ಇವನು ತನ್ನನ್ನು ತಾನೇ ನೋಡಿ ನಂತರ ತಾನು ಹೀಗಿದ್ದೇನೆಂಬುದನ್ನು ಆ ಕ್ಷಣವೇ ಮರೆತುಬಿಡುವನು.
25 ಆದರೆ
*ಬಿಡುಗಡೆಯನ್ನು ಉಂಟುಮಾಡುವ ಪರಿಪೂರ್ಣವಾದ ಧರ್ಮಶಾಸ್ತ್ರವನ್ನು ಲಕ್ಷ್ಯಕೊಟ್ಟು ಓದಿ, ಮನನ ಮಾಡಿ ಅದನ್ನು ಅನುಸರಿಸುವವನು ವಾಕ್ಯವನ್ನು ಕೇಳಿ ಮರೆತು ಹೋಗದೆ ಅದರ ಪ್ರಕಾರ ನಡೆಯುತ್ತಾ
†ತನ್ನ ನಡತೆಯಿಂದ, ಕ್ರಿಯೆಗಳಿಂದ ಧನ್ಯನಾಗುವನು.
26 ತನ್ನನ್ನು ಸದ್ಭಕ್ತನೆಂದೆಣಿಸಿಕೊಳ್ಳುವ ಯಾವನಾದರೂ
‡ತನ್ನ ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳದೆ ತನ್ನ ಹೃದಯವನ್ನು ಮೋಸಗೊಳಿಸುವವನಾದರೆ ಅವನ ಭಕ್ತಿಯು ವ್ಯರ್ಥವಾಗಿದೆ.
27 ಸಂಕಟದಲ್ಲಿ ಬಿದ್ದಿರುವ
§ದಿಕ್ಕಿಲ್ಲದವರನ್ನೂ, ವಿಧವೆಯರನ್ನೂ ಪರಾಂಬರಿಸಿ ತನಗೆ
*ಇಹಲೋಕದ ದೋಷವು ಹತ್ತದಂತೆ ತನ್ನನ್ನು ತಾನು ಕಾಪಾಡಿಕೊಳ್ಳುವುದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ, ನಿರ್ಮಲವೂ ಆಗಿರುವ ಭಕ್ತಿ.